ಐಫೋನ್ ಖರೀದಿಗೆ ಇದು ಬೆಸ್ಟ್ ಟೈಮ್! ಐಫೋನ್ 16ರ ಈಗಿನ ಬೆಲೆ ಎಷ್ಟು ಗೊತ್ತಾ?
iPhone 16 Series Price: ಆಪಲ್, ಭಾರತ ಸೇರಿದಂತೆ ಪ್ರಪಂಚದಾದ್ಯಂತ ತನ್ನ ಹೊಸ ಐಫೋನ್ 17 ಸರಣಿಯನ್ನು ಬಿಡುಗಡೆ ಮಾಡಿದೆ.
ಮಂಗಳವಾರ ನಡೆದ ‘ಈವ್ ಡ್ರಾಪಿಂಗ್’ ಕಾರ್ಯಕ್ರಮದಲ್ಲಿ, ಕಂಪನಿಯು ಹೊಸ ಐಫೋನ್ ಅಷ್ಟೇ ಅಲ್ಲದೇ, ಏರ್‌ಪಾಡ್ಸ್ 3 ಪ್ರೊ ಮತ್ತು ಆಪಲ್ ವಾಚ್ ಸೀರಿಸ್ 11 ಅನ್ನು ಸಹ ಬಿಡುಗಡೆ ಮಾಡಿದೆ.
ಪ್ರತಿ ಬಾರಿಯಂತೆ, ಈ ಬಾರಿಯೂ, ಕಂಪನಿಯು ಹೊಸ ಐಫೋನ್ ಮಾದರಿಗಳನ್ನು ಬಿಡುಗಡೆ ಮಾಡಿದ ತಕ್ಷಣ ಹಳೆಯ ಐಫೋನ್‌ನ ಬೆಲೆಗಳನ್ನು ಕಡಿತಗೊಳಿಸಿದೆ.
ಕಂಪನಿಯು ಕಳೆದ ವರ್ಷ ಬಿಡುಗಡೆ ಮಾಡಿದ್ದ ಐಫೋನ್ 16 ಮತ್ತು 16 ಪ್ಲಸ್ ಬೆಲೆಗಳು ಭಾರಿ ಕಡಿಮೆಯಾಗಿವೆ. ನೀವು ಐಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇದು ನಿಮಗೆ ಉತ್ತಮ ಅವಕಾಶವಾಗಿದೆ.
ಹಾಗಾದರೆ ಕಂಪನಿಯು ಐಫೋನ್ 16 ಸರಣಿಯ ಮೊಬೈಲ್ ಬೆಲೆಗಳನ್ನು ಎಷ್ಟು ಕಡಿಮೆ ಮಾಡಿದೆ ಎಂದು ತಿಳಿಯೋಣ…
iPhone 16 Series Price: ಐಫೋನ್ 16 ಸರಣಿ ಮೊಬೈಲ್‌ಗಳ ಹೊಸ ಬೆಲೆಗಳು
ಕಳೆದ ವರ್ಷ ಸುಮಾರು 79,900ರೂ. ಗೆ ಬಿಡುಗಡೆಯಾಗಿದ್ದ ಐಫೋನ್ 16 ರ ಮೂಲ ರೂಪಾಂತರವನ್ನು ಈಗ ನೀವು 69,900 ರೂ. ಗೆ ಖರೀದಿಸಬಹುದಾಗಿದೆ.
ಕಳೆದ ವರ್ಷ ಬಿಡುಗಡೆಯಾದ ಐಫೋನ್ 16 ಪ್ಲಸ್ ರೂಪಾಂತರದ ಬೆಲೆಯು 89,900 ರೂ. ಆಗಿದೆ. ಈಗ ನೀವು ಅದನ್ನು ₹ 79,900 ಗೆ ಖರೀದಿಸಬಹುದು.
ಪ್ಲಸ್ ರೂಪಾಂತರದ 256 GB ಸ್ಟೋರೇಜ್ ಮಾದರಿಯನ್ನು ಸಹ ನೀವು ಸುಮಾರು ₹ 89,900 ಗೆ ಖರೀದಿಸಬಹುದಾಗಿದೆ. ಆದರೆ, ಕಂಪನಿಯು ಐಫೋನ್ 16 ರ 256 GB ರೂಪಾಂತರ ಮತ್ತು 512 GB ರೂಪಾಂತರವನ್ನು ಸ್ಥಗಿತಗೊಳಿಸಿದೆ.
