ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟಿಪ್ಸ್ ಗಳು ಇವು!

ಈ ಬಾರಿ ಚಳಿ ಹೆಚ್ಚಾಗಿಯೇ ಇದೆ. ಹವಾಮಾನ ಇಲಾಖೆ ಪ್ರಕಾರ ಡಿಸೆಂಬರ್ ನ ಈ ಚಳಿ ಜನರನ್ನು ಕುಗ್ಗಿಸಿದೆ. ಬೆಳಗ್ಗೆ ಹೊರಗೆ ಹೋಗಲು ಜನ ಭಯ ಪಡ್ತಾ ಇದ್ದಾರೆ. ಅದಕ್ಕೆ ಚಳಿಗಾಲದಲ್ಲಿ ಹೆಚ್ಚು ಬೆಚ್ಚಗಿ ಇರುವುದು ಒಳ್ಳೆಯದು. ಅಲ್ಲದೇ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ, ಈ ಚಳಿಗೆ ಯಾವುದೇ ಕಾಯಿಲೆ ಬರಲ್ಲ. ಇವು ಚಳಿಗಾಲ ಟಿಪ್ಸ್ ಗಳು!

ಉತ್ತಮ ಆಹಾರ ಸೇವಿಸಿ
ಚಳಿಗಾಲದಲ್ಲಿ ಆಹಾರ ಬಿಸಿಯಿರುವಾಗಲೇ ತಿನ್ನುವುದು ಒಳ್ಳೆಯದು. ಅಲ್ಲದೇ ವಿಟಮಿನ್ ಸಿ ತುಂಬಿದ ಹಣ್ಣುಗಳಾದ ಕಿತ್ತಳೆ, ನಿಂಬೆ, ಪಪ್ಪಾಯಿ ತಿನ್ನುವುದು ಒಳ್ಳೆಯದು. ಬೆಳ್ಳುಳ್ಳಿ ಮತ್ತು ಶುಂಠಿ ಇಮ್ಮ್ಯೂನಿಟಿಗೆ ನೈಸರ್ಗಿಕ ಬೂಸ್ಟರ್‍ಗಳು

ಬಿಸಿ ನೀರು ಕುಡಿಯಿರಿ
ಬೆಚ್ಚಗಿನ ನೀರು, ಶುಂಠಿ ಚಹಾ, ಅಥವಾ ತುಳಸಿ ಕಷಾಯ ಕುಡಿಯಿರಿ. ಇದು ನಿಮ್ಮ ದೇಹದ ತಾಪಮಾನವನ್ನು ಕಾಪಾಡಿ, ಶ್ವಾಸಕೋಶದ ಆರೋಗ್ಯ ಹೆಚ್ಚಿಸುತ್ತದೆ. ತಣ್ಣೀರು, ಕೋಲ್ಡ್‍ಡ್ರಿಂಕ್ಸ್ ಬಿಟ್ಟುಬಿಡಿ — ಚಳಿಗಾಲದಲ್ಲಿ ನಿಮ್ಮ ಗಂಟಲಿಗೆ ಇದು ಒಳ್ಳೆದಯಲ್ಲ.

7-8 ಗಂಟೆ ನಿದ್ದೆ ಪೂರ್ಣಗೊಳಿಸಿ
ರೋಗ ನಿರೋಧಕಕ್ಕೆ ವಿಶ್ರಾಂತಿ ಅಗತ್ಯ. ಬೇಗ ಮನೆಗೆ ಬಂದು, ಆರಾಮವಾಗಿ ನಿದ್ದೆ ಮಾಡಿ.ಸ್ಟ್ರೆಸ್ ತಪ್ಪಿಸಿ — ಯೋಗ, ಮೆಡಿಟೇಶನ್, ಅಥವಾ ಒಂದು ಪುಸ್ತಕ ಓದಿ.

ವ್ಯಾಯಾಮ ಮಾಡಿ
ಮನೆಯಲ್ಲಿಯೇ ಸಿಂಪಲ್ ಎಕ್ಸರ್ಸೈಜ್‍ಗಳು, ಸ್ಟ್ರೆಚಿಂಗ್, ಅಥವಾ ಯೋಗ ಮಾಡಿ. ಇದು ರಕ್ತ ಪರಿಚಲನೆಗೆ ಸಹಾಯ ಮಾಡಿ, ನಿಮಗೆ ಎನರ್ಜಿ ನೀಡುತ್ತದೆ.

ಸೂರ್ಯನ ಬೆಳಕು ಅಗತ್ಯ
ದಿನಕ್ಕೆ 15-20 ನಿಮಿಷ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳಿ ಇದು ಇಮ್ಮ್ಯೂನಿಟಿಗೆ ಬೂಸ್ಟರ್.
ಶೀತ ಪಾನೀಯಗಳು ಮತ್ತು ಫ್ರೀಜ್ಡ್ ಫೀಲ್ಡ್‍ಗಳಿಂದ ದೂರವಿರಿ.ಐಸ್ ಕ್ರೀಮ್, ಕೋಲ್ಡ್ ಜ್ಯೂಸ್ ಬಿಟ್ಟುಬಿಡಿ. ಇವು ನಿಮ್ಮ ಗಂಟಲನ್ನು ದುರ್ಬಲಗೊಳಿಸುತ್ತವೆ. ಬಿಸಿಯಾದ, ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡಿ.

ಇದನ್ನೂ ಓದಿ: https://kannada.newsnext.live/namma-bengaluru/attention-bengaluru-people-power-shock-to-more-than-80-areas/

ಚಳಿಗಾಲದಲ್ಲಿ ಓಡಾಡುವಾಗ ಬೆಚ್ಚನೆಯ ಉಡುಪು ಧರಿಸಿ, ಕಾಲು-ಹಸ್ತಗಳನ್ನು ಒಣಗಿಸಿ ಇನ್ನೂ ಹೆಚ್ಚು ಆರೋಗ್ಯವಾಗಿರಿ.
ಸಣ್ಣಪುಟ್ಟು ಅನಾರೋಗ್ಯ ಕಂಡರೆ ವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬೇಡಿ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories