ನಿಮ್ಮ ಕೂದಲು ಅತಿಯಾಗಿ ಉದುರುತ್ತಿದೆಯೇ? ಇಲ್ಲಿದೆ ಅಸಲಿ ಕಾರಣ

ದಿನಕ್ಕೆ 50ರಿಂದ 100 ಕೂದಲು ಉದುರುವುದು ಸಹಜ. ಆದರೆ ಅದಕ್ಕಿಂತ ಹೆಚ್ಚಾಗುತ್ತಿದ್ದರೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು..

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಎಲ್ಲರನ್ನೂ ಕಾಡುತ್ತಿರುವ ದೊಡ್ಡ ಸಮಸ್ಯೆ ಅಂದರೆ ಅದು ಕೂದಲು ಉದುರುವಿಕೆ (Hair Fall). ನಾವು ಎಷ್ಟೇ ಎಣ್ಣೆ ಅಥವಾ ಶಾಂಪೂ ಬದಲಾಯಿಸಿದರೂ ಕೂದಲು ಉದುರುವುದು ನಿಲ್ಲುತ್ತಿಲ್ಲ ಅಂತ ಬೇಜಾರಾಗಿದೆಯೇ? ಹಾಗಾದ್ರೆ ಮೊದಲು ನಾವು ಕೂದಲು ಯಾಕೆ ಉದುರುತ್ತೆ ಅನ್ನೋ ಮೂಲ ಕಾರಣವನ್ನ ತಿಳಿದುಕೊಳ್ಳಬೇಕು.”

ಪ್ರಮುಖ ಕಾರಣಗಳು

 ಅನುವಂಶೀಯತೆ (Genetics): ಕೂದಲು ಉದುರಲು ಮೊದಲನೇ ಮತ್ತು ಪ್ರಮುಖ ಕಾರಣ ಅಂದರೆ ಅದು ವಂಶಪಾರಂಪರ್ಯವಾಗಿ ಬರುವುದು. ನಿಮ್ಮ ಕುಟುಂಬದಲ್ಲಿ ತಂದೆ ಅಥವಾ ತಾತನಿಗೆ ಬೇಗ ಕೂದಲು ಉದುರುವ ಸಮಸ್ಯೆ ಇದ್ದರೆ, ಅದು ನಿಮಗೂ ಬರುವ ಸಾಧ್ಯತೆ ಇರುತ್ತದೆ.”

ಅತಿಯಾದ ಒತ್ತಡ (Stress): “ನೀವು ಕೆಲಸದ ಒತ್ತಡ ಅಥವಾ ಮಾನಸಿಕ ಚಿಂತೆಯಲ್ಲಿದ್ದರೆ, ನಿಮ್ಮ ದೇಹದಲ್ಲಿ ಹಾರ್ಮೋನ್ ವ್ಯತ್ಯಾಸವಾಗಿ ಕೂದಲು ಉದುರಲು ಶುರುವಾಗುತ್ತದೆ. ನೆನಪಿಡಿ, ಮನಸ್ಸು ಫ್ರೀ ಆಗಿದ್ದರೆ ಮಾತ್ರ ಕೂದಲು ಸ್ಟ್ರಾಂಗ್ ಆಗಿರುತ್ತೆ.”

ಪೌಷ್ಟಿಕಾಂಶದ ಕೊರತೆ (Nutritional Deficiency): “ನಮ್ಮ ಕೂದಲಿನ ಬೆಳವಣಿಗೆಗೆ ಪ್ರೋಟೀನ್, ಐರನ್, ಬಯೋಟಿನ್ ಮತ್ತು ವಿಟಮಿನ್ ಡಿ ತುಂಬಾ ಮುಖ್ಯ. ಜಂಕ್ ಫುಡ್ ಅತಿಯಾಗಿ ತಿನ್ನುವುದು ಮತ್ತು ಸರಿಯಾದ ಆಹಾರ ಕ್ರಮ ಇಲ್ಲದಿರುವುದು ಕೂದಲನ್ನು ಬುಡದಿಂದ ದುರ್ಬಲಗೊಳಿಸುತ್ತದೆ.”

ಇದನ್ನೂ ಓದಿ : ಬಿಸಿಲಿನಲ್ಲಿ ಸಾಫ್ಟ್ ಡ್ರಿಂಕ್ಸ್ ಕುಡಿಯುತ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ

ಹಾರ್ಮೋನ್ ಬದಲಾವಣೆ (Hormonal Changes): “ವಿಶೇಷವಾಗಿ ಮಹಿಳೆಯರಲ್ಲಿ ಗರ್ಭಾವಸ್ಥೆಯ ನಂತರ ಅಥವಾ ಥೈರಾಯ್ಡ್ ಸಮಸ್ಯೆ ಇದ್ದಾಗ ಹಾರ್ಮೋನ್‌ಗಳ ಏರುಪೇರಿನಿಂದ ಕೂದಲು ವಿಪರೀತವಾಗಿ ಉದುರುತ್ತದೆ.”

ರಾಸಾಯನಿಕಗಳ ಬಳಕೆ (Chemicals & Styling): “ಅತಿಯಾಗಿ ಹೇರ್ ಡೈ ಮಾಡುವುದು, ಕೆಮಿಕಲ್ ಇರುವ ಶಾಂಪೂ ಬಳಸುವುದು ಅಥವಾ ಹೇರ್ ಸ್ಟ್ರೈಟ್ನಿಂಗ್‌ಗಾಗಿ ಅತಿಯಾದ ಶಾಖ (Heat) ನೀಡುವುದರಿಂದ ಕೂದಲು ಹಾಳಾಗುತ್ತದೆ.”

ಸರಳ ಪರಿಹಾರಗಳು

  • ಪೌಷ್ಟಿಕ ಆಹಾರ: ಸೊಪ್ಪು, ತರಕಾರಿ, ಮೊಟ್ಟೆ ಮತ್ತು ಒಣ ಹಣ್ಣುಗಳನ್ನು ಸೇವಿಸಿ.
  • ನಿದ್ರೆ: ದಿನಕ್ಕೆ ಕನಿಷ್ಠ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಿ.
  • ಸ್ವಚ್ಛತೆ: ವಾರಕ್ಕೆ ಎರಡರಿಂದ ಮೂರು ಬಾರಿ ತಲೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.
  • ನೀರು: ದೇಹವನ್ನು ಹೈಡ್ರೇಟೆಡ್ ಆಗಿಡಲು ದಿನಕ್ಕೆ 3-4 ಲೀಟರ್ ನೀರು ಕುಡಿಯಿರಿ.

ದಿನಕ್ಕೆ 50 ರಿಂದ 100 ಕೂದಲು ಉದುರುವುದು ಸಹಜ. ಆದರೆ ಅದಕ್ಕಿಂತ ಹೆಚ್ಚಾಗುತ್ತಿದ್ದರೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories