ನಾಡಹಬ್ಬಕ್ಕೂ ತಟ್ಟಿದ ಕೊರೋನಾ ಬಿಸಿ…! ದಸರಾದಲ್ಲಿ ಪಾಲ್ಗೊಳ್ಳುವವರಿಗೆ ಮೆಡಿಕಲ್ ಟೆಸ್ಟ್ ಕಡ್ಡಾಯ

0

ಮೈಸೂರು : ನಾಡಹಬ್ಬ ದಸರಾ ಕರ್ನಾಟಕದ ಸಂಸ್ಕಂತಿ ಹಾಗೂ ಸಂಪ್ರದಾಯದ ದ್ಯೋತಕ. ಲಕ್ಷಾಂತರ ಜನರು ಭಾಗಿಯಾಗುವ ಹಾಗೂ ಅದ್ದೂರಿಯಾಗಿ ಆಚರಿಸಲ್ಪಡುವ ದಸರಾಗೆ ಈ ವರ್ಷ ಕೊರೋನಾ ಕರಿನೆರಳಿನ ಸ್ಪರ್ಷವಾಗಿದೆ. ಹೀಗಾಗಿ ಸರಳ ದಸರಾ ಆಚರಣೆ ಗೆ ಸರ್ಕಾರ ಮುಂದಾಗಿದೆ. ಆದರೆ ಸರಳ ದಸರಾದಲ್ಲೂ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ಸಿಗೋದು ಅನುಮಾನ ಎನ್ನಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೋ ಕಲಾವಿದರಿಗೂ ಕೊರೋನಾ ಟೆಸ್ಟ್ ಕಡ್ಡಾಯಗೊಳಿಸಿ ದಸರಾ ಸಮಿತಿ ಹಾಗೂ ಜಿಲ್ಲಾಢಳಿತ ಆದೇಶ ಹೊರಡಿಸಿದೆ.

ಕೊರೋನಾ ಸಂಕಷ್ಟದಲ್ಲೂ ದಸರಾ ಆಚರಣೆ ಕೈಬಿಡೋದು ಸಾಧ್ಯವಿಲ್ಲ. ಹೀಗಾಗಿ ಕೊರೋನಾ ಸೋಂಕಿನ ಭೀತಿಯ ನಡುವೆಯೂ ಸಂಪ್ರದಾಯದಂತೆ ದಸರಾವನ್ನು ಆಚರಿಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಅದ್ದೂರಿ ಆಚರಣೆಗೆ ಕಡಿವಾಣ ಹಾಕಿದ್ದು, ಸಾಂಸ್ಕಂತಿಕ ಕಾರ್ಯಕ್ರಮಗಳನ್ನು ನಡೆಸಲು ಜಿಲ್ಲಾಡಳಿತ ಹಾಗೂ ದಸರಾ ಸಮಿತಿ ನಿರ್ಧರಿಸಿದೆ. ಆದರೆ ನಿಗದಿತ ಕಾರ್ಯಕ್ರಮದ ಕಲಾವಿದರಿಗೆ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಸಾರ್ವಜನಿಕರಿಗೆ ಕೋವಿಡ್-19 ಪರೀಕ್ಷೆ ಕಡ್ಡಾಯಗೊಳಿಸಿದೆ. ಪರೀಕ್ಷೆಗೆ ಒಳಗಾಗಿ ರಿಪೋರ್ಟ ತಂದರಷ್ಟೇ ಪ್ರವೇಶಾವಕಾಶ ಎಂದು ಆದೇಶಿಸಿದೆ.

ನಿಗದಿತ ಕಾರ್ಯಕ್ರಮಕ್ಕೂ ನಾಲ್ಕು ದಿನ ಮೊದಲು ಕರೋನಾ ಟೆಸ್ಟ್ ಮಾಡಿಸಿ ರಿಪೋರ್ಟ ಸಲ್ಲಿಸುವುದು ಕಡ್ಡಾಯ. ಆದರೆ ದಸರಾ ಪ್ರಯುಕ್ತ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಎಷ್ಟು ಜನರಿಗೆ ಪ್ರವೇಶಾವಕಾಶ ನೀಡಬೇಕು ಎಂಬುದಿನ್ನು ನಿರ್ಧಾರವಾಗಿಲ್ಲ. ಸರ್ಕಾರದ ಅನುಮತಿ ಪಡೆದು ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವ ಬಗ್ಗೆ ನಿರ್ಧರಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಇನ್ನೊಂದೆಡೆ ಸಾರ್ವಜನಿಕವಾಗಿ ನಡೆಯುತ್ತಿದ್ದ ದಸರಾ ಕಾರ್ಯಕ್ರಮಗಳಿಗೂ ಕಡಿವಾಣ ಬೀಳುವ ಸಾಧ್ಯತೆ ಇದ್ದು, ದಸರ ಮಾರುಕಟ್ಟೆ ಸೇರಿದಂತೆ ನಾಡಹಬ್ಬದಲ್ಲಿ ಈ ಭಾರಿ ಏನಿರುತ್ತೆ ಏನಿರಲ್ಲ ಅನ್ನೋದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಈಗಾಗಲೇ ಕಾಡಿನಿಂದ ಬಂದ ಮಾವುತರಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಗಜಪಡೆಯ ತಾಲೀಮು ಆರಂಭಿಸಲಾಗಿದೆ.

ಈಗಾಗಲೇ ಸರ್ಕಾರ ಸರಳ ದಸರಾಗೆ ತೀರ್ಮಾನ ಕೈಗೊಂಡಿದ್ದರೂ ದಸರಾ ಆಚರಣೆಗೆ ಸಾವಿರಾರು ಜನ ಸೇರೋದು ಅನಿವಾರ್ಯ ಎಂಬ ಸ್ಥಿತಿ ಇದ್ದು, ದಸರಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಕೊರೋನಾ ಟೆಸ್ಟ್ ಕಡ್ಡಾಯ ಎಂಬ ತೀರ್ಮಾನಕ್ಕೆ ಸರ್ಕಾರಕ್ಕೆ ಬರಲಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ದಸರಾ ಸಂಭ್ರಮಕ್ಕೆ ಕೊರೋನಾ ಕಡಿವಾಣ ಹಾಕುವಂತ ಸ್ಥಿತಿ ಎದುರಾಗಿದೆ.

Leave A Reply

Your email address will not be published.