TV Channel TRP Rating Cancelled: ಮುಂದಿನ 4 ವಾರ ಟಿವಿ ಚಾನಲ್‌ಗಳ ಟಿಆರ್‌ಪಿ ರೇಟಿಂಗ್ ಅಮಾನತುಗೊಳಿಸಿದ ಕೇಂದ್ರ ಸರ್ಕಾರ! ಕಾರಣ ಇಲ್ಲಿದೆ

TV Channel TRP Rating Cancelled: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತು ಸುದ್ದಿ ವಾಹಿನಿಗಳು ಅತಿಯಾದ “ಸಂವೇದನಾಶೀಲ” (Sensationalism) ವರದಿಗಳನ್ನು ಪ್ರಸಾರ ಮಾಡುತ್ತಿರುವುದಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಗರಂ ಆಗಿದೆ. ಈ ಹಿನ್ನೆಲೆಯಲ್ಲಿ ನ್ಯೂಸ್ ಚಾನೆಲ್‌ಗಳ ಟಿಆರ್‌ಪಿ (TRP) ರೇಟಿಂಗ್‌ಗಳನ್ನು ಮುಂದಿನ ನಾಲ್ಕು ವಾರಗಳ ಕಾಲ ಸ್ಥಗಿತಗೊಳಿಸುವಂತೆ ‘ಬಾರ್ಕ್’ (BARC) ಸಂಸ್ಥೆಗೆ ಖಡಕ್ ಆದೇಶ ನೀಡಿದೆ.

ಅಮಾನತಿಗೆ ಕಾರಣವೇನು?
ಸಚಿವಾಲಯದ ಆದೇಶದ ಪ್ರಕಾರ, ಕೆಲವು ಸುದ್ದಿ ವಾಹಿನಿಗಳು ಯುದ್ಧದ ಕುರಿತು ಆಧಾರರಹಿತ ಮತ್ತು ಕಲ್ಪಿತ ಸುದ್ದಿಗಳ ಮೂಲಕ ಜನರಲ್ಲಿ ಅನಗತ್ಯವಾಗಿ ಭೀತಿ ಹುಟ್ಟಿಸುತ್ತಿವೆ. ವಿಶೇಷವಾಗಿ ಪೀಡಿತ ಪ್ರದೇಶಗಳಲ್ಲಿ ಕುಟುಂಬ ಮತ್ತು ಸ್ನೇಹಿತರನ್ನು ಹೊಂದಿರುವ ಜನರಲ್ಲಿ ಈ ವರದಿಗಳು ಆತಂಕ ಮೂಡಿಸುತ್ತಿವೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಯುದ್ಧ ಆದ್ರೆ ಸರ್ಕಾರ ಎಲ್‌ಐಸಿ ಹಣ ಬಳಸಬಹುದಾ? ನಿಮ್ಮ ಹಣ ಸುರಕ್ಷಿತವೇ? ಇಲ್ಲಿದೆ ಅಧಿಕೃತ ಮಾಹಿತಿ

ತಕ್ಷಣದಿಂದ ಜಾರಿ
ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮುಂದಿನ ನಾಲ್ಕು ವಾರಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಯಾವುದೇ ಸುದ್ದಿ ವಾಹಿನಿಯ ಟಿಆರ್‌ಪಿ ಅಂಕಿಅಂಶಗಳನ್ನು ಪ್ರಕಟಿಸುವಂತಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ವಾಹಿನಿಗಳ ಮೇಲೆ ಪ್ರಭಾವ
ಟಿಆರ್‌ಪಿ ರೇಟಿಂಗ್ ಆಧರಿಸಿ ಸುದ್ದಿ ವಾಹಿನಿಗಳಿಗೆ ಜಾಹೀರಾತುಗಳು ಮತ್ತು ವರಮಾನ ಸಿಗುತ್ತದೆ. ಈಗ ರೇಟಿಂಗ್ ಅಮಾನತುಗೊಂಡಿರುವುದರಿಂದ ವಾಹಿನಿಗಳ ವಾಣಿಜ್ಯ ವ್ಯವಹಾರದ ಮೇಲೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಸುದ್ದಿಯ ಗುಣಮಟ್ಟ ಕಾಪಾಡಲು ಮತ್ತು ಅನಗತ್ಯ ಪ್ರಚೋದನೆ ತಡೆಯಲು ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories