ಬಿಗ್ ಬಾಸ್ ಮನೆಯ ಪ್ರಣಯ ಪಕ್ಷಿಗಳಿವು, ಸೂರಜ್-ರಾಶಿಕಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಿಗ್ ಬಾಸ್ ಅಂದ ಮೇಲೆ ಅಲ್ಲೊಂದು ಲವ್ ಸ್ಟೋರಿ ಇರಲೇ ಬೇಕು ಅಲ್ವಾ? ಪ್ರತಿ ಬಾರಿಯಂತೆ ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿ ಶುರುವಾಗಿದೆ. ಅದು ವೈಲ್ಡ್ ಕಾರ್ಡ್ ಎಂಟ್ರಿ ಆದ ಮೇಲೆ. ಹೌದು ಸೂರಜ್ ಸಿಂಗ್ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಅಭ್ಯರ್ಥಿಯಾಗಿ ಬಂದಿದ್ದಾರೆ. ಅವರು ಬಂದಾಗಿನಿಂದ ರಾಶಿಕಾ ಮತ್ತು ಸೂರಜ್‍ಗೆ ಲವ್ ಶುರುವಾಗಿದೆ. ಇಬ್ಬರು ತಮ್ಮ ಪ್ರೀತಿಯನ್ನೂ ಸಹ ಹೇಳಿಕೊಂಡಿದ್ದಾರೆ. ಸದ್ಯ ಪ್ರೇಕ್ಷಕರಂತೂ ಇವರ ಪ್ರೀತಿಗೆ ಜೈ ಅಂದಿದ್ದಾರೆ.
ವಿಭಿನ್ನವಾಗಿತ್ತು ಸೂರಜ್ ಎಂಟ್ರಿ
ಬಿಗ್ ಬಾಸ್ ಮನೆಗೆ ಸೂರಜ್ ಎಂಟ್ರಿ ಸ್ವಲ್ಪ ಭಿನ್ನವಾಗಿತ್ತು. ಈಜುಕೊಳದಲ್ಲಿ ಗುಲಾಬಿ ಹೂವಿನ ದಳಗಳು ಹಾಕಿ ಸ್ಪೆಷಲ್ ಆಗಿ ಎಂಟ್ರಿ ಕೊಟ್ಟಿದ್ದರು. ಸೂರಜ್ ಅವರ ಜಿಮ್ ಬಾಡಿಗೆ ಮನೆ ಹುಡುಗಿಯರು ಫಿದಾ ಆದ್ರು ಅಂದ್ರೆ ತಪ್ಪಿಲ್ಲ. ಎಲ್ಲಾ ಹುಡುಗಿಯರು ಅವರ ಮೇಲೆ ಕಣ್ ಹಾಕಿದ್ರು.
ರೆಡ್ ರೋಸ್ ಕೊಟ್ಟ ಸೂರಜ್
ಇನ್ನು ಸೂರಜ್ ಬಂದ ತಕ್ಷಣ ಬಿಗ್ ಬಾಸ್ ಮನೆಯ ಚೆಂದದ ಹುಡುಗಿಗೆ ರೋಸ್ ಕೊಡಿ ಎಂದು ಹೇಳ್ತಾರೆ. ಆಗ ಸೂರಜ್ ನನಗೆ ರಾಶಿಕಾ ಕ್ಯೂಟ್ ಅನ್ನಿಸುತ್ತಾರೆ. ಅವರಿಗೆ ರೋಸ್ ಕೊಡ್ತೀನಿ ಅಂತಾರೆ. ಅಂದಿನಿಂದ ಇಬ್ಬರ ಗೆಳೆತನ ಶುರುವಾಗುತ್ತೆ. ದಿನೇ ದಿನೇ ಅವರು ಕ್ಲೋಸ್ ಆಗಿ ಲವ್ ಮಾಡೋಕೆ ಶುರು ಮಾಡಿದ್ದಾರೆ.
ಪ್ರೀತಿ ಹೇಳಿಕೊಂಡ ಇಬ್ಬರು
ಇನ್ನು ಕಳೆದ ವಾರ ಎಲಿಮಿನೇಶನ್ ಇರಲಿಲ್ಲ. ಆದ್ರೆ ಬಿಗ್ ಬಾಸ್ ಸ್ಪಂದನಾ ಮತ್ತು ರಾಶಿಕಾ ಇಬ್ಬರು ಎಲಿಮಿನೇಟ್ ಆದ್ರಿ ಎಂದು ಹೇಳ್ತಾರೆ. ಆಗ ಮನೆಯಿಂದ ಹೊರಡುವಾಗ ರಾಶಿಕಾ ಸೂರಜ್ ರನ್ನು ಹಗ್ ಮಾಡಿ ಐ ಲ್ ಯು ಅಂತಾರೆ. ಅದಕ್ಕೆ ಸೂರಜ್ ಸಹ ಐ ಲವ್ ಯು ಟೂ ಎಂದು ಹೇಳ್ತಾರೆ. ಆದ್ರೆ ರಾಶಿಕಾ ಎಲಿಮಿನೇಟ್ ಆಗದ ಕಾರಣ ಸೂರಜ್ ತುಂಬಾ ಖುಷಿ ಪಟ್ಟು ಅವರಿಗೆ ಟೈಟ್ ಹಗ್ ಕೊಡ್ತಾರೆ.
ಜನರಿಗೂ ಇಷ್ಟವಾದ ಜೋಡಿ
ಜನರಿಗೂ ಸಹ ಇವರ ಕ್ಯೂಟ್ ಜೋಡಿ ಇಷ್ಟ ಆಗಿದೆ. ಇಬ್ಬರು ಸದಾ ಜೊತೆಯಾಗಿ ಇರ್ತಾರೆ. ಆದ್ರೆ ಪ್ರೀತಿಯಲ್ಲಿ ಬಿದ್ದ ಆಟ ಮರೆಯದಿರಲಿ ಎಂದು ಜನ ಸಲಹೆ ನೀಡಿದ್ದಾರೆ. ನಿಮ್ಮ ಈ ಪ್ರೀತಿ ಹೀಗೆ ಮುಂದುವರೆಯಲಿ.. ಒಳ್ಳೆಯದಾಗಲಿ.



