Royal Enfield EV: ಒಂದು ಚಾರ್ಜ್ 154 ಕಿಮೀ ಮೈಲೇಜ್! ರಸ್ತೆಗಿಳಿದ ರಾಯಲ್ ಎನ್ಫೀಲ್ಡ್ ಇವಿ, ಬೆಲೆ ಎಷ್ಟು ಗೊತ್ತಾ?
BaaS (Battery-as-a-Service) ಮಾದರಿಯನ್ನು ಆರಿಸಿಕೊಂಡರೆ ಆರಂಭಿಕ ಖರೀದಿ ದರ ಬರೋಬ್ಬರಿ 80 ಸಾವಿರ ರೂಪಾಯಿ ಕಡಿಮೆಯಾಗಲಿದೆ! ಆದರೆ, ಬ್ಯಾಟರಿ ಬಳಕೆಗೆ ಪ್ರತ್ಯೇಕವಾಗಿ ಮಾಸಿಕ ಚಂದಾದಾರಿಕೆ (Subscription fee) ಪಾವತಿಸಬೇಕಾಗುತ್ತದೆ

ಬುಲೆಟ್ ಪ್ರಿಯರು ಹಲವು ಸಮಯಗಳಿಂದ ಕಾಯುತ್ತಿದ್ದ ರಾಯಲ್ ಎಲ್ಫೀಲ್ಡ್ ಇವಿ ಬೈಕ್ ಕೊನೆಗೂ ರಸ್ತೆಗೆ ಇಳಿದಿದೆ. ರಾಯಲ್ ಎನ್ಫೀಲ್ಡ್ (Royal Enfield) ತನ್ನ ಬಹುನಿರೀಕ್ಷಿತ ಹೊಸ ಎಲೆಕ್ಟ್ರಿಕ್ ಬೈಕ್ ‘ಫ್ಲೈಯಿಂಗ್ ಫ್ಲೀ ಸಿ6’ (Flying Flea C6) ಭಾರತದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಲ್ಲಿ ಅಧಿಕೃತವಾಗಿ ವಿತರಣೆ ಆರಂಭಿಸಿದೆ.
ಭಾರತದ ಗ್ರಾಹಕರ ಮನಗೆದ್ದಿರುವ ರಾಯಲ್ ಎನ್ಫೀಲ್ಡ್ ಇದೀಗ ಇವಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ (BTM Layout) ಕಂಪನಿಯು ತನ್ನ ಪ್ರಮುಖ ಕೇಂದ್ರೀಯ ಸೇವಾ ಹಬ್ ಅನ್ನು ಸ್ಥಾಪಿಸಿದ್ದು, ಗ್ರಾಹಕರಿಗೆ ಬೈಕ್ ವಿತರಿಸುತ್ತಿದೆ. ಇವಿ ಬೈಕ್ನ ವಿಶೇಷತೆ ಏನು ? ಬೆಲೆ ಎಷ್ಟು ಅನ್ನೋ ಸಂಫೂರ್ಣ ಮಾಹಿತಿ ಇಲ್ಲಿದೆ.
ರಾಯಲ್ ಎನ್ಫೀಲ್ಡ್ ಈ ಇವಿ ಬೈಕ್ ಅನ್ನು ಪ್ರೀಮಿಯಂ ಅರ್ಬನ್ ಮೊಬಿಲಿಟಿ ಶ್ರೇಣಿಯಲ್ಲಿ ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ಎರಡು ಆಯ್ಕೆಗಳನ್ನು ನೀಡಿದೆ.
- ಸ್ಟ್ಯಾಂಡರ್ಡ್ ಮಾಡೆಲ್ ಬೆಲೆ: ₹2.79 ಲಕ್ಷ (ಎಕ್ಸ್-ಶೋರೂಂ, ಬ್ಯಾಟರಿ ಸೇರಿದಂತೆ).
- BaaS ಮಾಡೆಲ್ ಬೆಲೆ: ₹1.99 ಲಕ್ಷ (ಎಕ್ಸ್-ಶೋರೂಂ).
