ಉದ್ಯಮಿ ಆನಂದ್ ಮಹೇಂದ್ರರನ್ನೇ ಮೋಡಿ ಮಾಡಿದೆ ಬಾಲಕನ ಕ್ಯೂಟ್ ವಿಡಿಯೋ !

0

ಮುಂಬೈ : ದೇಶದ ಯಾವುದೇ ಮೂಲೆಯಲ್ಲಿ ಗತಿಸುವ ಅಪರೂಪದ ವಿಡಿಯೋಗಳಿಗೆ ಮನಸೋಲುವವರಲ್ಲಿ ಮೊದಲಿಗರು ಉದ್ಯಮಿ ಆನಂದ ಮಹೇಂದ್ರ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವಿಡಿಯೋ ನೋಡಿ ಅದೆಷ್ಟೋ ಮಂದಿಗೆ ಸಹಾಯ ಹಸ್ತ ಚಾಚಿದ್ದಾರೆ. ಇದೀಗ ಪುಟ್ಟ ಬಾಲಕನ ಆ ಹಳೆಯ ವಿಡಿಯೋಗೆ ಮಹೇಂದ್ರ ಗ್ರೂಪ್ ನ ಚೇರ್ಮೆನ್ ಆನಂದ್ ಮಹೇಂದ್ರ ಫುಲ್ ಫಿದಾ ಆಗಿದ್ದಾರೆ.

ಹೌದು, ಅರುಣಾಚಲ ಪ್ರದೇಶದ ಬಾಲಕನೋರ್ವ ರಾಷ್ಟ್ರಗೀತೆಯಾಗಿರುವ ಜನಗಣನವನ್ನು ಉತ್ಸಾಹದಿಂದ ಹಾಡಿರುವ ವಿಡಿಯೋವನ್ನು ಉದ್ಯಮಿ ಆನಂದ್ ಮಹೇಂದ್ರ ಹಂಚಿಕೊಂಡಿದ್ದಾರೆ. ಮೂರು ವರ್ಷಗಳಷ್ಟು ಹಳೆಯದಾಗಿರುವ ಈ ವಿಡಿಯೋದಲ್ಲಿ ಪುಟ್ಟ ಬಾಲಕನೋರ್ವ ತನ್ನ ಮನೆಯಂಗಳದಲ್ಲಿ ನಿಂತು ರಾಷ್ಟ್ರಗೀತೆಯನ್ನು ಹಾಡುತ್ತಾನೆ.

ರಾಷ್ಟ್ರಗೀತೆಯನ್ನು ಹಾಡುವಾಗ ಹಲವು ಬಾರಿ ತಪ್ಪಾಗಿ ಉಚ್ಚರಿಸುತ್ತಾನೆ. ಮಾತ್ರವಲ್ಲ ಹಾಡನ್ನ ಮರೆಯುತ್ತಾನೆ. ಆದರೆ ಈ ವಿಡಿಯೋವನ್ನು ಆನಂದ್ ಮಹೇಂದ್ರ ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ನೋಡಿ ಸೇವ್ ಮಾಡಿ ಇಟ್ಟುಕೊಂಡಿದ್ದಾರೆ. ಪ್ರತೀ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿಯೂ ಈ ವಿಡಿಯೋವನ್ನು ನೋಡಿ ಉತ್ಸಾಹವನ್ನು ತುಂಬಿಕೊಳ್ಳುತ್ತಿದ್ದಾರಂತೆ.

ಬಾಲಕನ ವಿಡಿಯೋದ ಜೊತೆಗೆ ಟ್ವಿಟ್ ಮಾಡಿರುವ ಆನಂದ್ ಮಹೇಂದ್ರ, ಬಾಲಕನ ರಾಷ್ಟ್ರಗೀತೆ ಬಗ್ಗೆ ಉತ್ತಮ ಚಿತ್ರಣವನ್ನು ಮೂಡಿಸುತ್ತದೆ ಅಲ್ಲದೇ ಬಾಲಕನ ಮುಗ್ದತೆ ಮತ್ತು ಏಕಾಗ್ರತೆ ಯಾವಾಗಲೂ ನನ್ನನ್ನು ಸೆಳೆಯುತ್ತದೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

Leave A Reply

Your email address will not be published.