ಚಿನ್ನಾಭರಣ ಪ್ರಿಯರಿಗೆ ಮತ್ತೆ ಗುಡ್ನ್ಯೂಸ್ : ಬಂಗಾರದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಬೆಲೆ ತಟಸ್ಥ
Gold-Silver Rate: ಚಿನ್ನದ ದರದಲ್ಲಿ ಸತತ ಏರಿಕೆ ಕಾಣುತ್ತಿದ್ದ ಬೆನ್ನಲ್ಲೇ ಚಿನ್ನದ ದರ ಏರಿಕೆಯ ಓಟಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಬೆಳ್ಳಿ ದರ ತಟಸ್ಥವಾಗಿದ್ದು ಗ್ರಾಹಕರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. 24 ಕ್ಯಾರೆಟ್ನ 1 ಗ್ರಾಂ ಬೆಲೆ 27 ರೂ ಇಳಿಕೆ ಕಂಡಿದ್ದು, 15,851 ರೂ ದಾಖಲಾಗಿದೆ. 10 ಗ್ರಾಂ ಬೆಲೆಯಲ್ಲಿ 270 ರೂ ಇಳಿಕೆ ಆಗಿದ್ದು, 10 ಗ್ರಾಂ ಬೆಲೆ 1,58,510 ರೂಪಾಯಿ ಆಗಿದೆ.
ಇನ್ನು ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 25 ರೂ ಇಳಿಕೆ ಕಂಡಿದ್ದು 14,530 ರೂ ದಾಖಲಾಗಿದೆ. 10 ಗ್ರಾಂನಲ್ಲಿ 250 ರೂ ಇಳಿದಿದ್ದು, 1,45,300 ರೂಪಾಯಿಗೆ ದಾಖಲಾಗಿದೆ. ಆದರೆ ಮುಂದಿನ ಕೆಲವು ದಿನಗಳಲ್ಲಿ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡುಬರಲಿದೆ ಎನ್ನಲಾಗಿದ್ದು ಚಿನ್ನಾಭರಣ ಖರೀದಿಗೆ ಇದೇ ಸೂಕ್ತ ಸಮಯ ಎಂದು ಆರ್ಥಿಕ ತಜ್ಞರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಚಿನ್ನ ಅಸಲಿಯೇ ಅಥವಾ ನಕಲಿಯೇ? ಪತ್ತೆಹಚ್ಚಲು 10 ಸುಲಭ ದಾರಿಗಳು!
ಇನ್ನು ಬೆಳ್ಳಿ ಬೆಲೆ ಇಂದು ತಟಸ್ಥವಾಗಿದೆ. ಕೆಜಿಗೆ 2,90,000 ರೂಪಾಯಿ ಇದೆ,. ಜನವರಿ ಅಂತ್ಯದವರೆಗೂ ಭಾರೀ ಏರಿಕೆ ಕಾಣುತ್ತಿದ್ದ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಈಗ ಇಳಿಕೆ ಕಂಡುಬರುತ್ತಿದ್ದು ಹೂಡಿಕೆದಾರರು ಆತಂಕಕ್ಕೆ ಒಳಗಾಗಿದ್ದರೆ ಚಿನ್ನಾಭರಣ ಪ್ರಿಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.



