Weight Gain Diet : ನಿಮ್ಮ ತೂಕ ಕಡಿಮೆ ಎಂದು ಚಿಂತಿಸುತ್ತಿದ್ದೀರಾ? ಹಾಗಾದರೆ, ತೂಕ ಹೆಚ್ಚಿಸುವ 5 ಆಹಾರಗಳನ್ನು ಸೇವಿಸಿ

ಜಂಕ್‌ ಫುಡ್‌, ಪೇಸ್ಟ್ರಿ, ಕುಕ್ಕೀಸ್‌, ಐಸ್‌ಕ್ರೀಂ ನಂತಹ ಬಿಳಿ ಆಹಾರಗಳನ್ನು ಸೇವಿಸುವುದರಿಂದ ತೂಕ ಬಹು ಬೇಗನೆ ಹೆಚ್ಚಾಗುತ್ತದೆ ಎಂದು ನೀವು ತಿಳಿದ್ದಿದ್ದರೆ ಅದು ತಪ್ಪು. ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರಗಳು ನಿಸ್ಸಂದೇಹವಾಗಿ ತೂಕ ಹೆಚ್ಚಿಸಲು (Weight Gain Diet ) ಸಹಾಯ ಮಾಡುತ್ತದೆಯಾದರೂ ಅವುಗಳು ಉತ್ತಮ ಪೋಷಕಾಂಶಗಳು, ಒಳ್ಳೆಯ ಫ್ಯಾಟ್‌ ಮತ್ತು ಸಕ್ಕರೆ ಹೊಂದಿರಲಾರದು. ಅವುಗಳು ನಿಮ್ಮ ದೇಹಕ್ಕೇ ಹಾನಿಕಾರಗಳು. ತೂಕ ಹೆಚ್ಚಿಸಿಕೊಳ್ಳುವುದು ತಿಳಿದುಕೊಂಡಷ್ಟು ಸುಲಭವಲ್ಲ. ತೂಕ ಇಳಿಸಲು ಹೇಗೆ ಡಯಟ್‌ ಪ್ಲಾನ್‌ಗಳಿವೆಯೋ ಅದೇ ರೀತಿ ತೂಕ ಹೆಚ್ಚಿಸಿಲೂ ಡಯಟ್‌ ಪ್ಲಾನ್‌ ಅವಶ್ಯಕ.

ಬರೀ ಕಾರ್ಬೋಹೈಡ್ರೇಟ್‌ ನಿಂದ ಮಾತ್ರ ತೂಕ ಹೆಚ್ಚಿಸಿಕೊಳ್ಳಬಹುದು ಎಂಬುದು ಒಂದು ಸಾಮಾನ್ಯ ತಪ್ಪು ಕಲ್ಪನೆ. ಸತ್ಯವೇನೆಂದರೆ ತೂಕ ಹೆಚ್ಚಿಸುವುದು ಆಹಾರದಲ್ಲಿನ ಕ್ಯಾಲೋರಿಗಳು. ಆದ್ದರಿಂದ, ಬಾಳೆಹಣ್ಣುಗಳು, ಆಲೂಗಡ್ಡೆ ಮತ್ತು ಹಣ್ಣುಗಳಂತಹ ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳನ್ನು ಸೇರಿಸುವುದರಿಂದ ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಬಹುದು.

ತೂಕ ಹೆಚ್ಚಿಸುವ 5 ಸೂಪರ್‌ ಫುಡ್‌ಗಳು :

ಬೀಜಗಳು: ತೂಕ ಹೆಚ್ಚಿಸಲು ಬೀಜಗಳು ಬಹಳಷ್ಟು ಸಹಾಯಮಾಡುತ್ತವೆ. ಅವುಗಳಲ್ಲಿ ಕೊಬ್ಬು ಮತ್ತು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಆದರೆ ಅವುಗಳು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಬೆರಳೆಣಿಕೆಯಷ್ಟು ಬೀಜಗಳು ನಿಮ್ಮನ್ನು ಗಂಟೆಗಳ ಕಾಲ ತೃಪ್ತಿಪಡಿಸಬಹುದು.