ಐಫೋನ್ 16, ಐಫೋನ್ 16 ಪ್ಲಸ್ ವೈಶಿಷ್ಟ್ಯಗಳು
ಐಫೋನ್ 16 ಸರಣಿಯ ಮೊಬೈಲ್‌ಗಳು 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯನ್ನು ಹೊಂದಿದ್ದರೆ, ಐಫೋನ್ 16 ಪ್ಲಸ್ 6.7-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇಯನ್ನು ಹೊಂದಿದೆ.
2 ಮಾದರಿಗಳು 2,000 ನಿಟ್‌ಗಳ ಗರಿಷ್ಠ ಹೊಳಪು, ಡೈನಾಮಿಕ್ ಐಲ್ಯಾಂಡ್ ಮತ್ತು ಸೆರಾಮಿಕ್ ಶೀಲ್ಡ್ ರಕ್ಷಣೆಯನ್ನು ನೀಡುತ್ತವೆ.
ಈ ಎರಡೂ ಸಾಧನಗಳು 3nm ಆಧಾರಿತ ಆಕ್ಟಾ-ಕೋರ್ Apple A18 ಚಿಪ್‌ಸೆಟ್ ಜೊತೆಗೆ ಸಿಕ್ಸ್-ಕೋರ್ CPU, ಫೈವ್-ಕೋರ್ GPU ಮತ್ತು 16-ಕೋರ್ ನ್ಯೂರಲ್ ಎಂಜಿನ್ ಪ್ರೊಸೆಸ್ಸರ್ ಹೊಂದಿದೆ.
ಇದನ್ನೂ ಓದಿ: ಸ್ಯಾಮ್‌ಸಂಗ್‌ನ ಅತ್ಯಂತ ಅಗ್ಗದ ಫೋನ್ ಗ್ಯಾಲಕ್ಸಿ $25 FE ಬಿಡುಗಡೆ: 4 ಕ್ಯಾಮೆರಾ, AI ತಂತ್ರಜ್ಞಾನ ಇದರ ವೈಶಿಷ್ಟ್ಯ
ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಎರಡೂ ಸಾಧನಗಳು ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿವೆ. ಇದರಲ್ಲಿ 48MP ಪ್ರಾಥಮಿಕ ಲೆನ್ಸ್ ಮತ್ತು ಆಟೋಫೋಕಸ್ ಅನ್ನು ಬೆಂಬಲಿಸುವ 12MP ಅಲ್ಟ್ರಾ-ವೈಡ್ ಕ್ಯಾಮೆರಾ ಸೇರಿವೆ.
ಸೆಲ್ಫಿಗಾಗಿ ಮುಂಭಾಗದಲ್ಲಿ 12MP ಟ್ರೂಡೆಪ್ತ್ ಸೆಲ್ಫಿ ಕ್ಯಾಮೆರಾವಿದೆ. ಎರಡೂ ಸಾಧನಗಳು ವಿಶೇಷ ಸ್ಪೈಟಿಯಲ್ ವೀಡಿಯೊ ರೆಕಾರ್ಡಿಂಗ್, ಇನ್-ಸೆನ್ಸರ್ 2x ಜೂಮ್, ಮ್ಯಾಕ್ರೋ ಛಾಯಾಗ್ರಹಣವನ್ನು ಸಹ ಬೆಂಬಲಿಸುತ್ತವೆ.
ಈ ಎರಡೂ ಐಫೋನ್‌ಗಳು IP68 ಧೂಳು ಮತ್ತು ನೀರಿನ ಪ್ರತಿರೋಧ ರೇಟಿಂಗ್ ಅನ್ನು ಹೊಂದಿವೆ. ಸಂಪರ್ಕಕ್ಕಾಗಿ, ಈ ಎರಡೂ ಸಾಧನಗಳು 5G, 4G LTE, Wi-Fi 6E, ಬ್ಲೂಟೂತ್, GPS, NFC, USB ಟೈಪ್-C ನೊಂದಿಗೆ ಬರುತ್ತವೆ.
ಇದನ್ನೂ ಓದಿ: ಮಾರುಕಟ್ಟೆಗೆ ಬಂದ ಮಿಡ್‌ರೇಂಜ್ ಫೋನ್: ರಿಯ 15ಟಿ 5ಜಿ ಫೋನ್ ಬೆಲೆ ಮತ್ತು ವೈಶಿಷ್ಟ್ಯ
(iPhone 16 Series Price dropped in India know the new price of iPhone 16 and iPhone 16 pluse)



