ಗೃಹಲಕ್ಷ್ಮೀ ಯೋಜನೆ : ಜುಲೈ-ಆಗಸ್ಟ್‌ ಕಂತಿನ 4,000 ರೂ. ಬಿಡುಗಡೆ

ಬೆಂಗಳೂರು: ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆ (Gruhalakshmi Yojana) ಯ ಫಲಾನುಭವಿಗಳಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಈ ಬಾರಿ ಗೃಹಿಣಿಯರ ಖಾತೆಗೆ 4000 ರೂಪಾಯಿ ಜಮೆ ಆಗಲಿದೆ.

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳ ಕಂತಿನ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಜಮೆ ಮಾಡಲಾಗುತ್ತಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳ ಪ್ರಕಾರ, ಸುಮಾರು 40 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ತಲಾ ₹2,000ರಂತೆ ಒಟ್ಟು ₹4,000 ಹಣವನ್ನು ವರ್ಗಾಯಿಸಲಾಗುತ್ತಿದೆ.

ತಾಂತ್ರಿಕ ದೋಷಗಳು ಮತ್ತು ಫಲಾನುಭವಿಗಳ ಬ್ಯಾಂಕ್ ಖಾತೆ ಪರಿಶೀಲನೆಯಲ್ಲಿನ ವಿಳಂಬದಿಂದಾಗಿ ಹಣ ಪಾವತಿ ತಡವಾಗಿತ್ತು. ಸರ್ಕಾರ ಈ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಂಡಿದೆ.

ಇದರಿಂದಾಗಿ ಹಣ ಬಿಡುಗಡೆ ಪ್ರಕ್ರಿಯೆಯನ್ನು ಸುಗಮವಾಗಿದೆ. ಅಲ್ಲದೇ ಜಿಎಸ್‌ಟಿ ಪಾವತಿದಾರರ ಕುಟುಂಬಗಳ ಸಮಸ್ಯೆಗಳನ್ನೂ ಪರಿಹರಿಸಲಾಗಿದೆ ಎಂದು ಕರ್ನಾಟಕ ಸರಕಾರ ಹೇಳಿದೆ.

ಇದನ್ನೂ ಓದಿ : ಈ ಕೆಲಸ ಮಾಡದಿದ್ರೆ ಇನ್ಮುಂದೆ ಸಿಗಲ್ಲ ಯುವನಿಧಿ ಹಣ

ತಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಎಂದು ಪರಿಶೀಲಿಸಲು, ಫಲಾನುಭವಿಗಳು DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅಥವಾ ಅಧಿಕೃತ ಸೇವಾ ಸಿಂಧು ಪೋರ್ಟಲ್ ಬಳಸಬಹುದು.

ಆಧಾರ್ ಸಂಖ್ಯೆಯ ಮೂಲಕ ಸುಲಭವಾಗಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದು. ಗೃಹಲಕ್ಷ್ಮೀ ಯೋಜನೆಗೆ ಇದುವರೆಗೂ ಅರ್ಜಿ ಸಲ್ಲಿಸದೇ ಇರುವ ಅರ್ಹ ಮಹಿಳೆಯರು ಸೇವಾ ಸಿಂಧು ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿದಾರರು ಕುಟುಂಬದ ಯಜಮಾನಿಯಾಗಿರಬೇಕು ಮತ್ತು ಗಂಡ ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿದಾರರಾಗಿರಬಾರದು ಎಂಬುದು ಯೋಜನೆಯ ಪ್ರಮುಖ ಮಾನದಂಡವಾಗಿದೆ.

ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಹಣ ಪಡೆಯಲು ಯಾವುದೇ ಸಮಸ್ಯೆಗಳಿದ್ದಲ್ಲಿ, ಗೃಹಿಣಿಯರು ಸಹಾಯವಾಣಿ ಸಂಖ್ಯೆ 1902 ಅನ್ನು ಸಂಪರ್ಕಿಸಬಹುದು.

ಇದನ್ನೂ ಓದಿ : ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?

Gruhalakshmi Yojana July-August installment of Rs 4 000 released Kannada news

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories