Meghanaraj : ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ನಟಿ ಮೇಘನಾ ರಾಜ್..!

ಕಳೆದ ಒಂದು ವರ್ಷದಿಂದ ನಟಿ ಮೇಘನಾ ರಾಜ್ ಒಂದಾದ ಮೇಲೊಂದು ಸಂಕಷ್ಟದಲ್ಲೇ ದಿನ ಕಳೆದಿದ್ದರು. ಪತಿ ಅಗಲಿಕೆ, ಮಗುವಿಗೆ ಕೊರೋನಾ ಹೀಗೆ ಸಾಲು ಸಾಲು ಸಂಕಷ್ಟ ಕಂಡ ಮೇಘನಾ ಬದುಕಲ್ಲಿ ಹೊಸಬೆಳಕು ಮೂಡಿದೆ.

ಬರೋಬ್ಬರಿ ವರ್ಷದ ಮೇಲೆ ಮೇಘನಾ ರಾಜ್ ಕೆರಿಯರ್ ಗೆ ಮರಳಿದ್ದಾರೆ. ಕ್ಯಾಮರಾ ಎದುರು ಡೈಲಾಗ್ ಪ್ರ್ಯಾಕ್ಟಿಸ್ ಮಾಡುತ್ತಾ ನಿಂತಿರೋ ಪೋಟೋ ಹಂಚಿಕೊಂಡಿರೋ ಮೇಘನಾ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ. ಪೋಟೋದ ಜೊತೆ ಸಂಭ್ರಮ ಹಂಚಿಕೊಂಡಿರುವ ಮೇಘನಾ ರಾಜ್, ಜ್ಯೂನಿಯರ್ ಚಿರುಗೆ 9 ತಿಂಗಳು ಆಯಿತು. ಒಂದು ವರ್ಷದ ಬಳಿಕ ಕ್ಯಾಮರಾ ಎದುರಿಸುವ ಮೂಲಕ ನಾನು ಈ ಕ್ಷಣವನ್ನು ಸೆಲಿಬ್ರೆಟ್ ಮಾಡುತ್ತಿದ್ದೇನೆ ಎಂದಿದ್ದಾರೆ.

ಇನ್ನು ಶೂಟಿಂಗ್‌ಸೆಟ್ ನಲ್ಲಿ ಡೈಲಾಗ್ ಓದುತ್ತ ನಿಂತಿರುವ ಮೇಘನಾ ರಾಜ್ ಪೋಟೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದು ಶುಭ ಹಾರೈಸುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಹಲವರು ಶುಭಕೋರಿದ್ದಾರೆ. ಕ್ಯಾಮರಾ ಎದುರಿಸುತ್ತಿರುವುದು ಯಾವ ಪ್ರಾಜೆಕ್ಟ್ ಗಾಗಿ ಎಂಬುದನ್ನು ಮೇಘನಾ ರಾಜ್ ಹೇಳಿಕೊಂಡಿಲ್ಲ. ಸಿನಿಮಾ ಅಥವಾ ಜಾಹೀರಾತಿಗಾಗಿ ಎಂಬುದು ಬಹಿರಂಗವಾಗಿಲ್ಲ.

ಇದನ್ನೂ ಓದಿ : ನಾನು ಆತಂಕದಿಂದ ಕುಸಿದು ಹೋಗಿದ್ದೆ….! ಮಗನ ಕೊರೋನಾ ಸಂಕಷ್ಟವನ್ನು ಬಿಚ್ಚಿಟ್ಟ ನಟಿ ಮೇಘನಾರಾಜ್…!!

ಚಿರು ನಿಧನದ ಹಲವು ತಿಂಗಳುಗಳ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಮೇಘನಾ ರಾಜ್, ನಾನು ನಟನೆಗೆ‌ ಮರಳುತ್ತೇನೆ. ಯಾಕೆಂದರೆ ಅದು ನನ್ನ ಪ್ರೀತಿಯ ಕೆಲಸ. ನಟನೆ ಯನ್ನು ಎಂದಿಗೂ ಬಿಡೋಲ್ಲ. ನಾನು ಸದಾ ನಟಿಸಬೇಕೆಂಬುದು ಚಿರು ಆಸೆಯೂ ಆಗಿತ್ತು ಎಂದಿದ್ದರು.

ಇದನ್ನೂ ಓದಿ :  ಸ್ಯಾಂಡಲ್ ವುಡ್ ನಟಿ ಬದುಕಿನಲ್ಲಿ ಬಿರುಗಾಳಿ…! ಪ್ರಿಯಾಮಣಿ ಮದುವೆ ಸಿಂಧುವಲ್ಲ ಎಂದ ಮುಸ್ತಫಾ ಮೊದಲ ಪತ್ನಿ…!!

ಈಗ ಚಿರು ಅಗಲಿಕೆಯ ಒಂದು ವರ್ಷದ ಬಳಿಕ ಪುಟಾಣಿ ಚಿರು ಬಿಟ್ಟು ಮೇಘನಾ ರಾಜ್ ಕ್ಯಾಮರಾ ಎದುರು ನಿಂತಿದ್ದು ಮೇಘನಾ ರಾಜ್ ಸೆಕೆಂಡ್ ಇನ್ನಿಂಗ್ಸ್ ಗೆ ಲಕ್ಷಾಂತರ ಅಭಿಮಾನಿ ಗಳು ಖುಷಿಯಾಗಿ ಶುಭಹಾರೈಸಿದ್ದಾರೆ.

Comments are closed.