ಕೊಡಗಿನ ಬೆಡಗಿ ಇನ್ನು ಟಾಲಿವುಡ್ ಸೊಸೆ…! ರಾಜಸ್ಥಾನದ ಅರಮನೆಯಲ್ಲಿ ರಶ್ಮಿಕಾ ಡೆಸ್ಟಿನೇಶನ್ ವೆಡ್ಡಿಂಗ್
Rashmika Mandanna And Vijay Deverakonda Wedding Date: ಕೊಡಗಿನ ಕುವರಿ ರಶ್ಮಿಕಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದಾಕಾಲ ವಿವಾದಗಳಿಂದಲೇ ಸುದ್ದಿ ಮಾಡುವ ರಶ್ಮಿಕಾ ಈ ಭಾರಿ ವೈಯಕ್ತಿಕ ಕಾರಣಕ್ಕೆ ಸದ್ದು ಮಾಡಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ತೀವ್ರ ಚರ್ಚೆ ಹುಟ್ಟು ಹಾಕಿದ್ದ, ರಶ್ಮಿಕಾ ನಿಶ್ಚಿತಾರ್ಥದ ಸುದ್ದಿ ಬಹುತೇಕ ಖಚಿತಗೊಂಡಿದ್ದು ಮುಂದಿನ ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಟಾಲಿವುಡ್ ಸೊಸೆಯಾಗಲಿದ್ದಾರೆ.
ಎಲ್ಲರೂ ಅಂದುಕೊಂಡಂತೆ ರಶ್ಮಿಕಾ ವಿಜಯ್ ದೇವರಕೊಂಡ ಕೈಹಿಡಿಯಲಿದ್ದಾರೆ. ಕಳೆದ ಕೆಲ ತಿಂಗಳಿನಿಂದ ನಟಿ ರಶ್ಮಿಕಾ ಸಾಕಷ್ಟು ಸುದ್ದಿಯಲ್ಲಿದ್ದರು.
ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರನ್ನು ರಶ್ಮಿಕಾ ವಿವಾಹವಾಗಲಿದ್ದಾರೆ ಎಂಬ ಗಾಸಿಪ್ ಜೊತೆ ಇತ್ತೀಚಿಗಷ್ಟೇ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.
ಆದರೆ ಈ ಬಗ್ಗೆ ರಶ್ಮಿಕಾ ಅಥವಾ ಅವರ ಕುಟುಂಬಸ್ಥರು ಯಾವುದೇ ಅಪ್ಡೇಟ್ ನೀಡಿರಲಿಲ್ಲ.
ಈಗ ಸುದ್ದಿಮೂಲಗಳು ನಟಿ ರಶ್ಮಿಕಾ ಮುಂದಿನ ವರ್ಷದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಎಂಬುದನ್ನು ಖಚಿತಪಡಿಸಿವೆ.
ಮೂಲಗಳ ಮಾಹಿತಿ ಪ್ರಕಾರ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ 2026 ರ ಫೆಬ್ರವರಿಯಲ್ಲಿ ನಡೆಯಲಿದೆ.
ರಾಜಸ್ಥಾನದ ಅರಮನೆಯೊಂದರಲ್ಲಿ ರಶ್ಮಿಕಾ ಮತ್ತು ವಿಜಯ್ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳಲಿದ್ದಾರೆ.
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಬಳಿಕ ಟಾಲಿವುಡ್ ಗೆ ಎಂಟ್ರಿಕೊಟ್ಟರು. ಟಾಲಿವುಡ್ ಸಿನಿಮಾ ರಂಗಕ್ಕೆ ಕಾಲಿಟ್ಟ ಮೇಲೆ ಮತ್ತೆ ಹಿಂತಿರುಗಿ ಕನ್ನಡ ಚಿತ್ರರಂಗದತ್ತ ಮುಖಮಾಡಲೇ ಇಲ್ಲ.
ಇದನ್ನೂ ಓದಿ: ಬಿಗ್ ಬಾಸ್ ಮನೆಯೊಳಗೆ ಬಂದ್ರು ಜನ, ಕ್ಯಾಪ್ಟನ್ ಆಯ್ಕೆ ಮಾಡ್ತಾರೆ ಅಭಿಮಾನಿಗಳು, ಮಾಳು ಮುತ್ತಿನಂತ ಮಾತು ಕೇಳಿ!
ಕಿರಿಕ್ ಪಾರ್ಟಿ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಅದ್ದೂರಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಈ ಜೋಡಿಯ ನಡುವೆ ಬರೋಬ್ಬರಿ 12 ವರ್ಷಗಳ ವಯಸ್ಸಿನ ಅಂತರವಿತ್ತು. ಆದರೂ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಕೆಲವೆ ತಿಂಗಳುಗಳಲ್ಲಿ ಎಂಗೇಜಮೆಂಟ್ ಮುರಿದುಕೊಂಡು ದೂರಾಗಿದ್ದರು.
ಸಿನಿಮಾ ಉದ್ದೇಶಕ್ಕಾಗಿ ಚೈನೈನಲ್ಲಿ ಮನೆ ಮಾಡಿದ ರಶ್ಮಿಕಾ ನಿಧಾನಕ್ಕೆ ಸ್ಯಾಂಡಲ್ ವುಡ್ ನಿಂದಲೇ ದೂರವಾದರು. ಮಾತ್ರವಲ್ಲ ಕರ್ನಾಟಕದೊಂದಿಗೆ ಬಹುತೇಕ ನಂಟು ಕೂಡ ಕಳೆದುಕೊಂಡಿದ್ದರು.
ವೃತ್ತಿಪರವಾಗಿ ಸಧ್ಯ ಸಖತ್ ಬ್ಯುಸಿಯಾಗಿರೋ ರಶ್ಮಿಕಾ ಛಾವಾ, ಸಿಕಂದರ್, ಕುಬೇರಾ, ಥಮ್ಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. ಇದೇ ನವೆಂಬರ್ ನಲ್ಲಿ ದಿ ಗರ್ಲ್ ಫ್ರೆಂಡ್ ಸಿನಿಮಾ ರಿಲೀಸ್ ಆಗಿದೆ.
ಇನ್ನು ವಿಜಯ್ ದೇವರಕೊಂಡ ಕೊನೆಯದಾಗಿ ಗೌತಮ ತಿನ್ನಾನೂರಿ ನಿರ್ದೇಶನದ ಕಿಂಗ್ಡಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಪಡೆದಿಲ್ಲ.
ಸದ್ಯ ವಿಜಯ್ ದೇವರಕೊಂಡ ರಾಹುಲ್ ಸಂಕೃತಿಯನ್ ನಿರ್ದೇಶನದ ಪಿರಿಯಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದರೊಂದಿಗೆ ಈ ಯುವಜೋಡಿ ಮದುವೆ ಸಿದ್ಧತೆ ಕೂಡ ನಡೆಸಿದ್ದು, ಈಗಾಗಲೇ ಆಪ್ತರನ್ನು ಆಹ್ವಾನಿಸಲು ಆರಂಭಿಸಿದ್ದಾರಂತೆ
ಇದನ್ನೂ ಓದಿ: ಗಿಲ್ಲಿ-ಕಾವ್ಯ ಸ್ನೇಹಕ್ಕೆ ಸವಾಲು ! ಯಾರು ತಗೋತಾರೆ ಮನೆಯಿಂದ ಬಂದ ಪತ್ರವನ್ನು?



