Darshan: ಡಿ ಬಾಸ್ ಜೊತೆಗೆ ಅಭಿಮಾನಿಗಳಿಗೂ ಸಂಕಷ್ಟ: ಬೇಲ್ ಗೂ ದುಡ್ಡಿಲ್ಲ, ಜೈಲಿನಲ್ಲೂ ಕೇಳೋರಿಲ್ಲ
Darshan: ಚಾಲೆಂಜಿಂಗ್ ಸ್ಟಾರ್, ಬಾಕ್ಸಪೀಸ್ ಸುಲ್ತಾನ್ ಎಂದೆಲ್ಲ ಕರೆಸಿಕೊಳ್ಳೋ ದರ್ಶನ್ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದಾರೆ. ಬಾಸ್ ಜೈಲು ಸೇರ್ತಿದ್ದಂತೆ ಅಭಿಮಾನಿಗಳೂ ಕೂಡ ಜೈಲಿನ ಹಾದಿ ಹಿಡಿದಿದ್ದರು. ದರ್ಶನ್ ಕೇಸ್ ಬಗ್ಗೆ ಕಮೆಂಟ್ ಮಾಡಿದ್ದಕ್ಕೆ ರಮ್ಯರನ್ನು ದರ್ಶನ್ ಫ್ಯಾನ್ಸ್ ಹಿಗ್ಗಾಮುಗ್ಗ ಹೀಯಾಳಿಸಿದ್ದರು. ಈಗ ಮಾಡಿದುಣ್ಣೋ ಮಹರಾಯ ಎಂಬಂತೆ ಜೈಲಿನಲ್ಲಿ ಮುದ್ದೆ ಮುರಿತಿರೋರಿಗೆ ಬೇಲ್ ಪಡೆಯೋಕೋ ದುಡ್ಡಿಲ್ಲದೇ ಪರದಾಡುತ್ತಿದ್ದಾರೆ.
ಅಭಿಮಾನ ಅತಿರೇಕವಾದರೇ ಆಪತ್ತು ಅನ್ನೋ ಮಾತಿದೆ.ದರ್ಶನ್ ಅಭಿಮಾನಿಗಳ ವಿಷ್ಯದಲ್ಲೂ ಆಗಿದ್ದು ಇದೆ. ಡಿ ಬಾಸ್ ಫ್ಯಾನ್ಸ್ ಅನ್ನೋ ಟ್ಯಾಗಲೈನ್ ನಲ್ಲಿ ಒಂದಿಷ್ಟು ಹುಡುಗರು ಎಲ್ಲೆ ಮೀರಿ ಸೋಷಿಯಲ್ ಮೀಡಿಯಾದಲ್ಲಿ ಅಬ್ಬರಿಸಿಬಿಟ್ಟರು. ತೀರಾ ಕೀಳಾಗಿ ಕಮೆಂಟ್ ಮಾಡೋದು ಡಿ ಬಾಸ್ ಫ್ಯಾನ್ಸ್ ಗೆ ನೀರು ಕುಡಿ ದಷ್ಟು ಸಲೀಸಾಗಿತ್ತು.
ಈ ಮಧ್ಯೆ ದರ್ಶನ್ ಬೇಲ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹಾಗೂ ಮಾಜಿಸಂಸದೆ ರಮ್ಯ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ದರ್ಶನ್ ಅಭಿಮಾನಿಗಳು ರಮ್ಯ ವಿರುದ್ಧ ಮುಗಿಬಿದ್ದಿದ್ದರು. ಮಾತ್ರವಲ್ಲ ತೀರಾ ಅಶ್ಲೀಲವಾಗಿ ರಮ್ಯರನ್ನು ನಿಂದಿಸಿದ್ದರು.
ಅಶ್ಲೀಲಕಮೆಂಟ್ ಗಳ ಸ್ಕ್ರಿನ್ ಶಾಟ್ಸ್ ಶೇರ್ ಮಾಡಿದ್ದ ನಟಿ ರಮ್ಯ, ಇದಕ್ಕೆಲ್ಲ ಮೌನವಾಗಿದ್ದರೇ ಸಾಧ್ಯವಿಲ್ಲ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಹೀಗಾಗಿ ತಕ್ಷಣ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಕರ್ನಾಟಕದಾದ್ಯಂತ ಐದಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ಜೈಲಿಗೆ ಅಟ್ಟಿದ್ದರು.
