ಸೆಲ್ಪಿ ಕ್ಲಿಕ್ಕಿಸೋ ಭರದಲ್ಲಿ ಪ್ಯಾಂಟ್ ಮರೆತ ನಿಧಿ ಸುಬ್ಬಯ್ಯ…! ಅಣ್ಣಾಬಾಂಡ್ ಬೆಡಗಿ ಅವತಾರಕ್ಕೆ ಶಾಕ್ ಆದ ಅಭಿಮಾನಿಗಳು..!

ಸ್ಯಾಂಡಲ್ ವುಡ್, ಬಾಲಿವುಡ್ ಸೇರಿ ಹಲವು ಭಾಷೆಗಳಲ್ಲಿ ಮಿಂಚಿದ್ದ ಗುಳಿಕೆನ್ನೆಯ, ತುಂಟ ಕಣ್ಣೋಟದ ಬೆಡಗಿ ನಿಧಿ ಸುಬ್ಬಯ್ಯ ಇದ್ದಕ್ಕಿದ್ದಂತೆ ನಟನೆಯಿಂದಲೇ ಮರೆಯಾಗಿದ್ದರು. ಈಗ ಧೀಡರ್ ಅಂತ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ನಿಧಿ ಪ್ಯಾಂಟ್ ಇಲ್ಲದೇ ಪೋಟೋಗೆ ಪೋಸು ಕೊಟ್ಟು  ನೆಟ್ಟಿಗರ ಟ್ರೋಲ್ ಗೆ ಆಹಾರವಾಗಿದ್ದಾರೆ.

ನಿಧಿ ಸುಬ್ಬಯ್ಯ್ ಒಂದಷ್ಟು ಕಾಲದಿಂದ ಯಾವ ಚಿತ್ರದಲ್ಲೂ ಬಣ್ಣ ಹಚ್ಚದೇ, ಎಲ್ಲೂ ಕಾಣಿಸಿಕೊಳ್ಳದೇ ನಾಪತ್ತೆಯಾಗಿದ್ದರು. ಇದ್ದಕ್ಕಿದ್ದಂತೆ ಇನ್ಸ್ಟಾಗ್ರಾಂಗೆ ಮರಳಿರೋ ನಿಧಿ  ಮತ್ತೆರಿಸೋ ಪೋಟೋ ಜೊತೆ  ಅಭಿಮಾನಿಗಳಿಗೆ ಕಿಕ್ ನೀಡಿದ್ದಾರೆ.

ಉದ್ದನೆಯ ಶರ್ಟ್ ಧರಿಸಿ ಸೆಲ್ಪಿ ತೆಗೆದುಕೊಂಡಿರೋ ನಿಧಿ ಸುಬ್ಬಯ್ಯ ಪ್ಯಾಂಟ್ ಹಾಕೋದನ್ನೆ ಮರೆತಂತಿದೆ. ಈ ಪೋಟೋ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡ್ತಿದ್ದಂತೆ ನೆಟ್ಟಿಗರು ಮುಗಿಬಿದ್ದು ಪೋಟೋ ನೋಡಿದ್ದಲ್ಲದೇ ಹೆಂಗೆಂಗೋ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ.

ಪ್ಯಾಂಟ್ ಹಾಕದೇ ಪೋಟೋ ಏನೋ ತೆಗೆದ್ರಿ….. ಒಳ ಉಡುಪನ್ನಾದರೂ ಕಾಣೋ ಹಾಗೇ ಹಾಕಬಾರದೇ ಒಂದಿಷ್ಟು ಜನ ಬುದ್ಧಿ ಹೇಳಿದ್ರೆ, ಇನ್ನಷ್ಟು ಜನರು ಅಯ್ಯೋ ಅಷ್ಟೊಂದು ದುಡ್ಡಿರೋ ನಿಮಗೆ ಬಟ್ಟೆಗೂ ಬಡತನನಾ? ಅಂತ ಪ್ರಶ್ನಿಸಿದ್ದಾರೆ.

ಆದರೆ ನಿಧಿ ಅಭಿಮಾನಿಗಳು ಮಾತ್ರ ಸೂಪರ್, ಸಖತ್ ಹಾಟ್ ಅಂತೆಲ್ಲ ಕಮೆಂಟ್ ಮಾಡಿ ಸಂಭ್ರಮಿಸಿದ್ದಾರೆ. ಇನ್ನು ಕೆಲವರು ಅಯ್ಯೋ ಎಲ್ಲಿದ್ದೀರಾ? ಏನು ಮಾಡ್ತಿದ್ದೀರಾ? ಯಾಕೆ ಸಿನಿಮಾ ಮಾಡಿಲ್ಲ ಅಂತ ಕ್ವಶ್ಷನ್ ಮೇಲೆ ಕ್ವಶ್ಚನ್ ಮಾಡಿ ಕಾಳಜಿ ತೋರಿದ್ದಾರೆ.

ಸ್ಯಾಂಡಲ್ ವುಡ್ ನ ಕೃಷ್ಣಾ ನೀ ಲೇಟಾಗಿ ಬಾರೋ, ಪಂಚರಂಗಿ, ಚಮ್ಕಾಸಿ ಚಿಂದಿ ಉಡಾಯಿಸಿ, ವೀರಬಾಹು, ಕೃಷ್ಣನ್ ಮ್ಯಾರೇಜ್ ಸ್ಟೋರಿ ಸೇರಿದಂತೆ ಹಲವು ಚಿತ್ರ ಹಾಗೂ ಹಿಂದಿ, ತೆಲುಗಿನಲ್ಲೂ ನಟಿಸಿದ್ದ ನಿಧಿ ಇತ್ತೀಚಿಗೆ ಯಾವುದೇ ಚಿತ್ರದಲ್ಲೂ ನಟಿಸದೇ ತೆರೆಮರೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಸಧ್ಯ ಸಖತ್ ಹಾಟ್ ಪೋಟೋ ಜೊತೆ ಸೋಷಿಯಲ್ ಮೀಡಿಯಾಗೆ ಮರಳಿದ್ದು, ಮತ್ತೆ ನಟನೆಗೆ ಮರಳೋ ಸಿದ್ಧತೆ ನಡೆದಂತಿದೆ.

Comments are closed.