ಒಂದೇ ದಿನ 11 ಹೊಸ ಕೊರೊನಾ ಕೇಸ್ : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆ

0

ಬೆಂಗಳೂರು : ಎಷ್ಟೇ ಮುನ್ನೆಚ್ಚರಿಕೆಯನ್ನು ಕೈಗೊಳ್ಳುತ್ತಿದ್ದರೂ ಕೂಡ ಕೊರೊನಾ ಮಹಾಮಾರಿಯ ಅಬ್ಬರ ಕಡಿಮೆಯಾಗುತ್ತಿದೆ. ಭಾನುವಾರ ಒಂದೇ ದಿನ ರಾಜ್ಯದಲ್ಲಿ 11 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ.

ಬೆಳಗಾವಿಯಲ್ಲಿ 4, ಬೆಂಗಳೂರಿನಲ್ಲಿ 3, ಕಲಬುರಗಿಯಲ್ಲಿ 2, ಮೈಸೂರು ಮತ್ತು ವಿಜಯಪುರದಲ್ಲಿ ತಲಾ 1 ಪ್ರಕರಣ ದೃಢಪಟ್ಟಿವೆ.

ಬೆಳಗಾವಿಯಲ್ಲಿ ಇದೀಗ ನಾಲ್ವರಿಗೆ ಕೊರೊನಾ ಪ್ರಕರಣ ಪತ್ತೆಯಾಗುತ್ತಲೇ ಕೊರೊನಾ ಪೀಡಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯ ಸೋಂಕಿತನ ಸಂಪರ್ಕದಲ್ಲಿದ್ದ ಇನ್ನೋರ್ವರಿಗೆ ಇಂದು ಕೊರೊನಾ ಸೋಂಕಿರುವುದು ಖಚಿತವಾಗಿದೆ. ಹೀಗಾಗಿ ಮೈಸೂರಿನಲ್ಲಿ ಕೊರೊನಾ ಫೀಡಿತರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.

ಇನ್ನು ಕಲಬುರಗಿಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ವೃದ್ದನ ಸೊಸೆ ಹಾಗೂ ಕೆಲಸದಾಕೆಗೆ ಸೋಂಕು ದೃಢಪಟ್ಟಿದ್ದು, 24 ವರ್ಷದ ಸೊಸೆ ಹಾಗೂ 38 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದ್ದು, ಕಲಬುರಗಿಯಲ್ಲಿ ಆತಂಕ ಹೆಚ್ಚಾಗಿದೆ.

Leave A Reply

Your email address will not be published.