Skin Care : ವಯಸ್ಸಾದಂತೆ ಚರ್ಮದ ಕಾಂತಿ ಕಡಿಮೆಯಾಗುತ್ತಿದೆ ಎಂಬ ಚಿಂತೆ ಕಾಡುತ್ತಿದೆಯೇ? ಚಿಂತಸಬೇಡಿ ಅದಕ್ಕೆ ಪರಿಹಾರ ಆಯುರ್ವೇದದಲ್ಲಿದೆ

ಮಹಿಳೆಯರು ವಯಸ್ಸಿನ ಚಿಹ್ನೆ ಅವರ ಚರ್ಮದ(Skin Care) ಮೇಲೆ ಕಾಣಿಸುತ್ತಿದ್ದಂತೆ ಇನ್ನಿಲ್ಲದ ಚಿಂತೆಗೊಳಗಾಗುತ್ತಾರೆ ಮತ್ತು ಅದನ್ನು ಸರಿಪಡಿಸಿಕೊಳ್ಳಲಿಕ್ಕಾಗಿ ಸಾಕಷ್ಟು ಹಣ ಮತ್ತು ಚಿಕಿತ್ಸೆಗೆ ಸಮಯ ವ್ಯಯಿಸುತ್ತಾರೆ. ಪದೇ ಪದೇ ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ಕೊಡುವುದು, ಇಂಟರ್ನೆಟ್‌ನಲ್ಲಿ ಹೇಳುವ ಎಲ್ಲಾ ಪರ್ಯಾಯ ವಿಧಾನಗಳನ್ನು ಅನುಸರಿಸಲು ಮುಂದಾಗುತ್ತಾರೆ. ಆದರೂ ಮಹಿಳೆಯರಿಗೆ ಅವರಂದುಕೊಂಡಷ್ಟು ಸರಿಯಾದ ಪರಿಣಾಮಗಳು ಸಿಗುವುದು ಸ್ವಲ್ಪ ಕಷ್ಟವೇ. ಆದರೆ, ನಿಮಗಿದು ಗೊತ್ತೇ? ನಿಮ್ಮ ಅಡುಗೆ ಮನೆಯಲ್ಲೇ ಅದಕ್ಕೆಲ್ಲಾ ಉತ್ತರವಿದೆಯೆಂದು.

ಈಗ ಪ್ರಪಂಚದಲ್ಲಿ ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಅತಿ ಕಡಿಮೆ ಸಮಯದಲ್ಲಿ ಪರಿಣಾಮಕಾರಿ ಫಲಿತಾಂಶಗಳನ್ನು ಹೊಂದಬಹುದು ಎಂದು ತಿಳಿದುಬಂದಿದೆ. ಕೋರಿಯನ್‌ ಸ್ಕಿನ್‌ಕೇರ್‌ ಪ್ರಾಡಕ್ಟ್‌ಗಳಂತೆಯೇ, ಆಯುರ್ವೇದವು ಪರೀಕ್ಷೆಗಳನ್ನು ಮಾಡಿ ಅದ್ಭುತ ಪರಿಣಾಮಗಳನ್ನು ಸಮಯಕ್ಕೆ ಸರಿಯಾಗಿ ನೀಡಬಲ್ಲದು ಎಂದು ಸಾಬೀತುಪಡಿಸಿದೆ. ಆಯುರ್ವೇದ ಸೌಂದರ್ಯದಲ್ಲಿಯೂ ಪರಿಣಾಮ ಬೀರುತ್ತದೆ. ಅದು ತ್ವಚೆ ಸುಕ್ಕು ಹಿಡಿಯದಂತೆ ತಡೆಯಲು ಸಹಾಯ ಮಾಡುತ್ತದೆ. ಇದರ ಸಮಗ್ರ ವಿಧಾನವು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮ ಸುಧಾರಿಸಲು ಸಹಾಯ ಮಾಡುವುದೇ ಆಗಿದೆ.

ಇದನ್ನೂ ಓದಿ: Sleeplessness ಗರ್ಭಿಣಿಯರು ನಿದ್ದೆ ಕಡಿಮೆ ಮಾಡಿದರೆ ಏನೆಲ್ಲಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಗೊತ್ತೇ?

ನಾವು ನಿಮಗಾಗಿ ಕೆಲವು ಆಯುರ್ವೇದ ಸೌಂದರ್ಯ ರಹಸ್ಯಗಳನ್ನು ತಿಳಿಸಿಕೊಡುತ್ತೇವೆ. ಅದು ವಯಸ್ಸಾದಂತೆ ನಿಮ್ಮ ತ್ವಚೆ ಕಳೆಗುಂದುವುದನ್ನು ತಪ್ಪಿಸಲು ಸಹಾಯಮಾಡುತ್ತದೆ.