ನೀವು BaaS (Battery-as-a-Service) ಮಾದರಿಯನ್ನು ಆರಿಸಿಕೊಂಡರೆ ಆರಂಭಿಕ ಖರೀದಿ ದರ ಬರೋಬ್ಬರಿ 80 ಸಾವಿರ ರೂಪಾಯಿ ಕಡಿಮೆಯಾಗಲಿದೆ! ಆದರೆ, ಬ್ಯಾಟರಿ ಬಳಕೆಗೆ ಪ್ರತ್ಯೇಕವಾಗಿ ಮಾಸಿಕ ಚಂದಾದಾರಿಕೆ (Subscription fee) ಪಾವತಿಸಬೇಕಾಗುತ್ತದೆ
ರಾಯಲ್ ಎನ್ಫೀಲ್ಡ್ ಇವಿ ಬೈಕ್ : ಬ್ಯಾಟರಿ ಸಾಮರ್ಥ್ಯ ಮತ್ತು ಮೈಲೇಜ್ (Range)
- ಫ್ಲೈಯಿಂಗ್ ಫ್ಲೀ ಸಿ6 ಬೈಕ್ ಕೇವಲ 124 ಕೆಜಿ ತೂಕ ಹೊಂದಿದ್ದು, ರಾಯಲ್ ಎನ್ಫೀಲ್ಡ್ ಇತಿಹಾಸದಲ್ಲೇ ಅತ್ಯಂತ ಹಗುರವಾದ ಬೈಕ್ ಎನಿಸಿಕೊಂಡಿದೆ.
- ಫೀಚರ್ಸ್ : ತಾಂತ್ರಿಕ ಮಾಹಿತಿ (Specifications)
- ಬ್ಯಾಟರಿ ಸಾಮರ್ಥ್ಯ : 3.91 kWh ಲೀಥಿಯಂ-ಅಯಾನ್ ಬ್ಯಾಟರಿ
- ಮೋಟರ್ ಪವರ್ : 15.4 kW ಪೀಕ್ ಪವರ್ (20.6 bhp ಮತ್ತು 60 Nm ಟಾರ್ಕ್)
- ಗರಿಷ್ಠ ವೇಗ (Top Speed)ಗಂಟೆಗೆ 115 ಕಿಲೋ ಮೀಟರ್
- ರ್ಮೈಲೇಜ್ (IDC Range)ಸಿಂಗಲ್ ಚಾರ್ಜ್ಗೆ 154 ಕಿಲೋಮೀಟರ್
- ವೇಗೋತ್ಕರ್ಷ : (0-60 kmph)ಕೇವಲ 3.7 ಸೆಕೆಂಡುಗಳು
- ಚಾರ್ಜಿಂಗ್ ಸಮಯ : 20% ರಿಂದ 80% ಚಾರ್ಜ್ ಆಗಲು ಕೇವಲ 60 ನಿಮಿಷ ಸಾಕು
Also Read : ಲೈಸೆನ್ಸ್ ಬೇಡ, ರಿಜಿಸ್ಟ್ರೇಷನ್ ಬೇಡ: ಕಡಿಮೆ ಬೆಲೆಯ 5 ಇ-ಸ್ಕೂಟರ್ಗಳು
ರಾಯಲ್ ಎನ್ಫೀಲ್ಡ್ ಇವಿ ಬೈಕ್ : ಹೈಟೆಕ್ ಫೀಚರ್ಗಳ ಧಮಾಕಾ
ಹಳೇ ಕಾಲದ ಗಿರ್ಡರ್ ಫೋರ್ಕ್ (Girder Fork) ಸಸ್ಪೆನ್ಷನ್ ಹೊಂದಿರುವ ಈ ಬೈಕ್ ಲುಕ್ನಲ್ಲಿ ಕ್ಲಾಸಿಕ್ ಆಗಿದ್ದರೂ, ಫೀಚರ್ಗಳಲ್ಲಿ ಸಖತ್ ಹೈಟೆಕ್ ಆಗಿದೆ:
- ಟಚ್ಸ್ಕ್ರೀನ್ ಡಿಸ್ಪ್ಲೇ: 3.5 ಇಂಚಿನ ದುಂಡಗಿನ ಕನೆಕ್ಟೆಡ್ ಕಲರ್ TFT ಟಚ್ಸ್ಕ್ರೀನ್ ಹೊಂದಿದೆ. ಇದರಲ್ಲಿ ಗೂಗಲ್ ಮ್ಯಾಪ್ಸ್ ಇಂಟಿಗ್ರೇಶನ್, ಮ್ಯೂಸಿಕ್ ಕಂಟ್ರೋಲ್ ಹಾಗೂ ಕಾಲ್/ಎಸ್ಎಮ್ಎಸ್ ಅಲರ್ಟ್ ಸಿಗಲಿದೆ.
