ನಾಳೆಯೇ ವಿಚಾರಣೆಗೆ ಹಾಜರಾಗಿ : ನಟಿ ರಾಗಿಣಿಗೆ ಸಿಸಿಬಿ ನೋಟೀಸ್

0

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್​ ಮಾಫಿಯಾಕ್ಕೆ ಸಂಬಂಧಿಸಿದಂತೆ ನಾಳೆಯೇ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನಟಿ ರಾಗಿಣಿಗೆ ಮತ್ತೊಂದು ನೋಟಿಸ್ ಜಾರಿ ಮಾಡಿದೆ.

ಡ್ರಗ್ಸ್ ಮಾಫಿಯಾದಲ್ಲಿ ರಾಗಿಣಿ ಹೆಸರು ಕೇಳಿಬರುತ್ತಿದ್ದಂತೆಯೇ ರಾಣಿಣಿ ಆಪ್ತ ರವಿ ಶಂಕರ್ ನನ್ನು ವಶಕ್ಕೆ ಪಡೆದಿದ್ದ ಸಿಸಿಬಿ ವಿಚಾರಣೆಯನ್ನು ನಡೆಸಿತ್ತು. ಇದರ ಬೆನ್ನಲ್ಲೇ ರಾಗಿಣಿಗೆ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಆದರೆ ರಾಗಿಣಿ ವಿಚಾರಣೆಗೆ ಹಾಜರಾಗಿರಲಿಲ್ಲ.

ಇದರ ಬೆನ್ನಲ್ಲೇ ರಾಗಿಣಿ, ಟ್ವೀಟ್​ ಮಾಡಿರುವ ರಾಗಿಣಿ ನನಗೆ ಸಮನ್ಸ್​​ ಸಿಕ್ಕಿದ್ದು ಶಾರ್ಟ್​ ನೋಟೀಸ್​ನಲ್ಲಾದ್ದರಿಂದ ನಾನು ಇಂದು ಸಿಸಿಬಿ ಪೊಲೀಸರೆದುರು ಹಾಜರಾಗುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ, ನಮ್ಮ ಕಾನೂನಿನ ಮೇಲೆ ಗೌರವ ಇರುವುದರಿಂದ, ನನ್ನ ಪರವಾಗಿ ನನ್ನ ವಕೀಲರು ಹಾಜರಾಗಿದ್ದಾರೆ.

ನಾನು ಯಾಕೆ ಬರುವುದಕ್ಕೆ ಸಾಧ್ಯವಾಗಲಿಲ್ಲ ಎಂಬುದನ್ನು ಪೊಲೀಸರಿಗೆ ಮನವಿ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸೋಮವಾರ (ಸೆಪ್ಟೆಂಬರ್​ 7) ಖಂಡಿತವಾಗಿಯೂ ಹಾಜರಾಗುವುದಾಗಿ ಹೇಳಿದ್ದಾರೆ.

ಆದರೆ ಸಿಸಿಬಿ ಪೊಲೀಸರು ಅಷ್ಟು ದಿನಗಳ ಕಾಲಾವಕಾಶವನ್ನು ನೀಡಲು ಸಾಧ್ಯವಿಲ್ಲ. ನಾಳೆಯೇ ವಿಚಾರಣೆಗೆ ಹಾಜರಾಗಬೇಕೆಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಗಿಣಿ ನಾಳೆಯೂ ವಿಚಾರಣೆಗೆ ಹಾಜರಾಗುತ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.

Leave A Reply

Your email address will not be published.