ಕನ್ನಡಿಗರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಜೀವಮಾನದ ಪ್ರಶಸ್ತಿ

BCCI Naman Awards 2026 | Rahul Dravid | Roger Binny | Mithali Raj: ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ, ವಿವಿಧ ವಿಭಾಗಗಳಲ್ಲಿ ವಿಶ್ವಕಪ್ ಗೆದ್ದ ಭಾರತದ ಐದು ತಂಡಗಳನ್ನು ಈ ಸಮಾರಂಭದಲ್ಲಿ ಒಟ್ಟಿಗೆ ಗೌರವಿಸಲಾಗುತ್ತಿದೆ. ಇದರಲ್ಲಿ 2024ರ ಟಿ20 ವಿಶ್ವಕಪ್ ಮತ್ತು 2026ರ ವಿಶ್ವಕಪ್ ವಿಜೇತ ತಂಡಗಳು ಸೇರಿವೆ.

ಬಿಸಿಸಿಐ ನೀಡುವ 2026ನೇ ಸಾಲಿನ ‘ನಮನ್ ಪ್ರಶಸ್ತಿ’ಗಳ (BCCI Naman Awards 2026) ಘೋಷಣೆಯಾಗಿದ್ದು, ಭಾರತೀಯ ಕ್ರಿಕೆಟ್‌ನ ದಿಗ್ಗಜರಿಗೆ ಈ ಬಾರಿ ಅತ್ಯುನ್ನತ ಗೌರವ ಲಭಿಸಿದೆ. ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ (Rahul Dravid) ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ರೋಚರ್ ಬಿನ್ನಿ ಅವರಿಗೆ  (Roger Binny) ಪ್ರತಿಷ್ಠಿತ ‘ಕರ್ನಲ್ ಸಿ.ಕೆ. ನಾಯುಡು ಜೀವಮಾನದ ಸಾಧನೆ ಪ್ರಶಸ್ತಿ’ ನೀಡಲಾಗುತ್ತಿದೆ. ಮಹಿಳಾ ಕ್ರಿಕೆಟ್‌ನ ದಂತಕಥೆ ಮಿಥಾಲಿ ರಾಜ್ ಅವರಿಗೆ (Mithali Raj) ಮಹಿಳಾ ವಿಭಾಗದ ಜೀವಮಾನದ ಸಾಧನೆ ಪ್ರಶಸ್ತಿ ಘೋಷಿಸಲಾಗಿದೆ.

ಅತ್ಯುತ್ತಮ ಅಂತರಾಷ್ಟ್ರೀಯ ಕ್ರಿಕೆಟಿಗರು
ಯುವ ಬ್ಯಾಟರ್ ಶುಭ್‌ಮನ್ ಗಿಲ್ ಅವರು ಪುರುಷರ ವಿಭಾಗದಲ್ಲಿ ‘ಪೋಲಿ ಉಮ್ರಿಗರ್’ (ಅತ್ಯುತ್ತಮ ಅಂತರಾಷ್ಟ್ರೀಯ ಕ್ರಿಕೆಟಿಗ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಸ್ಮೃತಿ ಮಂಧಾನ ಅವರು ಈ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮೀನು ಮಾಯವಾಗಿದ್ದಕ್ಕೆ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಕೊಲೆ: ಕೊನೆಗೆ ಬಯಲಾಯ್ತು ಅಸಲಿ ಸತ್ಯ!

ಐತಿಹಾಸಿಕ ತಂಡಗಳ ಸನ್ಮಾನ
ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ, ವಿವಿಧ ವಿಭಾಗಗಳಲ್ಲಿ ವಿಶ್ವಕಪ್ ಗೆದ್ದ ಭಾರತದ ಐದು ತಂಡಗಳನ್ನು ಈ ಸಮಾರಂಭದಲ್ಲಿ ಒಟ್ಟಿಗೆ ಗೌರವಿಸಲಾಗುತ್ತಿದೆ. ಇದರಲ್ಲಿ 2024ರ ಟಿ20 ವಿಶ್ವಕಪ್ ಮತ್ತು 2026ರ ವಿಶ್ವಕಪ್ ವಿಜೇತ ತಂಡಗಳು ಸೇರಿವೆ.

ಯುವ ಪ್ರತಿಭೆಗಳಿಗೆ ಮನ್ನಣೆ
ದೇಶೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಮತ್ತು ವಿಕೆಟ್ ಪಡೆದ ಆಟಗಾರರಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಹರ್ಷಿತ್ ರಾಣಾ ಮತ್ತು ಎನ್. ಶ್ರೀ ಚರಣಿ ಅವರು ಅತ್ಯುತ್ತಮ ಅಂತರಾಷ್ಟ್ರೀಯ ಪದಾರ್ಪಣೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories