ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ ಕಾಂತಾರ ಚಾಪ್ಟರ್ 1 ಶೀಘ್ರದಲ್ಲೇ ಒಟಿಟಿಗೆ : ಇಲ್ಲಿದೆ ವಿವರ

Kantara Chapter 1 OTT : ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಮುಖ್ಯಭೂಮಿಕೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಕಾಂತಾರ ಚಾಪ್ಟರ್​ 1 ಸಿನಿಮಾ ಸಿನಿ ಜಗತ್ತಿನ ಎಲ್ಲಾ ದಾಖಲೆಗಳನ್ನು ಪುಡಿಮಾಡುತ್ತಾ ಕಲೆಕ್ಷನ್​ ಮೇಲೆ ಕಲೆಕ್ಷನ್​ ಮಾಡುತ್ತಿದೆ. ಈ ಸಿನಿಮಾ ಅಕ್ಟೋಬರ್​ 31ರಿಂದ ತನ್ನ ಸ್ಟ್ರೀಮಿಂಗ್​ ಪಾರ್ಟ್ನರ್​​ ಅಮೆಜಾನ್​ ಪ್ರೈಮ್​ನಲ್ಲಿ ಪ್ರಪ್ರಥಮ ಪ್ರದರ್ಶನ ಕಾಣಲಿದೆ.

2022ರಲ್ಲಿ ತೆರೆಕಂಡ ಸೂಪರ್​ ಹಿಟ್​ ಕಾಂತಾರ ಸಿನಿಮಾದ ಪ್ರಿಕ್ವೆಲ್​ ಭಾಗವಾಗಿ ಮೂಡಿಬಂದಿರುವ ಈ ಸಿನಿಮಾ ಭಾರತ ಸೇರಿದಂತೆ 200ಕ್ಕೂ ಅಧಿಕ ದೇಶಗಳಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ.

ಕಾಂತಾರ ಚಿತ್ರಮಂದಿರಗಳಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿರುವ ನಡುವೆಯೇ ಒಟಿಟಿಗೂ ಲಗ್ಗೆ ಇಡಲು ಸಜ್ಜಾಗಿದೆ. ಆದರೆ ಹಿಂದಿ ಆವೃತ್ತಿ ಸದ್ಯ ಅಮೆಜಾನ್​ ಪ್ರೈಮ್​ನಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಹಿಂದಿಯಲ್ಲಿ ಕಾಂತಾರ ಚಾಪ್ಟರ್ 1 ವೀಕ್ಷಣೆ ಮಾಡಬೇಕೆನ್ನುವವರು ಚಿತ್ರ ಮಂದಿರಕ್ಕೆ ತೆರಳಬೇಕಿದೆ.

Kantara Chapter 1 OTT release watch Rishab Shetty Movie

ಹೊಂಬಾಳೆ ಫಿಲ್ಮ್ಸ್ ಬ್ಯಾನರ್​ನಲ್ಲಿ ಮೂಡಿ ಬಂದಿರುವ ಈ ಸಿನಿಮಾವು ಡಿಜಿಟಲ್​ ಲೋಕಕ್ಕೆ ಲಗ್ಗೆ ಇಡಲು ಸಜ್ಜಾಗಿದ್ದರೂ ಸಹ ಇಂದಿಗೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನವನ್ನೇ ಕಾಣುತ್ತಿದೆ.

Also Read : ಸಾರಾ ತೆಂಡೂಲ್ಕರ್‌ ಇನ್‌ ಸ್ಟಾಗ್ರಾಂನಲ್ಲಿ ಗಳಿಸಿದ್ದೆಷ್ಟು ? ಇದು ತೆಂಡೂಲ್ಕರ್‌ ಪುತ್ರಿಯ ಸಾಧನೆ

ಹೀಗಾಗಿ ಒಟಿಟಿ ರಿಲೀಸ್ ಬಳಿಕ ಚಿತ್ರಮಂದಿರದ ಗಳಿಕೆಯಲ್ಲಿ ಇಳಿಕೆ ಕಾಣುವ ಸಾಧ್ಯತೆಯಿದೆ. ತುಳುನಾಡಿನ ದೈವಗಳು, ಅದರ ಮೇಲಿನ ನಂಬಿಕೆಯನ್ನೇ ಆಧರಿಸಿ ನಟ ರಿಷಬ್​ ಶೆಟ್ಟಿ ಕತೆಯನ್ನು ಹೆಣೆದಿದ್ದಾರೆ. ಚಿತ್ರಮಂದಿರಗಳ ಬಳಿಕ ಒಟಿಟಿಗೂ ಲಗ್ಗೆಯಿಟ್ಟು ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ಪ್ರಯತ್ನ ಚಿತ್ರತಂಡದ್ದಾಗಿದೆ.

ಕದಂಬ ರಾಜವಂಶ ಯುಗದಲ್ಲಿ ನಡೆಯುವ ಕತೆ ಇದಾಗಿದೆ. ಕಾಂತಾರ ಎಂಬ ಕಾಡನ್ನು ರಕ್ಷಿಸಲು, ಈಶ್ವರನ ಹೂದೋಟದ ಮೇಲೆ ದುಷ್ಟ ಶಕ್ತಿಗಳಿಗಿದ್ದ ದುರಾಸೆಯನ್ನು ನೀಗಿಸಲು ದೈವವೇ ಅವತಾರವೆತ್ತಿ ಬರುವ ಕತೆಯನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ.

Also Read : ಮಾರಿಗಲ್ಲು ವೆಬ್‌ ಸಿರೀಸ್‌ ಕದಂಬರ ನಿಧಿ ಹುಡುಕಾಟದ ಕಥೆ ಅಕ್ಟೋಬರ್‌ 31ಕ್ಕೆ ಝೀ 5ನಲ್ಲಿ ರಿಲೀಸ್‌

ಒಂದು ರೀತಿಯಲ್ಲಿ ಇದು ಪ್ರಕೃತಿ ಮತ್ತು ಮನುಷ್ಯನ ನಡುವಿನ ದುರಾಸೆಯ ನಡುವಿನ ಹೋರಾಟದ ಕತೆಯಾಗಿದೆ. ಪಂಜುರ್ಲಿ, ಗುಳಿಗ ದೈವಗಳು ದುಷ್ಟ ಶಕ್ತಿಯನ್ನು ನಾಶಪಡಿಸುವ ಕತೆಯನ್ನು ಈ ಸಿನಿಮಾ ಹೊಮದಿದೆ. ಒಂದು ರೀತಿಯಲ್ಲಿ ಕಾಂತಾರ ಚಾಪ್ಟರ್​ 1 ದೈವಿಕ ಪ್ರಪಂಚಕ್ಕೆ ನಮ್ಮನ್ನು ಎಳೆದೊಯ್ಯುತ್ತದೆ ಎಂದರೆ ತಪ್ಪಾಗಲಾರದು.

Kantara Chapter 1 OTT release watch Rishab Shetty Movie

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories