ಅಗ್ನಿವೀರರಾಗಿ ಸೇನೆಯಲ್ಲಿ ಸೇವೆ ಸಲ್ಲಿಸಲು ಸುವರ್ಣಾವಕಾಶ: 46,000 ಹುದ್ದೆಗೆ ಅರ್ಜಿ ಸಲ್ಲಿಸಿ
AGNIPATH Recruitment 2025 : ಭಾರತ ಸರ್ಕಾರ ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುವ ಸಲುವಾಗಿ ಯುವ ಜನತೆಗೆ ಅಗ್ನಿಪಥ ಪರಿಚಯಿಸಿದೆ.
ಇದರ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅದರ ಸೂಚನೆಯ ಪ್ರಕಾರ 46,000 ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಿದೆ. 17 ರಿಂದ 23 ವಯಸ್ಸಿನ ಅಭ್ಯರ್ಥಿಗಳು ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ನಾಲ್ಕು ವರ್ಷಗಳ ಈ ಸೇವೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ ಹಾಗೂ ಮಾನದಂಡಗಳೇನು ಎಂದು ತಿಳಿಯೋಣ.
ಅರ್ಹತೆ ಮತ್ತು ಮಾನದಂಡಗಳು
ಹುದ್ದೆಯ ಹೆಸರು
ಅಗ್ನಿವೀರ್
ಒಟ್ಟು ಹುದ್ದೆಗಳು
46,000
ಸೇವಾ ಕ್ಷೇತ್ರ
ಭಾರತೀಯ ಭೂ ಸೇನೆ, ವಾಯುಪಡೆ, ನೌಕಾಪಡೆ.
ವಿದ್ಯಾರ್ಹತೆ
8 ನೇ ತರಗತಿ, 10 ನೇ ತರಗತಿ ಹಾಗೂ 12 ನೇ ತರಗತಿ ಪಾಸಾಗಿರಬೇಕು.
ವಯೋಮಿತಿ
ಅಗ್ನಿವೀರ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 17 ಹಾಗೂ ಗರಿಷ್ಠ ವಯಸ್ಸು 23.
ಇದನ್ನೂ ಓದಿ: ಎಂಜಿನಿಯರ್ ಪದವೀಧರರಿಗೆ ಗುಡ್ ನ್ಯೂಸ್: ಬಿಇಎಲ್‌ನಲ್ಲಿದೆ 610 ಹುದ್ದೆಗಳು
ವೇತನ
30,000 ರೂ. ದಿಂದ 40,000 ರೂ.
ಆಯ್ಕೆ
ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ದೈಹಿಕ ಸದೃಢತಾ ಪರೀಕ್ಷೆ ಒಳಗೊಳಡಿರುತ್ತದೆ.
ಅರ್ಜಿ ಸಲ್ಲಿಕೆ ಹೇಗೆ ?
- ಮೊದಲಿಗೆ ಅಗ್ನಿಪತ್‌ದ ಅಧಿಕೃತ ವೆಬ್‌ಸೈಟ್ agnipathvayu.cdac.in ಗೆ ಭೇಟಿ ನೀಡಿ.
- ಅಲ್ಲಿ ಮುಖಪುಟದಲ್ಲಿರುವ ಅರ್ಜಿ ನಮೂನೆಯ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಹೆಸರು/ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ.
- ಅಗತ್ಯವಿರುವ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಅರ್ಜಿಯಲ್ಲಿ ನೀಡಿರುವ ಸೂಚನೆಗಳಲ್ಲಿ ಕೇಳಿದಂತೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿದ ನಂತರ, ಅದನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
ಇದನ್ನೂ ಓದಿ: ಪಿಯುಸಿ ಪಾಸ್ ಆದವರಿಗೆ ರೈಲ್ವೆಯಲ್ಲಿ ಉದ್ಯೋಗ: 8875 ಹುದ್ದೆಗೆ ಅರ್ಜಿ
(AGNIPATH Recruitment 2025 apply for 46000 posts as Agniveer in Indian Army)



