ಇಂಟರ್‌ನೆಟ್‌ನಲ್ಲಿ ಹವಾ ಎಬ್ಬಿಸಿದ ನ್ಯಾನೊ ಬನಾನಾ ಟ್ರೆಂಡ್: ನಿಮ್ಮ 3D ಫೋಟೋ ಹೀಗೆ ಕ್ರಿಯೇಟ್ ಮಾಡಿ
Nano Banana Trend: ಇಂಟರ್‌ನೆಟ್‌ನಲ್ಲಿ ಯಾವಾಗ ಏನು ವೈರಲ್ ಆಗುತ್ತದೆ ಎಂದು ಹೇಳುವುದು ಬಹಳ ಕಷ್ಟ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಯಾವುದಾದರೂ ಒಂದು ವಿಷಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿರುತ್ತದೆ.
ಇತ್ತೀಚೆಗೆ ಘಿಬ್ಲಿ ಶೈಲಿಯ ಪೋಟೊಗಳು ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಈಗ ಅಂತಹದ್ದೇ ಮತ್ತೊಂದು ಫೋಟೋ ಟ್ರೆಂಡ್ ಸಾಮಾಜಿಕ ಮಾಧ್ಯಮದಲ್ಲಿ ಹೊಸದಾಗಿ ಶುರುವಾಗಿದೆ.
ಅದೇನೆಂದರೆ ನ್ಯಾನೊ ಬನಾನಾ ಫೋಟೋ ಟ್ರೆಂಡ್. ಇನ್ಸ್ಟಾಗ್ರಾಂ, ಎಕ್ಸ್, ವ್ಯಾಟ್ಸ್‌ಅಪ್ ಮೊದಲಾದ ಸೋಷಿಯಲ್ ಮೀಡಿಯಾಗಳಲ್ಲಿ ಈಗ ಈ 3D ಚಿತ್ರಗಳ ಹವಾ ಎದ್ದಿದೆ.
ಗೂಗಲ್‌ನ ಹೊಸ AI ಟೂಲ್ ಆದ ಜೆಮಿನಿ 2.5 ಫ್ಲಾಶ್ ಇಮೇಜ್ ನಿಂದ ಈ ಫೋಟೋಗಳನ್ನು ರಚಿಸಲಾಗುತ್ತಿದೆ. ಅದನ್ನು ಆನ್‌ಲೈನ್ ಕಮ್ಯೂನಿಟಿಯು ತಮಾಷೆಯಾಗಿ ನ್ಯಾನೋ ಬನಾನಾ ಎಂದು ಹೆಸರಿಟ್ಟಿದೆ.
ಸದ್ಯ ಎಲ್ಲರೂ ಈ ಹೊಸ ನ್ಯಾನೋ ಬನಾನಾ ಫೋಟೋ ಕ್ರಿಯೇಟ್ ಮಾಡುವುದರಲ್ಲಿ ಬ್ಯೂಸಿಯಾಗಿದ್ದಾರೆ. ನೀವೂ ನಿಮ್ಮ ಫೋಟೋವನ್ನು ಈ ರೀತಿ ಕ್ರಿಯೇಟ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಬೇಕೆಂದರೆ ಈ ರೀತಿಯಾಗಿ ರಚಿಸಿ.
ನ್ಯಾನೊ ಬನಾನಾ ಫೋಟೋ ಇಷ್ಟೊಂದು ಟ್ರೆಂಡ್ ಆಗಲು ಕಾರಣವಾದರೂ ಏನು?
ನ್ಯಾನೊ ಬನಾನಾ ಟ್ರೆಂಡ್ ಬಹಳ ಬೇಗ ವೈರಲ್ ಆಗಿದೆ. ಏಕೆಂದರೆ ಈ ರೀತಿಯ ಚಿತ್ರಗಳನ್ನು ರಚಿಸುವುದು ಬಹಳ ಸುಲಭವಾಗಿದೆ ಮತ್ತು ಫೋಟೋ ಕೂಡಾ ಅದ್ಭುತವಾಗಿ ಕಾಣುತ್ತದೆ. ಗೂಗಲ್ ಜೆಮಿನಿ 2.5 ಫ್ಲ್ಯಾಶ್ ಇಮೇಜ್ ಯಾವುದೇ ಬಳಕೆದಾರರಿಗೆ ಸ್ಟುಡಿಯೋ-ಗುಣಮಟ್ಟದ 3D ಚಿತ್ರಗಳನ್ನು ಉಚಿತವಾಗಿ ಮತ್ತು ಕೆಲವೇ ಸೆಕೆಂಡುಗಳಲ್ಲಿ ರಚಿಸಲು ಅನುಮತಿಸುತ್ತದೆ.
ಇದನ್ನೂ ಓದಿ: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2025 ಯಾವಾಗ ಪ್ರಾರಂಭ? ಯಾವುದಕ್ಕಿದೆ ಭರ್ಜರಿ ಆಫರ್?
Nano Banana Trend: ನ್ಯಾನೋ ಬನಾನಾ 3D ಫೋಟೋ ರಚಿಸುವುದು ಹೇಗೆ?
– ನ್ಯಾನೋ ಬನಾನಾ 3D ಫೋಟೋ ರಚಿಸಲು ಮೊದಲು Google AI ಸ್ಟುಡಿಯೋ ಅಥವಾ ಜೆಮಿನಿ ಅಪ್ಲಿಕೇಶನ್/ವೆಬ್‌ಸೈಟ್‌ಗೆ ಹೋಗಿ.
– ಈಗ Method ಆರಿಸಿ. ಅಲ್ಲ ನೀವು ಕೇವಲ ಫೋಟೋ, ಕೇವಲ ಟೆಕ್ಸ್ಟ್ ಪ್ರಾಂಪ್ಟ್ ಅಥವಾ ಎರಡನ್ನೂ ಸೇರಿಸಬಹುದು.
– ಇದಾದ ನಂತರ, Google ನ ಆಫೀಷಿಯಲ್ ಪ್ರಾಂಪ್ಟ್ ಅನ್ನು ನಮೂದಿಸಿ.
– ಅಂತಿಮವಾಗಿ, ಜನರೇಟ್ ಮೇಲೆ ಕ್ಲಿಕ್ ಮಾಡಿ.
– ನಂತರ ನಿಮ್ಮ ಚಿತ್ರ ಸಿದ್ಧವಾಗುತ್ತದೆ.
– ನೀವು ಬಯಸಿದ ಫಲಿತಾಂಶವನ್ನು ಪಡೆಯದಿದ್ದರೆ, ಪ್ರಾಂಪ್ಟ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ.
ಇದನ್ನೂ ಓದಿ: ಐಫೋನ್ ಖರೀದಿಗೆ ಇದು ಬೆಸ್ಟ್ ಟೈಮ್! ಐಫೋನ್ 16ರ ಈಗಿನ ಬೆಲೆ ಎಷ್ಟು ಗೊತ್ತಾ?
(Google New AI image Nano Banana Trend what is 3d figurine and how to create)