- ಸುರಕ್ಷತೆ: ಲೀನ್-ಸೆನ್ಸಿಟಿವ್ ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಡ್ಯುಯಲ್ ಚಾನೆಲ್ ABS ಬ್ರೇಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ.
- ರೈಡಿಂಗ್ ಮೋಡ್ಸ್: ಇಕೋ, ರೇನ್, ಟೂರ್, ಪರ್ಫಾರ್ಮೆನ್ಸ್ ಮತ್ತು ಕಸ್ಟಮ್ ಸೇರಿ ಒಟ್ಟು 5 ರೈಡಿಂಗ್ ಮೋಡ್ಗಳಿವೆ.
- ಇನ್ನೂ ಏನೇನಿದೆ ? ಇವಿ ಬೈಕ್ ಅನ್ನು ವಿಶಿಷ್ಟವಾಗಿ ವಿನ್ಯಾಸ ಮಾಡಲಾಗಿದ್ದು, ಗ್ರಾಹಕರಿಗೆ ಹೆಚ್ಚಿನ ಫೀಚರ್ಸ್ಗಳನ್ನು ನೀಡಲಾಗಿದೆ. ಅದ್ರಲ್ಲೂ 15W ವೈರ್ಲೆಸ್ ಸ್ಮಾರ್ಟ್ಫೋನ್ ಚಾರ್ಜರ್ ಇದ್ದು, 27W ಯುಎಸ್ಬಿ-ಸಿ ಪೋರ್ಟ್ ಸೌಲಭ್ಯ ಒದಗಿಸಲಾಗಿದೆ. ಅಲ್ಲದೇ ಕ್ರೂಸ್ ಕಂಟ್ರೋಲ್ ಮತ್ತು ರಿವರ್ಸ್/ಕ್ರಾಲ್ ಮೋಡ್ (Crawl Mode) ಇದರಲ್ಲಿದೆ.
Also Read : ಕಾರು ಖರೀದಿಸುವವರಿಗೆ ಗುಡ್ ನ್ಯೂಸ್! ಮಹೀಂದ್ರಾ EV ಮೇಲೆ ಭರ್ಜರಿ ಡಿಸ್ಕೌಂಟ್
ರಾಯಲ್ ಎನ್ಫೀಲ್ಡ್ ಇವಿ ಬೈಕ್ ಬುಕಿಂಗ್ ಮಾಡುವುದು ಹೇಗೆ ?
ಬೆಂಗಳೂರಿನಲ್ಲಿ ಕಂಪನಿಯು ತನ್ನ ಪ್ರಥಮ ಪ್ರತ್ಯೇಕ ‘ಫ್ಲೈಯಿಂಗ್ ಫ್ಲೀ ಗ್ಯಾಲರಿ’ ಶೋರೂಮ್ ಅನ್ನು ತೆರೆದಿದ್ದು, ಬುಕಿಂಗ್ ಈಗಾಗಲೇ ಚಾಲ್ತಿಯಲ್ಲಿದೆ. ಆಸಕ್ತ ಗ್ರಾಹಕರು ಅಧಿಕೃತ ವೆಬ್ಸೈಟ್ ಅಥವಾ ಬೆಂಗಳೂರಿನ ಗ್ಯಾಲರಿಗೆ ಭೇಟಿ ನೀಡಿ ಟೆಸ್ಟ್ ರೈಡ್ ಪಡೆದು ಕಾಯ್ದಿರಿಸಬಹುದಾಗಿದೆ. ಸದ್ಯಕ್ಕೆ ಇದು ಸ್ಟಾರ್ಮ್ ಬ್ಲ್ಯಾಕ್ ಮತ್ತು ಫ್ಲೀ ಗ್ರೀನ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
royal enfield flying flea c6 electric bike launched price range bengaluru



