ಗ್ರಾಮಸ್ಥರ ಜೊತೆ ಗಲಾಟೆಗಿಳಿದ ಸೂಪರ್ ಸ್ಟಾರ್ ತಾಯಿ…! ಪೊಲೀಸರ ಮಧ್ಯಸ್ಥಿಕೆಯಲ್ಲಿ ಬಗೆಹರಿದ ವಿವಾದ…!!

ಕೆಜಿಎಫ್-2 ರಿಲೀಸ್ ತಲೆಬಿಸಿಯಲ್ಲಿರೋ ಯಶ್ ಗೆ ಮತ್ತೊಂದು ಸಂಕಷ್ಟ ತಲೆದೋರಿದೆ. ಇತ್ತೀಚಿಗೆ ಹಾಸನದಲ್ಲಿ ಜಮೀನು ಖರೀದಿಸಿದ್ದ ಯಶ್ ಫಾರ್ಮಹೌಸ್ ನಿರ್ಮಿಸಿದ್ದು ಇದರ ರಸ್ತೆ ವಿಚಾರಕ್ಕೆ ಯಶ್ ತಾಯಿ ಹಾಗೂ ಗ್ರಾಮಸ್ಥರ ನಡುವೆ ಗಲಾಟೆ ನಡೆದಿರುವುದಾಗಿ ವರದಿಯಾಗಿದೆ.

ಹಾಸನ ಸನಿಹದ ತಿಮ್ಮೇನಹಳ್ಳಿಯಲ್ಲಿ ಯಶ್ ತಂದೆ-ತಾಯಿಗಾಗಿ ಫಾರ್ಮಹೌಸ್ ಖರೀದಿಸಿ ನೀಡಿದ್ದಾರೆ. ಯಶ್ ತಂದೆ ಅರುಣ ಕುಮಾರ್ ಹಾಗೂ ತಾಯಿ ಪುಷ್ಪಾ ಅಲ್ಲೇ ವಾಸವಾಗಿದ್ದಾರೆ. ಇತ್ತೀಚಿಗೆ ಫಾರ್ಮಹೌಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದ ಪುಷ್ಪಾ ಅವರು ಜೆಸಿಬಿ ತರಿಸಿ ಕೆಲಸ ಮಾಡಿಸುತ್ತಿದ್ದರು ಎನ್ನಲಾಗಿದೆ.

https://kannada.newsnext.live/maharastra-thane-lockdown-corona-covid-19-cases/

ಈ ವೇಳೆ ತಿಮ್ಮೇನಹಳ್ಳಿ ಗ್ರಾಮಸ್ಥರು ಹಾಗೂ ಯಶ್ ತಾಯಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಯಶ್ ಅಭಿಮಾನಿಗಳು ಸ್ಥಳೀಯರ ಮೇಲೆ ಕೈಮಿಲಾಯಿಸಲು ಮುಂದಾಗಿದ್ದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಾತುಕತೆಯಲ್ಲಿ ವಿವಾದ ಬಗೆಹರಿಸಿದ್ದಾರೆ ಎನ್ನಲಾಗಿದೆ. ‘

ಆದರೆ ಈ ವಿವಾದ ಅಥವಾ ಗಲಾಟೆ ಬಗ್ಗೆ ಯಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಾಯಿಯ ಆಸೆಯಂತೆ ಫಾರ್ಮಹೌಸ್ ನಿರ್ಮಿಸಿರುವ ಯಶ್ ತಮ್ಮ ಮಗ ಯಥರ್ವ್ ನ ನಾಮಕರಣ ಅಲ್ಲೇ ನೆರವೇರಿಸಿದ್ದರು.

Comments are closed.