ಜೋಳ ತಿಂದ ಕೂಡಲೇ ನೀರು ಕುಡಿತೀರಾ ? ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಲೇ ಬೇಡಿ !

0
  • ರಕ್ಷಾ ಬಡಾಮನೆ

ಮಳೆಗಾಲವಿರಲಿ, ಚಳಿಗಾಲವಿರಲಿ ಬಾಯಿಯ ಚಪಲಕ್ಕೆ ಜೋಳ ಸಾಕಷ್ಟು ರುಚಿಸುತ್ತೆ. ಮಳೆಗಾಲದಲ್ಲಂತೂ ರಸ್ತೆ ಬದಿಯಲ್ಲಿ ಸಿಗುವ ಬಿಸಿ ಬಿಸಿ ಜೋಳದ ರುಚಿಯನ್ನು ನೋಡಲೇ ಬೇಕು ಅಂತಾ ಅನಿಸದೆ ಇರದು.

ಹಲವರು ಜೋಳವನ್ನು ಹಸಿಯಾಗಿಯೇ ತಿಂದ್ರೆ, ಇನ್ನೂ ಕಲೆವರು ಬೇಯಿಸಿ ತಿನ್ನುತ್ತಾರೆ. ಜೋಳಕ್ಕೆ ಬಟರ್, ಸ್ಪೈಸಿ ಐಟಂಗಳನ್ನು ಮಿಕ್ಸ್ ಮಾಡಿ ಸೇವನೆ ಮಾಡ್ತಾರೆ. ಇನ್ನೂ ಹಲವರು ಜೋಳವನ್ನು ಕೆಂಡದಲ್ಲಿ ಸುಟ್ಟು ತಿನ್ನುತ್ತಾರೆ.

ಬಾಯಿಗೆ ಎಷ್ಟು ರುಚಿಯನ್ನು ನೀಡುತ್ತದೆಯೋ ಅಷ್ಟೋ ಆರೋಗ್ಯದ ದೃಷ್ಟಿಯಿಂದಲೂ ಜೋಳ ಹೆಚ್ಚು ಉತ್ತಮ ಆಹಾರ. ಆರೋಗ್ಯಕ್ಕೆ ಒಳಿತು.

ಹೀಗಂತ ನಿಯಮ ಮೀರಿದ್ರೆ ಅಷ್ಟೇ ಅಪಾಯವೂ ಹೌದು. ಅದ್ರಲ್ಲೂ ಜೋಳ ತಿಂದ ಕೂಡಲೇ ಯಾವುದೇ ಕಾರಣಕ್ಕೂ ನೀರು ಕುಡಿಯಲೇ ಬಾರದು.

ಜೋಳ ತಿಂದ ತಕ್ಷಣ ಯಾವುದೇ ಕಾರಣಕ್ಕೂ ನೀರನ್ನನು ಕುಡಿಯಲೇ ಬಾರದು. ಯಾಕೆಂದ್ರೆ ಜೋಳ ತಿಂದು ನೀರು ಕುಡಿಯುವುದು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿಯೇ ಪೂರ್ವಜರು ಜೋಳ ಸೇವಿಸಿದ ಬಳಿಕ ನೀರು ಕುಡಿಯಬಾರದು ಎನ್ನುತ್ತಿದ್ದರು.

ಜೋಳ ತಿಂದ ಬಳಿಕ ನೀರು ಕುಡಿಯಲು ಸಾಕಷ್ಟು ಅಂತರ ಪಾಲಿಸಬೇಕಾಗುತ್ತದೆ. ಏಕೆಂದರೆ ಜೋಳದಲ್ಲಿ ಹೆಚ್ಚಿನ ಫೈಬರ್ ಅಂಶ ಕಂಡು ಬರುತ್ತದೆ. ನೀವು ಇದನ್ನು ತಿಂದ ಕೂಡಲೇ ನೀರು ಕುಡಿದ್ರೆ ಫೈಬರ್ ಜೀರ್ಣವಾಗುವುದಿಲ್ಲ.

ಅಲ್ಲದೆ ಜೋಳ ತೀರ್ಣವಾಗಲು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. ಇದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಕಾಣಿಸಿಕೊಳ್ಳುತ್ತದೆ.

ಜೋಳ ತಿಂದ ತಕ್ಷಣವೇ ನೀರು ಕುಡಿಯುವುದರಿಂದ ಗ್ಯಾಸ್ಟಿಕ್ ಸಮಸ್ಯೆ ಎದುರಾಗಬಹುದು. ಹಾಗೆಯೇ ಹೊಟ್ಟೆಯಲ್ಲಿ ಗ್ಯಾಸ್​ ಉತ್ಪತಿ ಯಾಗಿ ವಾಂತಿ, ತಲೆ ನೋವಿಗೂ ಕಾರಣವಾಗಬಹುದು.

ಜೋಳ ತಿಂದ ತಕ್ಷಣವೇ ನೀರು ಕುಡಿಯುವುದರಿಂದ ಗ್ಯಾಸ್ಟಿಕ್ ಸಮಸ್ಯೆ ಎದುರಾಗಬಹುದು. ಹಾಗೆಯೇ ಹೊಟ್ಟೆಯಲ್ಲಿ ಗ್ಯಾಸ್​ ಉತ್ಪತಿಯಾಗಿ ವಾಂತಿ, ತಲೆ ನೋವಿಗೂ ಕಾರಣವಾಗಬಹುದು.

ಹೀಗಾಗಿ ಜೋಳ ಸೇವಿಸಿದ ಬಳಿಕ ಕನಿಷ್ಠ ಎಂದರೂ 40 ನಿಮಿಷದ ಒಳಗೆ ನೀರು ಕುಡಿಯಬೇಡಿ. ಆ ಬಳಿಕವಷ್ಟೇ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ಉತ್ತಮ.

ಇದನ್ನೂ ಓದಿ : Turmeric Health Tips : ಅರಿಶಿನವೆಂಬ ಸಂಜೀವಿನಿಯ ಬಗ್ಗೆ ನಿಮಗೆಷ್ಟು ಗೊತ್ತು…?

Leave A Reply

Your email address will not be published.