ರಿಯಲ್ ಬದುಕಿನಲ್ಲೂ ಸುದೀಪ್ ಹೀರೋ….! ಅಭಿವೃದ್ಧಿಗಾಗಿ ಗ್ರಾಮದತ್ತು ಪಡೆದ ಅಭಿನವ ಚಕ್ರವರ್ತಿ

ನಟನೆಯ ಜೊತೆಗೆ ಸಾಮಾಜಿಕ ಜವಾಬ್ದಾರಿ ಮೇರೆಯೋದರಲ್ಲೂ ಇತರರಿಗೆ ಮಾದರಿಯಾಗಿರೋ ಕಿಚ್ಚ ಸುದೀಪ್ ಗ್ರಾಮವೊಂದನ್ನು ದತ್ತು ಪಡೆದು ಅಭಿವೃದ್ಧಿಗೊಳಿಸೋ ಪಣತೊಟ್ಟಿದ್ದಾರೆ. ಕಿಚ್ಚ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಶಿವಮೊಗ್ಗ ಜಿಲ್ಲೆಯ ಆವಿಗೆ ಗ್ರಾಮವನ್ನು ಸುದೀಪ್ ದತ್ತು ಪಡೆದಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯತ್ ಸೇರಿದಂತೆ ಎಲ್ಲ ಅಡಳಿತ ವ್ಯವಸ್ಥೆ ಜೊತೆ ಚರ್ಚಿಸಿ ಸುದೀಪ್ ಗ್ರಾಮವನ್ನು ದತ್ತು ಪಡೆದಿದ್ದು, ಅಗತ್ಯ ಮೂಲಸೌಲಭ್ಯ ಒದಗಿಸಿ ಅಭಿವೃದ್ಧಿ ಪಡಿಸುವ ಕನಸಿನಲ್ಲಿದ್ದಾರೆ. ಕೇವಲ ಗ್ರಾಮ ಮಾತ್ರವಲ್ಲದೇ ತುಮಕೂರು ಸೇರಿದಂತೆ ಹಲವೆಡೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಸುದೀಪ್ ಅವುಗಳಿಗೆ ಅಗತ್ಯ ಸೌಲಭ್ಯ ಒದಗಿಸಿದ್ದರು.

ಅಲ್ಲದೇ ಕಿಚ್ಚ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಶೂಸ್,ಪುಸ್ತಕ ವಿತರಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿಕೊಡಲು ಸುದೀಪ್ ಟ್ರಸ್ಟ್ ದುಡಿಯುತ್ತಿದೆ.

ಸ್ಯಾಂಡಲ್ ವುಡ್ ನಲ್ಲಿ 25 ವರ್ಷ ಪೊರೈಸಿದ ಸವಿ ನೆನಪಿಗೆ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಹಲವು ಸಮಾಜಮುಖಿ ಕಾರ್ಯಕ್ರಮಹಮ್ಮಿಕೊಂಡಿದ್ದು ಬೀದಿ ನಾಯಿಗಳ ರಕ್ಷಣೆಗೆ ಶೆಲ್ಟರ್ ಸೇರಿದಂತೆ ಹಲವು ಮಾದರಿ ಕಾರ್ಯದಲ್ಲಿ ತೊಡಗಿದೆ.

ಸದ್ಯದಲ್ಲಿಯೇ ಸುದೀಪ್ ಹೋಸ್ಟ್ ಮಾಡುತ್ತಿರುವ ಬಿಗ್ ಬಾಸ್ ಶೋ ಆರಂಭವಾಗಲಿದ್ದು ಸಪ್ಟೆಂಬರ್ ಅಕ್ಟೋಬರ್ ವೇಳೆಗೆ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಹ ತೆರೆಗೆ ಬರಲಿದೆ.

Comments are closed.