Constipation In Kids : ಮಕ್ಕಳಲ್ಲಿ ಕಾಣಿಸುವ ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ಚಳಿಗಾಲದಲ್ಲಿ (Winter) ಮಲಬದ್ಧತೆ (Constipation) ಒಂದು ಸಾಮಾನ್ಯ ತೊಂದರೆಯಾಗಿದೆ. ಅದರಲ್ಲೂ ಫೈಬರ್‌ ಅಂಶಗಳಿರುವ ಆಹಾರಗಳನ್ನು ತಿನ್ನದ ಮತ್ತು ಸಾಕಷ್ಟು ನೀರು ಕುಡಿಯದ ಮಕ್ಕಳಲ್ಲಿ ಈ ತೊಂದರೆ (Constipation In Kids) ಸ್ವಲ್ಪ ಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತದೆ. ಜಂಕ್‌ಫುಡ್‌ ಮತ್ತು ಕರಿದ ಪದಾರ್ಥಗಳೇ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಅವುಗಳು ಮಕ್ಕಳ ಕರುಳಿನ ಚಲನೆಯಲ್ಲಿ ನೋವು ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಇಂತಹ ಆಹಾರಗಳ ಅಭ್ಯಾಸಗಳೇ ಕಾಲಾಂತರದಲ್ಲಿ ಮಲಬದ್ಧತೆಯನ್ನು ಉಂಟು ಮಾಡುತ್ತದೆ. ಸರಿಯಾದ ಜೀವನಶೈಲಿಯಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಮಕ್ಕಳು ತಿನ್ನುವ ಆಹಾರದಲ್ಲಿಯೂ ಫೈಬರ್‌, ಹಸಿರು ತರಕಾರಿಗಳು ಮತ್ತು ದ್ರವ ಪದಾರ್ಥಗಳು ಇರುವಂತೆ ನೋಡಿಕೊಳ್ಳಬೇಕು. ನಿಮ್ಮ ಮಗು ವಾರಕ್ಕೆ ಮೂರು ಬಾರಿಗಿಂತಲೂ ಕಡಿಮೆ ಮಲವಿಸರ್ಜನೆ ಮಾಡುತ್ತಿದ್ದರೆ ಮತ್ತು ಹೊಟ್ಟೆ ನೋವಿನ ಅನುಭವವಾಗುತ್ತಿದ್ದರೆ ಆಗ ಮಗುವಿನಲ್ಲಿ ಮಲಬದ್ಧತೆಯ ಸಮಸ್ಯೆಯಿದೆ ಎಂದು ಅರ್ಥ.

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಹೀಗೆ ಮಾಡಿ :

ಜಂಕ್‌ ಫುಡ್‌ಗಳಿಗೆ ನೋ ಹೇಳಿ:
ಮಕ್ಕಳು ಜಂಕ್‌ ಫುಡ್‌ಗಳನ್ನು ಅತಿಯಾಗಿ ತಿನ್ನಲು ಬಯಸುತ್ತಿದ್ದರೆ ತಕ್ಷಣ ಅವುಗಳನ್ನು ನಿಲ್ಲಿಸಿ. ದೀರ್ಘಕಾಲದ ಮಲಬದ್ಧತೆಯಿಂದಾಗುವ ಪರಿಣಾಮಗಳನ್ನು ತಪ್ಪಿಸಲು ಮನೆಯಲ್ಲಿಯೇ ತಯಾರಿಸಿದ ಬೆಚ್ಚಗಿನ ಆಹಾರಗಳನ್ನು ನೀಡಿ. ಚೆನ್ನಾಗಿ ಬೇಯಿಸಿದ ತರಕಾರಿಗಳು, ಮೊಳಕೆಯೊಡೆದ ಕಾಳುಗಳನ್ನು ಕೊಡಿ. ಇವು ದೇಹಕ್ಕೆ ಪೌಷ್ಠಿಕಾಂಶಗಳನ್ನು ಒದಗಿಸುತ್ತವೆ.

ಹಾಲು ಮತ್ತು ತುಪ್ಪ ಕೊಡಿ :
ಆಯುರ್ವೇದದಲ್ಲಿ ಹೇಳಿರುವ ಅತ್ಯಂತ ಪರಿಣಾಮಕಾರಿಯಾದ ಮನೆಮದ್ದು ಎಂದರೆ ಒಂದು ಗ್ಲಾಸ್‌ ಬಿಸಿ ಹಾಲಿಗೆ ಒಂದು ಚಮಚ ತುಪ್ಪ ಸೇರಿಸಿ ಕುಡಿಯುವುದು. ಇದು ದೀರ್ಘಕಾಲದ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ಆಯುರ್ವೇದಲ್ಲಿ ಹೇಳಿರುವಂತೆ ತುಪ್ಪವು ಜೀರ್ಣಕಾರಿಯಾಗಿದ್ದು, ಮಲಬದ್ಧತೆ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ.

ಅಂಜೂರ ಹಣ್ಣನ್ನು ಕೊಡಿ :
ಅತಿ ಹೆಚ್ಚಿನ ಫೈಬರ್‌ ಅಂಶವಿರು ಅಂಜೂರ, ಕರುಳಿನ ಚಲನೆಯನ್ನು ಸರಳವಾಗಿಸುತ್ತದೆ. ಇದು ದೀರ್ಘಕಾಲದ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ. ಮಕ್ಕಳ ಲಂಚ್‌ ಬಾಕ್ಸ್‌ಗೂ ಈ ಹಣ್ಣನ್ನು ಹಾಕಿ. ಇದು ಅಜೀರ್ಣ, ಡೈಯೇರಿಯಾ ಮತ್ತು ಮುಂತಾದ ಕರುಳಿನ ಸಮಸ್ಯೆಯನ್ನು ಗುಣಪಡಿಸುತ್ತದೆ. ಹುರಿದ ಸೋಂಪ್‌ ಕಾಳುಗಳ ಸಹ ಮಲಬದ್ಧತೆಯನ್ನು ನಿವಾರಿಸಬಲ್ಲದು.

ಬೇಲದ ಹಣ್ಣಿನ ಶರಬತ್ತು ಕೊಡಿ :
ಬೇಲದ ಹಣ್ಣು ಹೆಚ್ಚಾಗಿ ಬೇಸಿಗೆಯಲ್ಲಿ ಸಿಗುತ್ತದೆ. ಇದರಿಂದ ಮಾಡಿದ ಶರಬತ್ತು ಬಹಳ ಬೇಗನೆ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಜೀರ್ಣಕಾರಿಯಾಗಿದೆ.

ಇದನ್ನೂ ಓದಿ : Most Searched Recipe on Google in 2022 : ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ರೆಸಿಪಿ ಯಾವುದು ಗೊತ್ತಾ…

ಇದನ್ನೂ ಓದಿ :Knee Pain Tips:ವಿಪರೀತ ಮಂಡಿ ನೋವಿದ್ದರೆ ಈ ಪಾನಿಯಾ ಟ್ರೈ ಮಾಡಿ

(Constipation In Kids These tips helps to cure constipation)

Comments are closed.