ಕಾಂಗ್ರೆಸ್, ಓವೈಸಿ ಪಕ್ಷದ ಜೊತೆ ಬಿಜೆಪಿ ಮೈತ್ರಿ! ದೇವೇಂದ್ರ ಫಡ್ನವೀಸ್ ಖಡಕ್ ಸೂಚನೆ
BJP-Congress- AIMIM United: ಮುಂಬೈ: ಮಹಾರಾಷ್ಟ್ರದ ಕೆಲವು ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ಬಿಜೆಪಿ ಘಟಕಗಳು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಎಐಎಂಐಎಂ (AIMIM) ಜೊತೆ ಮಾಡಿಕೊಂಡಿರುವ ಮೈತ್ರಿ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಮೈತ್ರಿಗಳು ‘ಪಕ್ಷದ ಶಿಸ್ತಿನ ಉಲ್ಲಂಘನೆ’ ಎಂದು ಕರೆದಿರುವ ಅವರು, ಕೂಡಲೇ ಈ ಮೈತ್ರಿಗಳಿಂದ ಹಿಂದೆ ಸರಿಯುವಂತೆ ಆದೇಶಿಸಿದ್ದಾರೆ.
ಶಿಸ್ತು ಕ್ರಮದ ಎಚ್ಚರಿಕೆ
ಅಕೋಟ್‌ನಲ್ಲಿ ಎಐಎಂಐಎಂ ಮತ್ತು ಅಂಬರನಾಥ್‌ನಲ್ಲಿ ಕಾಂಗ್ರೆಸ್ ಜೊತೆ ಬಿಜೆಪಿ ಸ್ಥಳೀಯ ಮುಖಂಡರು ಮೈತ್ರಿ ಮಾಡಿಕೊಂಡಿರುವುದು ಪಕ್ಷದ ಹಿರಿಯ ನಾಯಕತ್ವದ ಗಮನಕ್ಕೆ ಬಂದಿದೆ. ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಫಡ್ನವೀಸ್, “ಕಾಂಗ್ರೆಸ್ ಅಥವಾ ಎಐಎಂಐಎಂ ಜೊತೆಗಿನ ಯಾವುದೇ ಮೈತ್ರಿಯನ್ನು ಒಪ್ಪಲು ಸಾಧ್ಯವಿಲ್ಲ. ಸ್ಥಳೀಯ ನಾಯಕರು ತಮ್ಮ ಮಟ್ಟದಲ್ಲಿ ಇಂತಹ ನಿರ್ಧಾರ ತಗೆದುಕೊಂಡಿದ್ದರೆ ಅದು ತಪ್ಪು. ಶಿಸ್ತು ಉಲ್ಲಂಘಿಸುವ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಕೆ ನೀಡಿದ್ದಾರೆ.
ಆದೇಶ ಪಾಲನೆಗೆ ಸೂಚನೆ
ಈಗಾಗಲೇ ಮಾಡಿಕೊಂಡಿರುವ ಮೈತ್ರಿಗಳನ್ನು ತಕ್ಷಣವೇ ರದ್ದುಗೊಳಿಸಲು ಆಯಾ ಜಿಲ್ಲಾ ಘಟಕಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಿದ್ಧಾಂತಕ್ಕೆ ವಿರುದ್ಧವಾದ ಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಳ್ಳುವುದು ಬಿಜೆಪಿಯ ನೀತಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
LIC ಹೊಸ ‘ಜೀವನ್ ಉತ್ಸವ್ ಸಿಂಗಲ್ ಪ್ರೀಮಿಯಂ’ ಯೋಜನೆ ಬಿಡುಗಡೆ: ಒಮ್ಮೆ ಹಣ ಹೂಡಿ, ಜೀವನಪೂರ್ತಿ ಆದಾಯ!
ಕಾಂಗ್ರೆಸ್‌ನಿಂದಲೂ ಕ್ರಮ
ಇತ್ತ ಅಂಬರನಾಥ್ ನಗರಸಭೆಯಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿದ ಆರೋಪದ ಮೇಲೆ ಕಾಂಗ್ರೆಸ್ ಪಕ್ಷವು ತನ್ನ 12 ಮಂದಿ ನೂತನ ನಗರಸಭಾ ಸದಸ್ಯರನ್ನು (ಕೌನ್ಸಿಲರ್‌ಗಳನ್ನು) ಅಮಾನತುಗೊಳಿಸಿದೆ. ಈ ಮೂಲಕ ಎರಡೂ ಕಡೆಯಿಂದ ಮೈತ್ರಿ ವಿರೋಧಿ ಅಲೆ ಜೋರಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿರುವ ಈ ಸಮಯದಲ್ಲಿ, ಸ್ಥಳೀಯವಾಗಿ ಎದುರಾಳಿ ಪಕ್ಷಗಳೊಂದಿಗೆ ಕೈಜೋಡಿಸುವುದು ರಾಜ್ಯ ಮಟ್ಟದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂಬುದು ಹಿರಿಯ ನಾಯಕರ ಆತಂಕವಾಗಿದೆ.



