Biggboss: ಬಿಗ್ ಬಾಸ್ ಮನೆಯಲ್ಲಿ ಮುಂದುವರಿದ ಹೈಡ್ರಾಮಾ….! ಕುಚಿಕುಗಳ ನಡುವೆ ಬಿರುಕು…ಕಣ್ಣೀರಿಟ್ಟ ಸಂಬರಗಿ…!!

ಬಿಗ್ ಬಾಸ್ ಸೀಸನ್ 8 ರ ಸೆಕೆಂಡ್ ಇನ್ನಿಂಗ್ಸ್ ಶೋನಲ್ಲಿ ಪರಸ್ಪರ ಜಗಳ, ಕಾಲೆಳೆಯೋದು ಹಾಗೂ ಕಣ್ಣೀರು ಕಾಮನ್ ಎಂಬಂತಾಗಿದ್ದು,ಸದಾ ಇನ್ನೊಬ್ಬರಿಗೆ ಟಾಂಟ್ ಕೊಟ್ಟು, ಅಡ್ವೈಸ್ ಕೊಡುತ್ತಾ ಓಡಾಡುತ್ತಿದ್ದ ಪ್ರಶಾಂತ್ ಸಂಬರಗಿ ಕಣ್ಣೀರು ಹಾಕಿ ಅಚ್ಚರಿ ಮೂಡಿಸಿದ್ದಾರೆ.

ಬಿಗ್ ಬಾಸ್ ನಲ್ಲಿ ಮಹಿಳಾ ಕ್ಯಾಪ್ಟನ್ ಆಗುತ್ತಿದ್ದಂತೆ ಪ್ರಶಾಂತ್ ಸಂಬರಗಿ, ಚಂದ್ರಚೂಡ್ ಹಾಗೂ ಶಮಂತ್ ಒಂದು ಟೀಂ ನಂತಾಗಿದ್ದರು. ಆದರೆ ನಿನ್ನೆ ಟಾಸ್ಕ್ ವಿಚಾರಕ್ಕೆ ಪ್ರಶಾಂತ್ ಸಂಬರಗಿ ಹಾಗೂ ಚಂದ್ರಚೂಡ್ ನಡುವೆ ಮಾತಿನ ಕದನ ನಡೆದಿದೆ.

ನೀನು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತೀಯಾ. ಆದರೆ ಟಾಸ್ಕ್ ನಲ್ಲಿ ಅನ್ಯಾಯವಾದರೇ ಸುಮ್ಮನೇ ಕೂತಿದ್ದಿ ಎಂದು ಸಂಬರಗಿ, ಚಂದ್ರಚೂಡ್ ಗೆ ತಿವಿದರು. ಆದರೆ ಇದಕ್ಕೆ ಕ್ಯಾರೆ ಎನ್ನದ ಚಂದ್ರಚೂಡ್ ನಿನ್ನ ವರ್ತನೆ ಬದಲಾಯಿಸಿಕೋ.

ಎಲ್ಲರೂ ನಿನ್ನನ್ನು ಜೋಕರ್ ನಂತೆ ನೋಡುತ್ತಿದ್ದಾರೆ ಎಂದೆಲ್ಲ ಬುದ್ಧಿ ಹೇಳಿದರು. ಆದರೆ ಇದೇ ವಿಚಾರಕ್ಕೆ ತುಂಬ ನೊಂದುಕೊಂಡಂತೆ ಕಂಡುಬಂದ ಪ್ರಶಾಂತ್ ಸಂಬರಗಿ ವೈಷ್ಣವಿ ಬಳಿ ತಮ್ಮ ನೋವು ಹಂಚಿಕೊಳ್ಳುತ್ತ ಭಾವುಕರಾಗಿದ್ದಾರೆ.

ಅಲ್ಲದೇ ಕೋಪ ತಡೆಯಲಾರದೇ ಟಾಸ್ಕ್ ನಲ್ಲಿ ಕ್ಯಾಪ್ಟನ್ ಮೋಸ ಮಾಡಿದ್ದಾಳೆ ಎಂದು ಪ್ರಶಾಂತ್ ಕಿರುಚಾಡಿದ್ದಾರೆ. ಅಷ್ಟೇ ಅಲ್ಲ ಜೀವದ ಗೆಳೆಯನಂತಿದ್ದ ಚಂದ್ರಚೂಡ್ ನ ಜೊತೆಗೂ ಜೋರಾದ ಧ್ವನಿಯಲ್ಲಿ ಜಗಳವಾಡಿದ್ದಾರೆ.

ಒಟ್ಟಿನಲ್ಲಿ ಇನ್ನೇನು ಒಂದು ತಿಂಗಳಲ್ಲಿ ಕೊನೆಗೊಳ್ಳಲಿರೋ ಬಿಗ್ ಬಾಸ್ ಸೀಸನ್ 8 ರಲ್ಲಿ ಆಟ ಜೋರಾಗಿದ್ದು, ಯಾರಾಗ್ತಾರೆ ಫೈನಲ್ ಸ್ಪರ್ಧಿಗಳು ಅನ್ನೋ ಕುತೂಹಲ ಮನೆ ಮಾಡಿದೆ.

Comments are closed.