Kantara : ದಸರಾ ಹಬ್ಬಕ್ಕೆ ಕಂಬಳದ ಸೊಗಸು : ಸಪ್ಟೆಂಬರ್ 30 ರಂದು ತೆರೆಗೆ ಹೊಂಬಾಳೆ ಫಿಲ್ಸ್ಮ್ ಕಾಂತಾರ

ಕೊರೊನಾ ಸೋಂಕಿನ ಬಳಿಕ ಒಂದೊಂದೆ ಬಿಗ್ ಬಜೆಟ್ ಸಿನಿಮಾಗಳು ಸೆಟ್ಟೆರುತ್ತಿವೆ. ಇನ್ನೊಂದು ಕಡೆ ಹಲವು ಬಿಗ್ ಬಜೆಟ್ ಸಿನಿಮಾಗಳು ಥಿಯೇಟರ್ ಗೆ ಬರ್ತಿದೆ. ಅದರಲ್ಲೂ ಬಹುನೀರಿಕ್ಷಿತ ಹಾಗೂ ವಿಭಿನ್ನ ಟೈಟಲ್ ನಿಂದ ಗಮನಸೆಳೆದ ಕಾಂತಾರ (Kantara) ಸಿನಿಮಾ ಕೂಡಾ ಒಂದು. ಸದ್ಯ ಶೂಟಿಂಗ್ ಮುಗಿಸಿರೋ ಈ ಸಿನಿಮಾ ದಸರಾ ಹಬ್ಬಕ್ಕೆ ತೆರೆ ಕಾಣಲಿದೆ. ಹೊಂಬಾಳೆ ಫಿಲ್ಷ್ಮಂನ 11 ನೇ ಸಿನಿಮಾ ಕಾಂತಾರ. ರಿಶಬ್ ಶೆಟ್ಟಿ ಮತ್ತೊಮ್ಮೆ ಡೈರೈಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿರೋ ಈ ಸಿನಿಮಾದಲ್ಲಿ ನಾಯಕರಾಗಿಯೂ ರಿಶಬ್ ಶೆಟ್ಟಿಯೇ ಬಣ್ಣ ಹಚ್ಚಿದ್ದಾರೆ.

ಕಾಂತಾರ ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ಮೊದಲ ನೋಟಕ್ಕೆ ಕರಾವಳಿಯ ಜಾನಪದ ಕ್ರೀಡೆ ಕಂಬಳದ ಕುರಿತಾದ ಕತೆಯನ್ನು ಹೊಂದಿದೆ ಎಂಬ ಸುಳಿವು ಸಿಕ್ಕಿತ್ತು. ಈ ಸಿನಿಮಾದ ಮೂಲಕ ಕರಾವಳಿ ಮೂಲದ ನಾಯಕ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ ತಮ್ಮ ತಾಯ್ನೇಲದ ಸೊಗಡನ್ನು ತೆರೆಗೆ ತರಲು ಸಿದ್ಧವಾಗಿದ್ದಾರೆ. ಈ ಸಿನಿಮಾಗೆ ಕಾಂತಾರ (Kantara) ಎಂಬ ಟೈಟಲ್ ಜೊತೆ ಒಂದು ದಂತ ಕತೆ ಎಂಬ ಟೈಟಲ್ ಕೂಡ ನೀಡಲಾಗಿದ್ದು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಸದ್ಯ ಹೊಂಬಾಳೆ ಫಿಲಂಸ್ ನಲ್ಲಿ ಅದ್ದೂರಿಯಾಗಿ ಕಾಂತಾರ ಮೂಡಿ ಬಂದಿದ್ದು, ಇದೇ ವರ್ಷದ ದಸರಾ ಹಬ್ಬಕ್ಕೆ ಅಂದ್ರೆ ಸೆಪ್ಟೆಂಬರ್ 30ಕ್ಕೆ ಗ್ರಾಂಡ್ ರಿಲೀಸ್ ಆಗಲಿದೆ.‌

ಇನ್ನು ಚಿತ್ರದ ರಿಲೀಸ್ ಡೇಟ್ ಅನ್ನು ಹೊಂಬಾಳೆ ಫಿಲಂಸ್ ಅಧಿಕೃತ ಅನೌನ್ಸ್ ಮಾಡಿದ್ದು , ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿರುವ ಕಂಬಳ ಕುರಿತಾದ ಕಾಂತಾರ (Kantara) ದಸಾರ ಹಬ್ಬಕ್ಕೆ ಚಿತ್ರಪ್ರೇಮಿಗಳ ರಂಜಿಸೋದು ಪಕ್ಕಾ ಎಂಬಂತಾಗಿದೆ. ಸದ್ಯ ಸಿನಿಮಾ ಎಂದ್ರೇ ಪ್ಯಾನ್ ಇಂಡಿಯಾ ಮೂವಿ ಎಂಬ ಸ್ಥಿತಿ ಇದ್ದು, ಈ ಹೊತ್ತಿನಲ್ಲಿ ರಿಲೀಸ್ ಆಗಿರೋ ಚಿತ್ರಗಳತ್ತ ಪ್ರೇಕ್ಷಕರು ಮನಸ್ಸು ಮಾಡುತ್ತಿಲ್ಲ. ಇದೇ ಕಾರಣಕ್ಕೆ ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರಲು ಅಂಜುತ್ತಿವೆ.

ಆದರೆ ಕೆಜಿಎಫ್-2 ಗೆಲುವಿನ ಸಂಭ್ರಮದಲ್ಲಿರೋ ಹೊಂಬಾಳೆ ಫಿಲ್ಷ್ಮ್ ಮಾತ್ರ ಒಂದಾದ ಮೇಲೊಂದರಂತೆ ಸಿನಿಮಾಗಳನ್ನು ತೆರೆಗೆ ತರುತ್ತಿದೆ. ಅಗಸ್ಟ್ ನಲ್ಲಿ ನವರಸ ನಾಯಕ ಜಗ್ಗೇಶ್ ನಟನೆಯ ರಾಘವೇಂದ್ರ್ ಸ್ಟೋರ್ ತೆರೆಗೆ ಬರಲಿದ್ದು, ಅದರ ಬೆನ್ನಲ್ಲೇ ಕಾಂತಾರವೂ (Kantara) ಜನರನ್ನು ರಂಜಿಸಲು ಸಿದ್ಧವಾಗ್ತಿದೆ.

ಇದನ್ನೂ ಓದಿ : Rohith Chakrathirtha : ರೋಹಿತ್ ಚಕ್ರತೀರ್ಥಗೆ ಭಾರಿ ಹಿನ್ನಡೆ : ಪಠ್ಯಪುಸ್ತಕ ಸಮಿತಿ ವಿಸರ್ಜಿಸಿದ ಸರ್ಕಾರ

ಇದನ್ನೂ ಓದಿ : ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

hombale films Kantara Movie Release September 30

Comments are closed.