  1. ಶ್ರೀಗಂಧದ ಪುಡಿ:
    ಗಂಧದ ಪುಡಿಯಲ್ಲಿ ಆಂಟಿ–ಏಜಿಂಗ್‌ ಗುಣಗಳಿವೆ. ಇದು ಮೊಡವೆ ಮತ್ತು ಎಕ್ನಿಗಳಿಗೆ ಉತ್ತಮ ಪರಿಹಾರ ಒದಗಿಸಲು ಸಹಾಯ ಮಾಡುತ್ತದೆ. ಅರ್ಧ ಚಮಚ ಗಂಧದ ಪುಡಿಗೆ ಕೆಲವು ಹನಿಗಳಷ್ಟು ನೀರು ಸೇರಿಸಿ ಪೇಸ್ಟ್‌ ತಯಾರಿಸಿ. ಪೇಸ್ಟ್‌ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಇದು ತ್ವಚೆಯ ಸುಕ್ಕು ಮತ್ತು ನೆರಿಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಲ್ಲದೆ ಒಯ್ಲಿ ಸ್ಕಿನ್‌ಗೂ ಉತ್ತಮ.
  2. ಹಾಲು :
    ಹಾಲಿನ್ಲಿರುವ ಲ್ಯಾಕ್ಟಿಕ್‌ ಆಸಿಡ್‌ ತ್ವಚೆಯ ರಂದ್ರಗಳನ್ನು ಆಳವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಹಾಲಿನಿಂದ ಮುಖ ತೊಳೆಯುವುದು ಮೇದೋಗ್ರಂಥಿಗಳ ಸ್ರಾವ ಅಥವಾ ಒಯ್ಲಿನಿಂದ ರಂದ್ರಗಳನ್ನು ತೆರಯಲು ಸಹಾಯ ಮಾಡುತ್ತದೆ. ಇದು ಮೊಡವೆಗಳನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ಸಹ ತೆಗೆದುಹಾಕುತ್ತದೆ.
  3. ಜೇನುತುಪ್ಪ :
    ಜೇನುತುಪ್ಪವು ಅತ್ಯುತ್ತಮ ನೈಸರ್ಗಿಕ ಮಾಯ್ಸ್ಚರೈಸರ್‌ ಆಗಿದೆ. ಇದು ಒಣ ಮತ್ತು ಎಣ್ಣೆಯುಕ್ತ ತ್ವಚೆಗಳ ಮೇಲೂ ಅದ್ಭುತ ಕೆಲಸ ಮಾಡುತ್ತದೆ. ಜೇನುತುಪ್ಪವನ್ನು ತೆಳುವಾಗಿ ನಿಮ್ಮ ಮುಖದ ಮೇಲೆ ಲೇಪಿಸಿ 15 ನಿಮಿಷಗಳ ನಂತರ ತೊಳೆಯಿರಿ.
  4. ಮುಲ್ತಾನಿ ಮಿಟ್ಟಿ :
    ಮುಲ್ತಾನಿ ಮಿಟ್ಟಿಯು ವಯಸ್ಸಾದಂತೆ ಚರ್ಮ ಸುಕ್ಕುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಇದು ಚರ್ಮ ಬಿಗಿಯಾಗುವಂತೆ ಮಾಡುತ್ತದೆ. ಒಂದು ಚಮಚ ಮುಲ್ತಾನಿ ಮಿಟ್ಟಿಗೆ ಮೂರು ಚಮಚ ರೋಸ್‌ ವಾಟರ್‌(ಗುಲಾಬಿ ಜಲ) ಸೇರಿಸಿ ಪೇಸ್ಟ್‌ ತಯಾರಿಸಿ. ಈ ಪ್ಯಾಕ್‌ ಅ್ನು ಮುಖ ಮತ್ತು ಕುತ್ತಿಗೆಗೆ ಲೇಪಿಸಿ. ಈ ಪ್ಯಾಕ್‌ ಸಂಪೂರ್ಣ ಒಣಗಿದ ಮೇಲೆ ಮುಖ ತೊಳೆದುಕೊಳ್ಳಿ.
  5. ಮೊಸರು, ಗೋಧಿ ಹಿಟ್ಟು, ಅರಿಶಿನ ಪುಡಿ :
    ಮೊಸರು, ಗೋಧಿ ಹಿಟ್ಟು, ಅರಿಶಿನ ಪುಡಿ ಈ ಮೂರು ಪದಾರ್ಥಗಳನ್ನು ಸೇರಿಸಿ ಪ್ಯಾಕ್‌ ತಯಾರಿಸಿ. ಮೊಸರಿನ ಬದಲಿಗೆ ನೀವು ಲಿಂಬು ರಸವನ್ನು ಉಪಯೋಗಿಸಬಹುದು. ಲಿಂಬುವಿನಲ್ಲಿರುವ ಆಸಿಡ್‌ ಡಾರ್ಕ್‌ ಸ್ಪಾಟ್‌ಗಳನ್ನು ಹೋಗಲಾಡಿಸಿದರೆ, ಅರಿಶಿಣ ತ್ವಚೆಯನ್ನು ಬೆಳ್ಳಗಾಗಿಸುವುದು. ಈ ಮಿಶ್ರಣದ ಪ್ಯಾಕ್‌ಅನ್ನು ಕುತ್ತಿಗೆ ಸೇರಿದಂತೆ ಮುಖಕ್ಕೆ ಲೇಪಿಸಿ. ಸಂಪೂರ್ಣವಾಗಿ ಒಣಗಿದ ನಂತರ ತೊಳೆಯಿರಿ.

ಇದನ್ನೂ ಓದಿ: Tulsi Face Pack: ಚರ್ಮದ ಕಾಂತಿಗೆ ತುಳಸಿ ಫೇಸ್ ಪ್ಯಾಕ್ ಬಳಸಿ

(Skin Care Ayurveda tips these 5 tips to fight ageing)

Comments are closed.