ಆವಕಾಡೊ: ಈ ರುಚಿಕರವಾದ ಹಣ್ಣು ಆರೋಗ್ಯಕರ ಕೊಬ್ಬಿನಾಂಶದ ಅತ್ಯುತ್ತಮ ಮೂಲವಾಗಿದೆ ಮತ್ತು ಹೃದಯಕ್ಕೂ ಉತ್ತಮವಾಗಿದೆ. ಅರ್ಧ ಆವಕಾಡೊ ಹಣ್ಣು 140 ಕ್ಯಾಲೊರಿಗಳನ್ನು ಹೊಂದಿದೆ. ಆದರೆ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್, ಫೋಲಿಕ್ ಆಮ್ಲ ಮತ್ತು ವಿಟಮಿನ್ ಇ ಗಳನ್ನೂ ಹೊಂದಿದೆ.

ಬಾಳೆಹಣ್ಣುಗಳು: ಬಾಳೆಹಣ್ಣುಗಳು ತೂಕವನ್ನು ಹೆಚ್ಚಿಸುವ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ ಏಕೆಂದರೆ ಅವುಗಳು ಹೆಚ್ಚಿನ ಖನಿಜಗಳನ್ನು ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿಗಳನ್ನು ಹೊಂದಿವೆ. ತ್ವರಿತವಾಗಿ ಮತ್ತು ಸುರಕ್ಷಿತವಾಗಿ ತೂಕವನ್ನು ಪಡೆಯಲು ನೀವು ದಿನಕ್ಕೆ 4-5 ಮಾಗಿದ ಬಾಳೆಹಣ್ಣುಗಳನ್ನು ತಿನ್ನಬಹುದು. ಈ ಹಣ್ಣು ಶಕ್ತಿಯನ್ನು ನೀಡುತ್ತದೆ ಮತ್ತು ತೂಕವನ್ನು ಹೆಚ್ಚಿಸುತ್ತದೆ.

ಡಾರ್ಕ್ ಚಾಕೊಲೇಟ್: ನೀವು ಚಾಕೊಲೇಟ್ ಪ್ರಿಯರೇ! ಹಾಗಾದರೆ ತೂಕ ಹೆಚ್ಚಿಸಲು ಡಾರ್ಕ್ ಚಾಕೊಲೇಟ್ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ಇದು ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬನ್ನು ಹೊಂದಿರುತ್ತವೆ. ನಿಮಗೆ ಸಿಹಿತಿಂಡಿ ತಿನ್ನುವ ಆಸೆಯಾದಾಗ ಡಾರ್ಕ್ ಚಾಕೊಲೇಟ್ ಅನ್ನು ಸೇವಿಸಬಹುದು. ಆದರೆ ನೆನಪಿಡಿ ಇದರಲ್ಲಿ ಸಕ್ಕರೆಯ ಅಂಶ ಅಧಿಕವಾಗಿರುತ್ತದೆ. ಅದಕ್ಕಾಗಿ ಮಿತವಾಗಿ ತಿನ್ನಿ.

ಸಂಪೂರ್ಣ ಗೋಧಿ ಬ್ರೆಡ್: ಪೌಷ್ಟಿಕ ತಜ್ಞರ ಪ್ರಕಾರ, ಆರೋಗ್ಯಕರ ಬ್ರೆಡ್ ಉತ್ಪನ್ನಗಳನ್ನು ತಿನ್ನುವುದು ತೂಕ ಹೆಚ್ಚಿಸಿಕೊಳ್ಳಲು ಅತ್ಯುತ್ತಮ ಮಾರ್ಗ. ಬ್ರೆಡ್‌ಗಳನ್ನು ಆಯ್ದುಕೊಳ್ಳುವಾಗ ಮಲ್ಟಿಗ್ರೇನ್‌ ಬ್ರೆಡ್‌ಗಳನ್ನೇ ಆಯ್ದುಕೊಳ್ಳಿ.

ಇದನ್ನೂ ಓದಿ : Monsoon Footwears: ಮಳೆಗಾಲಕ್ಕೆ ಸೂಕ್ತವಾಗಿರುವ ಫೂಟ್‌ವೇರ್‌ಗಳಿವು! ಇವುಗಳನ್ನು ಧರಿಸಿ ನಿಮ್ಮ ಕೋಮಲ ಪಾದಗಳನ್ನು ರಕ್ಷಿಸಿಕೊಳ್ಳಿ!!

ಇದನ್ನೂ ಓದಿ : Benefits of Papaya : ಉತ್ತಮ ಆರೋಗ್ಯಕ್ಕೆ ರಾಮಬಾಣ ಪಪ್ಪಾಯ ಹಣ್ಣು

(Weight Gain Diet these foods help you to gain weight)

Comments are closed.