ಮೇ.18ಕ್ಕೆ ಬಿಡುಗಡೆಯಾಗಲಿದೆ ರೆನಾಲ್ಟ್ ಟ್ರೈಬರ್ AMT : ಗ್ರಾಹಕರನ್ನು ಸೆಳೆಯುತ್ತಿದೆ ಫ್ಯಾಮಿಲಿ ಕಾರ್

0

ನವದೆಹಲಿ : ರೆನಾಲ್ಟ್ ಟ್ರೈಬರ್ ಭಾರತೀಯ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಅದ್ರಲ್ಲೂ ಕಳೆದ ಬಾರಿಯಷ್ಟೇ ಬಿಡುಗಡೆಯಾಗಿದ್ದ ಟ್ರೈಬರ್ ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿತ್ತು.

ಕಳೆದ ಮಾರ್ಚ್ 2020ರಲ್ಲಿ ಗರಿಷ್ಠ ಮಾರಾಟ ದಾಖಲೆಯನ್ನೂ ನಿರ್ಮಿಸಿತ್ತು. ಈ ಮೂಲಕ ರೆನಾಲ್ಟ್ ಟ್ರೈಬರ್ ತನ್ನದೇ ಕಂಪನಿಯ ಕ್ವಿಡ್ ಕಾರಿನ ಮಾರಾಟವನ್ನು ಹಿಂದಿಕ್ಕಿದ ಹೊಸ ದಾಖಲೆಯನ್ನು ಬರೆದಿತ್ತು.

ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಾದ ಲಾಕ್‌ಡೌನ್ ಕಾರಣ ಎಲ್ಲವೂ ಅದಲು ಬದಲಾಗಿ ಹೋಯಿತು. ಇದೀಗ ಮೇ.18ಕ್ಕೆ ರೆನಾಲ್ಟ್ ಟ್ರೈಬರ್ AMT ಕಾರು ಬಿಡುಗಡೆಯಾಗುತ್ತಿದೆ.

ಕಂಪೆನಿ ಮೇ 18ರಿಂದ ರೆನಾಲ್ಟ್ ಟ್ರಬರ್ AMT ಕಾರು ಬುಕ್ಕಿಂಗ್ ಕೂಡ ಆರಂಭಿಸುತ್ತಿದೆ. ಕಳೆದ ಆಟೋ ಎಕ್ಸ್ಫೋದಲ್ಲಿ ರೆನಾಲ್ಟ್ ಟ್ರಬರ್ AMT ಮಾಡೆಲ್ ಪರಿಚಯಿಸಲಾಗಿತ್ತು.

ಎಪ್ರಿಲ್ ಅಂತ್ಯಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಿಡುಗಡೆ ವಿಳಂಭವಾಗಿದೆ.AMT ಕಾರಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, LED DRLs, ಮುಂಭಾಗದ ಗ್ರಿಲ್ ಸೇರಿದಂತೆ ಹಲವು ಬದಲಾವಣೆಗಳು ಈ ಕಾರಿನಲ್ಲಿದೆ.

ರೆನಾಲ್ಟ್ ಟ್ರೈಬರ್ AMT ಕಾರು 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 95bhp ಪವರ್ ಸಾಮರ್ಥ್ಯ ಹೊಂದಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ರೆನಾಲ್ಟ್ ಟ್ರೈಬರ್ ಕಾರಿನ ಬೆಲೆ 4.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದ್ದ ಗರಿಷ್ಠ 6.82 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಹಿಂದಿನ ವರ್ಷನ್ ಗೆ ಹೋಲಿಸಿದ್ರೆ ಹೊಸ ಟ್ರೈಬರ್ AMT ಕಾರು ಗ್ರಾಹಕರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಮಾತ್ರವಲ್ಲ ಕಾರಿನ ಬೆಲೆಯಲ್ಲಿಯೂ 50,000 ರೂಪಾಯಿ ಹೆಚ್ಚಳವಾಗಲಿದೆ.

Leave A Reply

Your email address will not be published.