ಬಾಡಿಗೆದಾರರಿಗೆ ಬಂಪರ್ ಆಫರ್: ಇನ್ಮುಂದೆ 10 ತಿಂಗಳ ಅಡ್ವಾನ್ಸ್ ಇಲ್ಲ, ಕೇವಲ 2 ತಿಂಗಳು ಸಾಕು! ಏನಿದು ಹೊಸ ಮಾದರಿ ಬಾಡಿಗೆ ಕಾಯ್ದೆ
ವಸತಿ ಮನೆಗಳಿಗೆ ಗರಿಷ್ಠ 2 ತಿಂಗಳ ಬಾಡಿಗೆಯನ್ನು ಮಾತ್ರ ಭದ್ರತಾ ಠೇವಣಿಯಾಗಿ (Security Deposit) ಪಡೆಯಲು ಅವಕಾಶವಿದೆ. ವಾಣಿಜ್ಯ ಮಳಿಗೆಗಳಿಗೆ ಇದು 6 ತಿಂಗಳ ಮಿತಿಯನ್ನು ಹೊಂದಿರುತ್ತದೆ.

ಬೆಂಗಳೂರು: ದೇಶದಾದ್ಯಂತ ಬಾಡಿಗೆ ಮನೆ ವಿಚಾರದಲ್ಲಿ ಹೊಸ ರೂಲ್ಸ್ ಜಾರಿಯಾಗಿದೆ. ಬಾಡಿಗೆದಾರರು ಹಾಗೂ ಮನೆ ಮಾಲೀಕರ ನಡುವಿನ ಕೆಲವೊಂದು ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಸರಕಾರ ‘ಮಾದರಿ ಬಾಡಿಗೆ ಕಾಯ್ದೆ’ (Model Tenancy Act) ಜಾರಿಗೆ ತರುತ್ತಿದೆ. ಏನಿದು ಹೊಸ ಮಾದರಿ ಬಾಡಿಗೆ ಕಾಯ್ದೆ ಅನ್ನೋ ಕುರಿತ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.
ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ಕಿರಿಕಿರಿ ಹಾಗೂ ಅಡ್ವಾನ್ಸ್ ಹಣದ ಕಿತ್ತಾಟಕ್ಕೆ ಬ್ರೇಕ್ ಹಾಕಲು ಸರ್ಕಾರ ಈ ಹೊಸ ನಿಯಮದಿಂದಾಗಿ ಬೆಂಗಳೂರಿನಂತಹ ನಗರಗಳಲ್ಲಿ ಬಾಡಿಗೆ ಮನೆ ಹುಡುಕುವ ಮಧ್ಯಮ ವರ್ಗದ ಜನರಿಗೆ ದೊಡ್ಡ ರಿಲೀಫ್ ಸಿಗಲಿದೆ.
ಹೊಸ ಮಾದರಿ ಬಾಡಿಗೆ ಕಾಯ್ದೆಯಲ್ಲಿ ಏನಿದೆ ?
ಅಡ್ವಾನ್ಸ್ ಹಣಕ್ಕೆ ಮಿತಿ: ವಸತಿ ಮನೆಗಳಿಗೆ ಗರಿಷ್ಠ 2 ತಿಂಗಳ ಬಾಡಿಗೆಯನ್ನು ಮಾತ್ರ ಭದ್ರತಾ ಠೇವಣಿಯಾಗಿ (Security Deposit) ಪಡೆಯಲು ಅವಕಾಶವಿದೆ. ವಾಣಿಜ್ಯ ಮಳಿಗೆಗಳಿಗೆ ಇದು 6 ತಿಂಗಳ ಮಿತಿಯನ್ನು ಹೊಂದಿರುತ್ತದೆ.
ಲಿಖಿತ ಒಪ್ಪಂದ ಕಡ್ಡಾಯ: ಇನ್ನು ಮುಂದೆ ಮೌಖಿಕ ಮಾತುಕತೆಗೆ ಬೆಲೆಯಿಲ್ಲ. ಪ್ರತಿಯೊಂದು ಬಾಡಿಗೆ ವ್ಯವಹಾರವೂ ಲಿಖಿತ ರೂಪದಲ್ಲಿರಬೇಕು ಮತ್ತು ಅದನ್ನು ‘ಬಾಡಿಗೆ ಪ್ರಾಧಿಕಾರ’ಕ್ಕೆ (Rent Authority) ಕಡ್ಡಾಯವಾಗಿ ಸಲ್ಲಿಸಬೇಕು.
