ಕಾಂತಾರಾ 1 : ದೈವಗಳಿಗೆ ಅಪಮಾನ, ಕ್ಷಮೆಯಾಚಿಸಿದ ನಟ ರಣವೀರ್​ ಸಿಂಗ್​

ಗೋವಾದಲ್ಲಿ ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ನಟ ರಣವೀರ್​ ಸಿಂಗ್​, ಚಾವುಂಡಿ ದೈವವನ್ನು ದೆವ್ವ ಎಂದು ಕರೆದಿದ್ದರು. ಅಲ್ಲದೇ ಕೆಟ್ಟದಾಗಿ ಮುಖಾಭಿನಯ ಮಾಡುವ ಮೂಲಕ ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಕಾಂತಾರ ಚಾಪ್ಟರ್​ 1 ಸಿನಿಮಾದಲ್ಲಿ ನಟ ರಿಷಬ್​ ಶೆಟ್ಟಿ ನಿರ್ವಹಿಸಿದ್ದು ಚಾವುಂಡಿ ದೈವದ ಪಾತ್ರವನ್ನು ಅನುಕರಿಸಲು ಹೋಗಿ ಅಪಮಾನ ಎಸಗಿದ ಆರೋಪವನ್ನು ನಟ ರಣವೀರ್​ ಸಿಂಗ್​ ಎದುರಿಸುತ್ತಿರುವುದು ಗೊತ್ತೇ ಇದೆ.

ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಬಾಲಿವುಡ್​ ನಟ ರಣವೀರ್​ ಸಿಂಗ್​ ತಮ್ಮ ಕೃತ್ಯಕ್ಕೆ ಬೇಷರತ್​ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಹೈಕೋರ್ಟ್​ ರದ್ದುಗೊಳಿಸಿದೆ.

ಗೋವಾದಲ್ಲಿ ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ನಟ ರಣವೀರ್​ ಸಿಂಗ್​, ಚಾವುಂಡಿ ದೈವವನ್ನು ದೆವ್ವ ಎಂದು ಕರೆದಿದ್ದರು. ಅಲ್ಲದೇ ಕೆಟ್ಟದಾಗಿ ಮುಖಾಭಿನಯ ಮಾಡುವ ಮೂಲಕ ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದ್ದರು.

Also Read : ನಟನೆಗೆ ಗುಡ್‌ ಬೈ ಹೇಳಿ ಊರಲ್ಲಿ ಕೃಷಿ ಮಾಡ್ತಾರಾ ನಟ ದಿಗಂತ್?

ಇದಾದ ಬಳಿಕ ನಟ ರಣವೀರ್​ ಸಿಂಗ್​ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎಫ್​ಐಆರ್​ ರದ್ದು ಮಾಡುವಂತೆ ಕೋಡಿ ರಣವೀರ್​ ಸಿಂಗ್​ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.

ರಣವೀರ್​ ಸಿಂಗ್​​ಗೆ ಮುಂದಿನ 4 ವಾರಗಳ ಒಳಗಾಗಿ ಚಾವುಂಡಿ ದೈವ ಸನ್ನಿಧಾನಕ್ಕೆ ಭೇಟಿ ನೀಡುವಂತೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಪೀಠ ಸೂಚನೆ ನೀಡುವ ಮೂಲಕ ಅರ್ಜಿ ವಿಲೇವಾರಿ ಮಾಡಿದೆ.

Also Read : ಅಕ್ಷಯ್ ಕುಮಾರ್ ಮಗಳ ಬಳಿ ಬೆತ್ತಲೆ ಫೋಟೋ ಕೇಳಿದ ಆರೋಪಿ ಬಂಧನ

ಆದರೆ ಇಲ್ಲಿಗೆ ಭೇಟಿ ನೀಡಲು ರಣವೀರ್​ ಸಿಂಗ್​ಗೆ ಭದ್ರತೆಯ ಸಮಸ್ಯೆಯಿದೆ ಎಂದು ಅವರ ಪರ ವಕೀಲ ವಾದಿಸಿದ್ದಾರೆ. ಈ ವೇಳೆ ದೂರುದಾರ ಪರ ವಕೀಲರು, ಪೊಲೀಸರು ರಕ್ಷಣೆಗೆ ಇರಲಿದ್ದಾರೆ ಎಂದು ಮರುವಾದಿಸಿದ್ದಾರೆ ಎನ್ನಲಾಗಿದೆ .

​ranveer singh apologizes for insulting kantara daiva controversy kannada news

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories