Smriti Mandana: ಮದುವೆ ರದ್ದತಿ ಬಳಿಕ ಮೊದಲ ಬಾರಿ ಇನ್​ಸ್ಟಾದಲ್ಲಿ ಸ್ಮೃತಿ ಮಂದಾನ ಪ್ರತ್ಯಕ್ಷ : ನಿಶ್ಚಿತಾರ್ಥದ ಉಂಗುರು ಮಾಯ

Smriti Mandana: ಟೀಂ ಇಂಡಿಯಾ ಮಹಿಳಾ ಕ್ರಿಕೆಟ್​ ಆಟಗಾರ್ತಿ ಸ್ಮೃತಿ ಮಂದಾನ ಸದ್ಯ ತಮ್ಮ ಮದುವೆಯ ಕಾರಣದಿಂದಲೇ ಸುದ್ದಿಯಲ್ಲಿದ್ದಾರೆ. ಅದ್ಧೂರಿ ಸಂಗೀತ್​, ಮೆಹಂದಿ ಕಾರ್ಯಕ್ರಮಗಳ ಬಳಿಕ ಏಕಾಏಕಿ ಸ್ಮೃತಿ ಮಂದಾನ ಮದುವೆ ರದ್ದಾಗಿತ್ತು. ಸ್ಮೃತಿ ಮಂದಾನ ಮದುವೆಯ ದಿನದಂದೇ ಅವರ ತಂದೆ ಶ್ರೀನಿವಾಸ್​ ಆಸ್ಪತ್ರೆಗೆ ದಾಖಲಾಗಿದ್ದು ಮದುವೆ ಮುಂದೂಡಲ್ಪಟ್ಟಿತ್ತು.

ಪರಸ್ಪರ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದ ಸ್ಮೃತಿ ಮಂದಾನ ಹಾಗೂ ಬಾಲಿವುಡ್​ ಸಂಗೀತ ನಿರ್ದೇಶಕ ಪಲಾಶ್​ ಮುಚ್ಚಲ್​ ಅವರ ಮದುವೆ ವಿಚಾರ ಭಾರೀ ಚರ್ಚೆಯಾಗಿತ್ತು. ಒಂದೆಡೆ ಸ್ಮೃತಿ ತಂದೆ ಶ್ರೀನಿವಾಸ್​ ಹಾಗೂ ಪಲಾಶ್​ ಮುಚ್ಚಲ್​ ಆಸ್ಪತ್ರೆ ಸೇರಿದ್ರೆ ಇತ್ತ ಸ್ಮೃತಿ ಮಂದಾನ ತಮ್ಮ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ್ದರು.

ಈ ಎಲ್ಲದರ ನಡುವೆ ಇದೀಗ ಸ್ಮೃತಿ ಮಂದಾನ ಮತ್ತೊಮ್ಮೆ ಇನ್​ಸ್ಟಾಗ್ರಾಂನಲ್ಲಿ ಪ್ರತ್ಯಕ್ಷರಾಗಿದ್ದಾರೆ . ಟೂತ್​ಪೇಸ್ಟ್​ ಬ್ರ್ಯಾಂಡ್​ ಒಂದರ ಜಾಹೀರಾತಿನಲ್ಲಿ ಸ್ಮೃತಿ ಮಂದಾನಾ ಕಾಣಿಸಿಕೊಂಡಿದ್ದು ಈ ಜಾಹಿರಾತನ್ನು ತಮ್ಮ ಇನ್​ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಚಾರ ಏನಂದ್ರೆ ಈ ಜಾಹಿರಾತಿನಲ್ಲಿ ಮಂದಾನಾ ಅವರ ಕೈಯಲ್ಲಿ ಎಂಗೇಜ್​ಮೇಂಟ್​ ರಿಂಗ್​ ಇಲ್ಲದಿರುವುದು ಅಭಿಮಾನಿಗಳ ಗಮನಕ್ಕೆ ಬಂದಿದೆ.ಆದರೆ ಇದು ನಿಶ್ಚಿತಾರ್ಥಕ್ಕೂ ಮುನ್ನ ಚಿತ್ರೀಕರಿಸಿದ ಜಾಹಿರಾತು ಆಗಿರಬಬಹುದೇ ಎಂಬ ಅನುಮಾನ ಕೂಡ ಇದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Also Read: Kundapura Rachita Hatwar: ಬಿಸಿಸಿಐ ವನಿತೆಯರ ಅಂಡರ್-19 ದೇಶಿ ಏಕದಿನ ಕ್ರಿಕೆಟ್ ಟೂರ್ನಿಗೆ ಕುಂದಾಪುರದ ರಚಿತಾ ಹತ್ವಾರ್ ಕರ್ನಾಟಕ ತಂಡದ ನಾಯಕಿ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸ್ಮತಿ ಮಂದಾನ ಹಾಗೂ ಮುಚ್ಚಲ್​ ನವೆಂಬರ್​ 23ರಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು.ಆದರೆ ವಿವಾಹದ ದಿನದಂದೇ ಸ್ಮೃತಿ ತಂದೆ ಶ್ರೀನಿವಾಸ್​ ಅನಾರೋಗ್ಯದಿಂದ ಸಾಂಗ್ಲಿಯ ಆಸ್ಪತ್ರೆಗೆ ದಾಖಲಾಗಿದ್ದರು.ಹೀಗಾಗಿ ಮದುವೆ ಅನಿಶ್ಚಿತವಾಗಿ ಮುಂದೂಡಲ್ಪಟ್ಟಿತ್ತು.

ಇದಾದ ಬಳಿಕ ಮಾರನೇ ದಿನವೇ ಮುಚ್ಚಲ್​ ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಮದುವೆಯ ಮರುದಿನಾಂಕದ ಬಗ್ಗೆ ಎರಡೂ ಕುಟುಂಬಗಳಿಂದ ಈವರೆಗೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ .

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories