ಬೆಂಗಳೂರಿನಲ್ಲಿ ಐಪಿಎಲ್ ಫೈನಲ್ ಇಲ್ಲ! ಫ್ಯಾನ್ಸ್ಗೆ ನಿರಾಶೆ ತಂದ ಕೆಎಸ್ಸಿಎ ನಡೆ; ಅಸಲಿ ಕಾರಣ ಇಲ್ಲಿದೆ ನೋಡಿ..
ರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಎಡವಟ್ಟಿನಿಂದಾಗಿ ಇದೀಗ ಐಪಿಎಲ್ ಫೈನಲ್ ಪಂದ್ಯಾವಳಿ ಬೆಂಗಳೂರಿನಿಂದ ಅಹಮದಾಬಾದ್ಗೆ ಶಿಫ್ಟ್ ಆಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ ತೊಡಕುಗಳನ್ನೆಲ್ಲ ನಿವಾರಿಸಿ, ಈ ಬಾರಿಯ ಐಪಿಎಲ್ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆಯುವಂತೆ ಮಾಡಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಎಡವಟ್ಟಿನಿಂದಾಗಿ ಇದೀಗ ಐಪಿಎಲ್ ಫೈನಲ್ ಪಂದ್ಯಾವಳಿ ಬೆಂಗಳೂರಿನಿಂದ ಅಹಮದಾಬಾದ್ಗೆ ಶಿಫ್ಟ್ ಆಗಿದೆ. 10 ಸಾವಿರಕ್ಕೂ ಅಧಿಕ ಉಚಿತ ಟಿಕೆಟ್ಗಳಿಗೆ ಕೆಎಸ್ಸಿಎ ಬೇಡಿಕೆಯಿಟ್ಟಿದ್ದೇ ಮುಖ್ಯ ಕಾರಣ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಹಿತಿ ನೀಡಿದ್ದಾರೆ.
ಈ ವಿಚಾರವಾಗಿ ಮಾಹಿತಿ ನೀಡಿದ ದೇವಜಿತ್ ಸೈಕಿಯಾ, ಐಪಿಎಲ್ ಶಿಷ್ಟಾಚಾರದ ಪ್ರಕಾರ 15 ಪರ್ಸೆಂಟ್ನಷ್ಟು ಮಾತ್ರ ಉಚಿತ ಟಿಕೆಟ್ಗಳನ್ನು ನೀಡಲು ನಮಗೆ ಅವಕಾಶ ಇದೆ. ಆದರೆ ಮೇ 2ರಂದು ಕೆಎಸ್ಸಿಎ ನಮಗೆ ಕಳುಹಿಸಿದ ಇ ಮೇಲ್ನಲ್ಲಿ 10 ಸಾವಿರಕ್ಕೂ ಅಧಿಕ ಉಚಿತ ಟಿಕೆಟ್ಗೆ ಬೇಡಿಕೆ ಇಡಲಾಗಿತ್ತು. ಇದರಲ್ಲಿ 700 ಟಿಕೆಟ್ಗಳು ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ರಾಜ್ಯ ಸರ್ಕಾರಕ್ಕೆ ಬೇಕು ಎಂದು ಹೇಳಲಾಗಿತ್ತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಉಚಿತ ಟಿಕೆಟ್ ನೀಡುವುದು ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹೊಸ ಮಾಲೀಕರಿಗೆ ಹಸ್ತಾಂತರ ಮತ್ತಷ್ಟು ವಿಳಂಬ: ರಾಜಸ್ಥಾನ ರಾಯಲ್ಸ್ ಪಾಲಿಗೆ ಮುಗಿಯದ ಸಂಕಷ್ಟ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 36 ಸಾವಿರ ಆಸನ ವ್ಯವಸ್ಥೆಯಿದೆ. ಇದರಲ್ಲಿ 10 ಸಾವಿರಕ್ಕೂ ಅಧಿಕ ಆಸನವನ್ನು ಉಚಿತವಾಗಿ ವಿತರಿಸಿದರೆ, ಅಭಿಮಾನಿಗಳಿಗೆ ಕೆಲವೇ ಕೆಲವು ಟಿಕೆಟ್ಗಳು ಬಾಕಿ ಉಳಿಯುತ್ತದೆ. ಇದು ಸುಪ್ರೀಂ ಕೋರ್ಟ್ ರೂಪಿಸಿರುವ ನಿಯಮಾವಳಿಗಳಿಗೆ ವಿರುದ್ಧವಾಗಿದೆ.ಹೀಗಾಗಿ 1.30 ಲಕ್ಷ ಸಾಮರ್ಥ್ಯವಿರುವ ಅಹಮದಾಬಾದ್ನ ಮೋದಿ ಸ್ಟೇಡಿಯಂಗೆ ಫೈನಲ್ ಪಂದ್ಯಾವಳಿ ಸ್ಥಳಾಂತರಿಸಿದ್ದೇವೆ ಎಂದು ಸೈಕಿಯಾ ಮಾಹಿತಿ ನೀಡಿದ್ದಾರೆ.



