PM modi meeting : ಪ್ರಧಾನಿ ನೇತೃತ್ವದಲ್ಲಿ ಸಿಎಂಗಳ ಸಭೆ : ಲಾಕ್​ಡೌನ್​ ಬಗ್ಗೆ ಮಹತ್ವದ ಮಾಹಿತಿ

PM modi meeting : ದೇಶದಲ್ಲಿ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆಯೇ 2 ಲಕ್ಷದ ಗಡಿ ದಾಟಿದೆ. ಹೀಗಾಗಿ ಒಂದೊಂದೆ ರಾಜ್ಯಗಳು ನೈಟ್​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂಗಳತ್ತ ಮುಖ ಮಾಡುತ್ತಿವೆ. ಸದ್ಯ ದೇಶದಲ್ಲಿರುವ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸುವ ಸಲುವಾಗಿ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಿಎಂ ಜೊತೆಗೆ ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿದರು. ಈ ಸಭೆಯಲ್ಲಿ ಲಾಕ್​ಡೌನ್​ ಜಾರಿ ಕುರಿತಂತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.


ಎಲ್ಲಾ ಸಿಎಂಗಳಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ ಬಳಿಕ ಪ್ರತಿಯೊಂದು ಸಿಎಂಗಳ ಬಳಿಯಲ್ಲಿ ರಾಜ್ಯಗಳಲ್ಲಿ ಇರುವ ಪ್ರಸ್ತುತ ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸಿದರು. ಲಾಕ್​ಡೌನ್​ ನಿರ್ಧಾರಕ್ಕೆ ಹೋಗುವ ಮುನ್ನ ಹೋಂ ಐಸೋಲೇಷನ್​, ಕೋವಿಡ್​ ಕೇಸುಗಳನ್ನು ಪತ್ತೆ ಹಚ್ಚುವ ವೇಗವನ್ನು ಹೆಚ್ಚಿಸುವುದು, ಕಂಟೈನ್ಮೆಂಟ್​ ವಲಯ ನಿರ್ಮಾಣ ಹಾಗೂ ಸುಸಜ್ಜಿತ ವೈದ್ಯಕೀಯಲ ಸೌಲಭ್ಯಗಳ ಬಗ್ಗೆ ಮೊದಲು ಗಮನಹರಿಸಿ ಎಂದು ಹೇಳಿದ್ದಾರೆ.


ಅಮರಿಕದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿಯೇ ಪ್ರತಿದಿನ 10 ಲಕ್ಷಕ್ಕೂ ಮೀರಿ ಪ್ರಕರಣಗಳು ವರದಿಯಾಗುತ್ತಿದೆ. ನಮ್ಮಲ್ಲಿಯೂ ಕೊರೊನಾ ಹಾಗೂ ಓಮಿಕ್ರಾನ್​ ಪ್ರಕರಣಗಳು ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಆದರೆ ಪ್ರತಿಬಾರಿಯಂತೆ ಈ ಬಾರಿ ಕೂಡ ಈ ಪರಿಸ್ಥಿತಿಯನ್ನು ನಾವು ಸಮರ್ಥವಾಗಿ ಎದುರಿಸಲಿದ್ದೇವೆ ಎಂಬ ನಂಬಿಕೆಯಿದೆ . ಪ್ರತಿಯೊಬ್ಬರೂ ಕೊರೊನಾ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುವಂತಾಹಬೇಕು ಎಂದು ಹೇಳಿದರು.


ಕೊರೊನಾವನ್ನು ತಡೆಗಟ್ಟಲು ಕೇವಲ ಲಾಕ್​ಡೌನ್​ ಮಾತ್ರ ಪರಿಹಾರವಲ್ಲ. ಏಕೆಂದರೆ ಕೇವಲ ಕೊರೊನಾ ಕಡಿಮೆ ಮಾಡುವುದು ಮಾತ್ರವಲ್ಲದೇ ಜನರ ಆರ್ಥಿಕ ಪರಿಸ್ಥಿತಿಯ ಕಡೆಗೂ ನಾವು ಗಮನ ನೀಡಲೇಬೇಕಿದೆ. ಹೀಗಾಗಿ ಆದಷ್ಟು ಲಾಕ್​ಡೌನ್​ ಬದಲು ಏನೆಲ್ಲ ವ್ಯವಸ್ಥೆ ಮಾಡಬಹುದು ಎಂಬುದರ ಕಡೆಗೆ ಆದ್ಯತೆಯನ್ನು ನೀಡಿ. ಕೊರೊನಾ ಲಸಿಕೆಗಳ ಅಭಿಯಾನದ ವೇಗ ಹೆಚ್ಚಳ, ಹೆಚ್ಚೆಚ್ಚು ಕೊರೊನಾ ಟೆಸ್ಟ್, ಕಂಟೈನ್ಮೆಂಟ್​ ವಲಯ ನಿರ್ಮಾಣ, ಹೋಂ ಐಸೋಲೇಷನ್, ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸುವುದು ಹೀಗೆ ನಾನಾ ಕ್ರಮಗಳತ್ತ ಗಮನ ನೀಡಿ ಎಂದು ಹೇಳಿದ್ದಾರೆ.


ಪ್ರತಿಯೊಂದು ರಾಜ್ಯದ ಸಿಎಂಗಳ ಬಳಿಯಲ್ಲಿಯೂ ಪ್ರಧಾನಿ ಮೋದಿ ಕೊರೊನಾ ತಡೆಗೆ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಎಲ್ಲಾ ರಾಜ್ಯದ ಸಿಎಂಗಳ ಬಳಿಯಲ್ಲಿ ಆದಷ್ಟು ಬೇಗ ಕೊರೊನಾ ಲಸಿಕೆಗಳನ್ನು ಜನರಿಗೆ ಪೂರೈಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

PM modi meeting with all state and union territory cm’s

ಇದನ್ನು ಓದಿ : Bikaner Express derails : ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ರೈಲು: ಮೂವರು ದಾರುಣ ಸಾವು

ಇದನ್ನೂ ಓದಿ : UP Assembly Election 2022: ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಟಿಕೆಟ್​ ನೀಡಿದ ಕಾಂಗ್ರೆಸ್​​

Comments are closed.