ಕೋಟ : ದೇವರ ದರ್ಶನ ಪಡೆದು ಮರಳುವಾಗ ದುರಂತ : ಕಾರು ಹರಿದು ಬ್ರಹ್ಮಾವರದ ವ್ಯಕ್ತಿ ಸಾ*ವು – Vedio
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು ಮೂಲದ ಸತೀಶ್ ಆಚಾರ್ (45) ಎಂಬವರೇ ಮೃತಪಟ್ಟವರು. ಕೋಟದಲ್ಲಿರುವ ಅಮೃತೇಶ್ವರಿ ದೇವಿಯ ದರ್ಶನ ಪಡೆದು ಅಲ್ಲಿಂದ ಹಾಡಿಕೆರೆ ದೇವಸ್ಥಾನಕ್ಕೆ ತೆರಳುವ ಸಲುವಾಗಿ ಸತೀಶ್ ಆಚಾರ್ ಹೆದ್ದಾರಿ ದಾಟುತ್ತಿದ್ದರು.
ಕೋಟ: ದೇವಸ್ಥಾನಕ್ಕೆ ನಡೆದುಕೊಂಡು ಹೋಗಿ ದೇವರ ದರ್ಶನ ಮುಗಿಸಿ ವಾಪಾಸಾಗುತ್ತಿದ್ದ ವ್ಯಕ್ತಿಯೋರ್ವ ಹೆದ್ದಾರಿ ದಾಟುವಾಗ ಕಾರು ಢಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಸರ್ಕಲ್‌ನಲ್ಲಿ ಭಾನುವಾರ ಸಂಜೆ ನಡೆದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು ಮೂಲದ ಸತೀಶ್ ಆಚಾರ್ (45) ಎಂಬವರೇ ಮೃತಪಟ್ಟವರು. ಕೋಟದಲ್ಲಿರುವ ಅಮೃತೇಶ್ವರಿ ದೇವಿಯ ದರ್ಶನ ಪಡೆದು ಅಲ್ಲಿಂದ ಹಾಡಿಕೆರೆ ದೇವಸ್ಥಾನಕ್ಕೆ ತೆರಳುವ ಸಲುವಾಗಿ ಸತೀಶ್ ಆಚಾರ್ ಹೆದ್ದಾರಿ ದಾಟುತ್ತಿದ್ದರು.
Also Read : ಕೋಟ: ಐರೋಡಿಯ ಯುವತಿಗೆ ಸರ್ಕಾರಿ ಕೆಲಸದ ಆಮಿಷ; ಫೋನ್ ಪೇ, ಗೂಗಲ್ ಪೇ ಮೂಲಕ ₹10.83 ಲಕ್ಷ ಪೀಕಿ ವಂಚಿಸಿದ ಕಿರಾತಕ!
ಕುಂದಾಪುರ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗದಲ್ಲಿ ಚಲಿಸುತ್ತಿದ್ದ ಕಾರು ಸತೀಶ್ ಆಚಾರ್ ಅವರಿಗೆ ಢಿಕ್ಕಿ ಹೊಡೆದಿದೆ. ಅಪಘಾತ ನಡೆಯುತ್ತಿದ್ದಂತೆಯೇ ಸ್ಥಳೀಯರು ಸತೀಶ್ ಆಚಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದ್ದಾರೆ.
ಆದರೆ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಮೊದಲೇ ಅವರು ಸಾವನ್ನಪ್ಪಿದ್ದಾರೆ. ಅಲ್ಲದೇ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಅವರು ಈಗಾಗಲೇ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
Also Read : ಕುಂದಾಪುರದಲ್ಲಿ ‘ಸೇವಾ ಸಂಕಲ್ಪ’: ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ₹93.64 ಲಕ್ಷದ ಆಸರೆ ನೀಡಿದ ಸಂಪತ್ ಶೆಟ್ಟಿ
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೋಟದಲ್ಲಿ ಇಂದು ನಡೆದ ರಸ್ತೆ ಅಪಘಾತದ ಲೈವ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
kota car accident pedestrian Aroor satish achar died