ಸದ್ಯ ಪ್ರಕರಣದ ತನಿಖೆ ಮುಗಿಸಿ ಚಾರ್ಜಶೀಟ್ ಸಲ್ಲಿಕೆಗೆ ಸಿಸಿಬಿ ಕ್ರೈಂಬ್ರ್ಯಾಂಚ್ ಸಿದ್ಧತೆ ನಡೆಸಿದೆ. ಪ್ರಕರಣದ ಗಂಭೀರತೆ ಅರಿತ ಪೊಲೀಸರು ಸೂಕ್ತ ದಾಖಲೆಗಾಗಿ ಬಂಧಿತ 12 ಆರೋಪಿಗಳ ಮೊಬೈಲ್ ನ್ನು ರೀಟ್ರಿವ್ ಗಾಗಿ ಎಫ್ ಎಸ್ ಎಲ್ ಗೆ ಕಳುಹಿಸಿದೆ. ಈ ಮಧ್ಯೆ ಬಂಧಿತರೆಲ್ಲ ಸಾಮಾನ್ಯ ವರ್ಗದವರಾಗಿದ್ದು, ಜೈಲಿನಲ್ಲಿ ಪರದಾಡುತ್ತಿದ್ದಾರೆ.
ಬಂಧಿತರಲ್ಲಿ ಬಹುತೇಕರುವಿದ್ಯಾರ್ಥಿಗಳಾಗಿದ್ದರೇ, ಇನ್ನುಳಿದವರು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಯುವಕರು. ದರ್ಶನ್ ಅಭಿಮಾನದ ಗುಂಗಿನಲ್ಲಿ ಕಮೆಂಟ್ ಹಾಕಿದ್ದಾರೆ. ಆದರೆ ಪ್ರಕರಣ ಇಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ನೀರಿಕ್ಷೆ ಇರಲಿಲ್ಲ.
ಈಗ ಮಕ್ಕಳು ಜೈಲು ಸೇರಿದ್ದರೇ ಪೋಷಕರು ಮಕ್ಕಳ ಭೇಟಿ ಮತ್ತು ಬೇಲ್ ಗಾಗಿ ಪರದಾಡುತ್ತಿದ್ದಾರೆ. ಪೋಷಕರ ಬಳಿ ಬೇಲ್ ಗಾಗಿ ವಕೀಲರನ್ನು ನೇಮಿಸಲು ದುಡ್ಡಿಲ್ಲ. ಹೀಗಾಗಿ ಪೋಷಕರು ಕಣ್ಣೀರಿಡುತ್ತಿದ್ದಾರೆ.
ಒಟ್ಟಿನಲ್ಲಿ ನಟ ದರ್ಶನ್ ಅತ್ತ ಜೈಲಿನಲ್ಲಿ ಹಾಸಿಗೆ,ತಲೆದಿಂಬಿಗಾಗಿ ಕೋರ್ಟ್ ನಲ್ಲಿ ಸರ್ಕಸ್ಮಾಡುತ್ತಿದ್ದಾರೆ. ಇತ್ತ ಅಭಿಮಾನಿಗಳು ಅಭಿಮಾನದ ಹುಚ್ಚಿನಲ್ಲಿ ಕಮೆಂಟ್ ಮಾಡಿ ರಮ್ಯ ಕೆಂಗಣ್ಣಿಗೆ ಗುರಿಯಾಗಿ ಜೈಲು ಪಾಲಾಗಿದ್ದಾರೆ.
ಇದೇ ಮೊದಲಲ್ಲ ದರ್ಶನ್ ಬಗ್ಗೆ ಮಾತಾಡಿದ ಎಲ್ಲರಿಗೂ ಕೆಟ್ಟದಾಗಿ ಕಮೆಂಟ್ ಮಾಡುವ ಪ್ರವೃತ್ತಿ ದರ್ಶನ್ ಅಭಿಮಾನಿಗಳಿಗೆ ಮೊದಲಿನಿಂದಲೂ ಇದೆ. ನಟ ಯಶ್, ಸುದೀಪ್ ಸೇರಿದಂತೆ ಹಲವು ನಾಯಕ ನಟ-ನಟಿಯರಿಗೆ ದರ್ಶನ್ ಅಭಿಮಾನಿಗಳ ಕೆಟ್ಟ ಕಮೆಂಟ್ ನ ಅನುಭವವಾಗಿದೆ. ಆದರೆ ಯಾರೂ ಕೂಡ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲು ರಮ್ಯ ಪೊಲೀಸರ ಮೊರೆ ಹೋಗಿದ್ದರು. ಸದ್ಯ ಡಿ ಬಾಸ್ ಫ್ಯಾನ್ಸ್ ಕೂಡ ತಮ್ಮ ಬಾಸ್ ರಂತೆ ಜೈಲಿನಿಂದ ಹೊರಬರಲು ಪರದಾಡುವಂತಾಗಿದೆ.