ಬಾಡಿಗೆ ಏರಿಕೆಗೆ ನಿಯಮ: ಮಾಲೀಕರು ತಮಗೆ ಇಷ್ಟ ಬಂದಂತೆ ಬಾಡಿಗೆ ಹೆಚ್ಚಿಸುವಂತಿಲ್ಲ. ಬಾಡಿಗೆ ಪರಿಷ್ಕರಿಸುವ ಕನಿಷ್ಠ 3 ತಿಂಗಳ ಮುಂಚೆಯೇ ಬಾಡಿಗೆದಾರರಿಗೆ ನೋಟಿಸ್ ನೀಡುವುದು ಕಡ್ಡಾಯ.
Also Read : ಕರ್ನಾಟಕದಲ್ಲಿ ಬಿಸಿಲ ಬೇಗೆ : ಬೆಂಗಳೂರಿನಲ್ಲಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ
ಪ್ರತ್ಯೇಕ ನ್ಯಾಯಮಂಡಳಿ: ಬಾಡಿಗೆ ವಿಷಯದಲ್ಲಿ ವಿವಾದ ಉಂಟಾದರೆ ಸಿವಿಲ್ ಕೋರ್ಟ್ ಅಲೆದಾಡುವ ಅಗತ್ಯವಿಲ್ಲ. ಶೀಘ್ರ ಪರಿಹಾರಕ್ಕಾಗಿ ಪ್ರತ್ಯೇಕ ‘ಬಾಡಿಗೆ ನ್ಯಾಯಾಲಯ’ಗಳನ್ನು ಸ್ಥಾಪಿಸಲಾಗುತ್ತದೆ.
ಬಾಡಿಗೆದಾರರಿಗೆ ಏನೆಲ್ಲಾ ಲಾಭ?
ಬೆಂಗಳೂರಿನಲ್ಲಿ 10 ತಿಂಗಳ ಬಾಡಿಗೆಯನ್ನು ಅಡ್ವಾನ್ಸ್ ಕೇಳುವ ಪದ್ಧತಿಗೆ ಈ ಕಾಯ್ದೆ ಮುಕ್ತಿ ನೀಡಲಿದೆ. ಮಾಲೀಕರು ಮನೆಗೆ ಭೇಟಿ ನೀಡುವ 24 ಗಂಟೆ ಮುಂಚಿತವಾಗಿ ಮಾಹಿತಿ ನೀಡಬೇಕು. ಅಲ್ಲದೆ, ಯಾವುದೇ ಕಾರಣಕ್ಕೂ ನೀರು ಅಥವಾ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತಿಲ್ಲ.
ಮನೆ ಮಾಲೀಕರಿಗೆ ಸಿಗುವ ರಕ್ಷಣೆ ಏನು?
ಒಪ್ಪಂದ ಮುಗಿದ ನಂತರವೂ ಬಾಡಿಗೆದಾರ ಮನೆ ಖಾಲಿ ಮಾಡದಿದ್ದರೆ, ಮಾಲೀಕರು ದಂಡ ವಸೂಲಿ ಮಾಡಬಹುದು. ಮೊದಲ ಎರಡು ತಿಂಗಳು ಬಾಡಿಗೆಯ 2 ಪಟ್ಟು ಮತ್ತು ನಂತರ 4 ಪಟ್ಟು ಬಾಡಿಗೆಯನ್ನು ದಂಡವಾಗಿ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಇದರಿಂದ ಆಸ್ತಿ ಸುರಕ್ಷತೆ ಮತ್ತು ಸಕಾಲಕ್ಕೆ ಬಾಡಿಗೆ ಪಾವತಿಯ ಭರವಸೆ ಸಿಗಲಿದೆ.
Also Read : ಬಿಎಂಟಿಸಿ, ನಮ್ಮ ಮೆಟ್ರೋ ಪ್ರಯಾಣಕ್ಕೆ ಇನ್ಮುಂದೆ ಒಂದೇ ಸ್ಮಾರ್ಟ್ ಕಾರ್ಡ್ : ಯಾರಿಗೆಲ್ಲ ಲಾಭ ?
ಈ ಕಾಯ್ದೆಯು ಬಾಡಿಗೆ ಮಾರುಕಟ್ಟೆಯನ್ನು ವೃತ್ತಿಪರಗೊಳಿಸಲಿದ್ದು, ಖಾಲಿ ಇರುವ ಮನೆಗಳು ಸುಲಭವಾಗಿ ಬಾಡಿಗೆಗೆ ಲಭ್ಯವಾಗುವಂತೆ ಮಾಡಲಿದೆ.
model tenancy act Karnataka rent rules 2 months advance



