ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಸಂಬಂಧ ಬಗ್ಗೆ ದಲೈಲಾಮಾ ಖಡಕ್ ಸ್ಪಷ್ಟನೆ

Dailalama | Epstein Files: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಹೊಸ ದಾಖಲೆಗಳಲ್ಲಿ ದಲೈ ಲಾಮಾ ಅವರ ಹೆಸರು ಉಲ್ಲೇಖವಾಗಿರುವ ಬಗ್ಗೆ ದಲೈ ಲಾಮಾ ಅವರ ಕಚೇರಿ ಸ್ಪಷ್ಟನೆಯನ್ನು ನೀಡಿದೆ. ಭಾನುವಾರ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಾವು ಜೆಫ್ರಿ ಎಪ್ಸ್ಟೀನ್‌ನನ್ನು ಎಂದೂ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ನ್ಯಾಯಾಲಯದಿಂದ ಬಹಿರಂಗಗೊಂಡಿರುವ ‘ಎಪ್ಸ್ಟೀನ್ ಫೈಲ್ಸ್’ನಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರ ಹೆಸರು ಸುಮಾರು 169 ಬಾರಿ ಕಂಡುಬಂದಿದೆ ಎಂದು ವರದಿಯಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಅವರ ಕಚೇರಿಯು ಈ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದೆ.

ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಪತ್ರವೊಂದನ್ನು ಹಂಚಿಕೊಂಡಿರುವ ದಲೈ ಲಾಮಾ, “ಬಹಿರಂಗಗೊಂಡಿರುವ ಎಪ್ಸ್ಟೀನ್ ಫೈಲ್ಸ್ ಮೂಲಕ ದಲೈ ಲಾಮಾ ಅವರನ್ನು ಜೆಫ್ರಿ ಎಪ್ಸ್ಟೀನ್‌ಗೆ ಲಿಂಕ್ ಮಾಡಲು ಪ್ರಯತ್ನಿಸಲಾಗುತ್ತಿದೆ. ಆದರೆ ಅವರು ಎಪ್ಸ್ಟೀನ್‌ನನ್ನು ಭೇಟಿಯಾಗಿಲ್ಲ ಅಥವಾ ಅವರ ಪರವಾಗಿ ಯಾರೂ ಕೂಡ ಆತನ ಜೊತೆ ಸಂಪರ್ಕ ಹೊಂದಲು ಅನುಮತಿ ನೀಡಿಲ್ಲ” ಎಂದು ದೃಢವಾಗಿ ಹೇಳಿದ್ದಾರೆ.

ಅಭಿಪ್ರಾಯ: ಜ್ಯೋತಿಷಿ ಕಮಲಾಕರ್ ಭಟ್-ಸುಚಿತ್ರಾ ನಾಯ್ಕ್‌ ಪ್ರಕರಣ ಆಧುನಿಕ ಸಮಾಜದ ನೈತಿಕ ಪತನಕ್ಕೆ ಹಿಡಿದ ಕೈಗನ್ನಡಿ

ದಾಖಲೆಗಳಲ್ಲಿ ದಲೈ ಲಾಮಾ ಅವರ ಹೆಸರು ಹಲವು ಬಾರಿ ಉಲ್ಲೇಖವಾಗಿದ್ದರೂ, ಅವು ಕೇವಲ ವಿಳಾಸ ಪುಸ್ತಕಗಳು, ದೇಣಿಗೆ ಪಟ್ಟಿಗಳು ಅಥವಾ ಆಡಳಿತಾತ್ಮಕ ದಾಖಲೆಗಳ ರೂಪದಲ್ಲಿವೆ ಎಂದು ಹೇಳಲಾಗಿದೆ. ಇದರಲ್ಲಿ ಅವರ ನೇರ ಭೇಟಿ ಅಥವಾ ಲೈಂಗಿಕ ಅಪರಾಧದಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಎದುರಿಸುತ್ತಿದ್ದ ಜೆಫ್ರಿ ಎಪ್ಸ್ಟೀನ್ 2019 ರಲ್ಲಿ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸಂಪರ್ಕ ಹೊಂದಿದ್ದ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿ ಈಗ ಸರಣಿಯಾಗಿ ಬಿಡುಗಡೆಯಾಗುತ್ತಿದ್ದು, ಹಲವು ದೇಶಗಳ ನಾಯಕರು ಹಾಗೂ ಉದ್ಯಮಿಗಳ ಹೆಸರು ಇದರಲ್ಲಿ ಕೇಳಿಬರುತ್ತಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories