carry bag : ಕ್ಯಾರಿ ಬ್ಯಾಗ್​​ಗೆ 12 ರೂ. ಶುಲ್ಕ ವಿಧಿಸಿ 21 ಸಾವಿರ ರೂ. ದಂಡ ತೆತ್ತ ಬಟ್ಟೆ ಅಂಗಡಿ..!

carry bag: ಅಂಗಡಿಗಳಲ್ಲಿ ಏನನ್ನಾದರೂ ಖರೀದಿ ಮಾಡಿದಾಗ ಅವರು ನಮಗೆ ಕ್ಯಾರಿ ಬ್ಯಾಗುಗಳನ್ನು ನೀಡುತ್ತಾರೆ. ಅಂಗಡಿಗಳ ಜಾಹೀರಾತುಗಳನ್ನು ಹೊಂದಿರುವ ಈ ಕ್ಯಾರಿ ಬ್ಯಾಗುಗಳು ಉಚಿತವಾಗಿಯೇ ಸಿಗುತ್ತದೆ. ಆದರೆ ಆಂಧ್ರ ಪ್ರದೇಶದ ಮಲ್ಟಿ ಬ್ರ್ಯಾಂಡ್​​ ಅಂಗಡಿಯ ಮಾಲೀಕರೊಬ್ಬರು ಅಂಗಡಿ ಜಾಹೀರಾತನ್ನು ಹೊಂದಿದ್ದ ಕ್ಯಾರಿ ಬ್ಯಾಗಿಗೆ ಶುಲ್ಕ ವಿಧಿಸಲು ಹೋಗಿ ಭಾರೀ ದಂಡವನ್ನು ತೆತ್ತಿದ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಅಂಗಡಿಯ ಲೋಗೋವನ್ನು ಹೊಂದಿದ್ದ ಕ್ಯಾರಿ ಬ್ಯಾಗಿಗೆ ಶುಲ್ಕ ವಿಧಿಸಿದ ಕಾರಣ ಗ್ರಾಹಕನಿಗೆ ಪರಿಹಾರ ನೀಡುವಂತೆ ಆಂಧ್ರ ಪ್ರದೇಶದ ಗ್ರಾಹಕ ನ್ಯಾಯಾಲಯವು ಅಂಗಡಿ ಮಾಲೀಕರಿಗೆ ಸೂಚನೆ ನೀಡಿದೆ.


ವಿಶಾಖಪಟ್ಟಣಂನ ವಕೀಲ ಸೀಪನ ರಾಮರಾವ್​ ಎಂಬವರು ಮಲ್ಟಿ ಬ್ರ್ಯಾಂಡ್​ ಚಿಲ್ಲರೆ ವ್ಯಾಪಾರಿಯ ಅಂಗಡಿಯೊಂದರಿಂದ 600 ರೂಪಾಯಿ ಮೌಲ್ಯದ ಬಟ್ಟೆಗಳನ್ನು ಖರೀದಿ ಮಾಡಿದ್ದರು. ಈ ವೇಳೆ ಸೀಪನ ರಾಮ ರಾವ್​ಗೆ ಅಂಗಡಿಯ ಸಿಬ್ಬಂದಿ ಕ್ಯಾರಿ ಬ್ಯಾಗ್​ ಬೇಕು ಅಂದರೆ ಹೆಚ್ಚುವರಿಯಾಗಿ 12 ರೂಪಾಯಿ ನೀಡಬೇಕು ಎಂದು ಹೇಳಿದ್ದಾರೆ. ಕ್ಯಾಶಿಯರ್​ ಬಳಿ ತಾನು ಕ್ಯಾರಿ ಬ್ಯಾಗ್​ಗೆ ಹಣ ನೀಡಲು ಸಿದ್ಧನಿಲ್ಲ ಎಂದು ಹೇಳಿದ ಸೀಪನ ರಾಮ ರಾವ್​ ಈ ಬಗ್ಗೆ ಅಂಗಡಿ ವ್ಯವಸ್ಥಾಪಕರ ಜೊತೆಯಲ್ಲಿಯೂ ಚರ್ಚೆ ನಡೆಸಿದ್ದರು.


ಅಂಗಡಿ ವ್ಯವಸ್ಥಾಪಕ ಕೂಡ ಉಚಿತವಾಗಿ ಕ್ಯಾರಿ ಬ್ಯಾಗ್​ನ್ನು ನೀಡಲು ನಿರಾಕರಿಸಿದ್ದಾರೆ.ಅಂಗಡಿಯ ಲೋಗೋವನ್ನು ಹೊಂದಿರುವ ಕ್ಯಾರಿ ಬ್ಯಾಗುಗಳಿಗೆ ಶುಲ್ಕ ವಿಧಿಸುವುದು ಕಾನೂನು ಬಾಹಿರ ಎಂದು ಸೀಪನ ರಾಮರಾವ್​ ಹೇಳಿದರೂ ಸಹ ಕೇಳದ ವ್ಯವಸ್ಥಾಪಕ ಸೀಪನ ಮೇಲೆ ಕೂಗಾಡಿದ್ದಾರೆ.


ಈ ಘಟನೆ ಬಳಿಕ ಗ್ರಾಹಕ ಸೀಪನ ರಾಮರಾವ್​​ ತನಗೆ ಎದುರಾಗಿರುವ ಮಾನಸಿಕ ಕಿರುಕುಳಕ್ಕೆ ಪರಿಹಾರ ನೀಡುವಂತೆ ನಗರದ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.


ಈ ಸಂಬಂಧ ವಾದ ವಿವಾದಗಳನ್ನು ಆಲಿಸಿದ ವಿಶಾಖಪಟ್ಟಣಂನ ಜಿಲ್ಲಾ ಗ್ರಾಹಕರ ಆಯೋಗವು ಅಂಗಡಿ ಮಾಲೀಕರು ಗ್ರಾಹಕ ಸೀಪನ ರಾಮ್​ ರಾವ್​ಗೆ ಪರಿಹಾರದ ರೂಪದಲ್ಲಿ 21 ಸಾವಿರ ರೂಪಾಯಿಗಳನ್ನು ನೀಡಬೇಕು. ಹಾಗೂ ಕಾನೂನು ಶುಲ್ಕದ ರೂಪದಲ್ಲಿ 1500 ರೂಪಾಯಿಗಳು ಭರಿಸಬೇಕು. ಹಾಗೂ ಗ್ರಾಹಕರಿಂದ ಕ್ಯಾರಿ ಬ್ಯಾಗ್​ ಶುಲ್ಕ ಎಂದು ಪಡೆದುಕೊಂಡಿದ್ದ 12 ರೂಪಾಯಿಗಳನ್ನು ವಾಪಸ್​ ನೀಡಬೇಕು ಎಂದು ಆದೇಶ ಹೊರಡಿಸಿದೆ.
ಯಾವುದೇ ಅಂಗಡಿಗಳು ಲೋಗೋವನ್ನು ಹೊಂದಿರುವಂತಹ ಬ್ಯಾಗುಗಳಿಗೆ ಶುಲ್ಕವನ್ನು ವಿಧಿಸುವಂತಿಲ್ಲ. ಕಳೆದ ವರ್ಷ ಕೂಡ ಹೈದರಾಬಾದ್​ ಗ್ರಾಹಕ ಆಯೋಗವು ಈ ರೀತಿ ಮಾಡುವುದು ಕಾನೂನು ಬಾಹಿರ ಎಂದು ತೀರ್ಪು ನೀಡಿತ್ತು.

ಇದನ್ನು ಓದಿ : DK Shivakumar : ನನ್ನ ಹೆಸರು ಕೇಳಿದರೆ ಕೆಲವರಿಗೆ ಶಕ್ತಿ ಬರುತ್ತೆ : ಡಿ.ಕೆ ಶಿವಕುಮಾರ್ ವ್ಯಂಗ್ಯ

ಇದನ್ನೂ ಓದಿ :basavaraj bommai : ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಹತ್ವದ ಹೇಳಿಕೆ ನೀಡಿದ ಸಿಎಂ ಬೊಮ್ಮಾಯಿ

Retailer charged man Rs 12 for carry bag. Now it has to pay him Rs 21,000 compensation

Comments are closed.