ಕ್ರೀಡಾಪಟುಗಳಿಗೆ ಶುಭ ಸುದ್ದಿ! ಬಿಎಸ್‌ಎಫ್‌ನಲ್ಲಿ ಕಾನ್ಸ್‌ಟೇಬಲ್‌ನ ಜನರಲ್ ಡ್ಯೂಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ
BSF Constable GD Recruitment 2025: ಭಾರತದ ಗಡಿ ಭದ್ರತಾ ಪಡೆ (BSF)ಯು ಕ್ರೀಡಾ ಕೋಟಾದ ಅಡಿಯಲ್ಲಿ ಖಾಲಿ ಇರುವ ಕಾನ್ಸ್‌ಟೇಬಲ್‌ನ ಜನರಲ್ ಡ್ಯೂಟಿ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ.
ಈ ನೇಮಕಾತಿ ಪ್ರಕಟಣೆಯಲ್ಲಿ ಖಾಲಿ ಇರುವ 391 ಕಾನ್ಸ್‌ಟೇಬಲ್ ಜಿಡಿ ಹುದ್ದೆಗಳನ್ನು ಬಿಎಸ್‌ಎಫ್ ಭರ್ತಿ ಮಾಡಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 16 ರಿಂದ ಪ್ರಾರಂಭವಾಗಿದೆ.
ಆಸಕ್ತ, ಅರ್ಹ ಅಭ್ಯರ್ಥಿಗಳು ನವೆಂಬರ್ 4, 2025 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕಾನ್ಸ್‌ಟೇಬಲ್‌ನ ಜನರಲ್ ಡ್ಯೂಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತೆ ಮತ್ತು ಮಾನದಂಡಗಳನ್ನು ತಿಳಿಯೋಣ.
ಅರ್ಹತೆ ಮತ್ತು ಮಾನದಂಡಗಳು
ಹುದ್ದೆಯ ಹೆಸರು
ಕಾನ್ಸ್‌ಟೇಬಲ್‌ನ ಜನರಲ್ ಡ್ಯೂಟಿ
ಒಟ್ಟು ಹುದ್ದೆಗಳ ಸಂಖ್ಯೆ
ಈ ನೇಮಕಾತಿಯಲ್ಲಿ ಒಟ್ಟು 391 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.
ಶೈಕ್ಷಣಿಕ ಅರ್ಹತೆ
ಈ ನೇಮಕಾತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಎಸ್‌ಎಸ್ಎಲ್‌ಸಿ ಅಥವಾ ಅದಕ್ಕೆ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ಸಂಬಂಧಿತ ಕ್ರೀಡೆಯಲ್ಲಿ ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರಬೇಕು.
ವಯೋಮಿತಿ
ಅಭ್ಯರ್ಥಿಗಳ ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು ಹಾಗೂ ಗರಿಷ್ಠ ವಯಸ್ಸು 23 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಅರ್ಜಿ ಶುಲ್ಕ
ಬಿಎಸ್‌ಎಫ್ ಕಾನ್ಸ್‌ಟೇಬಲ್ ಜಿಡಿ ಹುದ್ದೆಗೆ ಅರ್ಜಿ ಸಲ್ಲಿಸಲು, ಸಾಮಾನ್ಯ ಮತ್ತು ಒಬಿಸಿ ವರ್ಗಗಳ ಅಭ್ಯರ್ಥಿಗಳು 159 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್‌ಸಿ/ಎಸ್‌ಟಿ ವರ್ಗಗಳ ಅಭ್ಯರ್ಥಿಗಳು ಫಾರ್ಮ್ ಅನ್ನು ಉಚಿತವಾಗಿ ಭರ್ತಿ ಮಾಡಬಹುದು.
ಇದನ್ನೂ ಓದಿ: ಟೆರಿಟೋರಿಯಲ್ ಆರ್ಮಿ ನೇಮಕಾತಿ ರ್ಯಾಲಿ ವೇಳಾಪಟ್ಟಿ ಬಿಡುಗಡೆ: ಕರ್ನಾಟಕದಲ್ಲಿ ಯಾವಾಗ?
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಅವರ ಅರ್ಹತೆಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
ನಂತರ ದಾಖಲೆ ಪರಿಶೀಲನೆ, ದೈಹಿಕ ಗುಣಮಟ್ಟ ಪರೀಕ್ಷೆ (PST) ಮತ್ತು ವಿವರವಾದ ವೈದ್ಯಕೀಯ ಪರೀಕ್ಷೆ (DME) ಗೆ ಆಹ್ವಾನಿಸಲಾಗುತ್ತದೆ. ಈ ಎಲ್ಲಾ ಹಂತಗಳ ಫಲಿತಾಂಶಗಳ ಆಧಾರದ ಮೇಲೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಕಾನ್ಸ್‌ಟೇಬಲ್‌ನ ಜನರಲ್ ಡ್ಯೂಟಿ ಹುದ್ದೆ ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ.
ಅರ್ಜಿ ಸಲ್ಲಿಕೆ ಹೇಗೆ?
- ನೇಮಕಾತಿಯಲ್ಲಿ ಆನ್‌ಲೈನ್ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಬೇರೆ ಯಾವುದೇ ವಿಧಾನದ ಮೂಲಕ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.
- ಬಿಎಸ್‌ಎಫ್ ಕಾನ್ಸ್‌ಟೇಬಲ್ ಜಿಡಿ ನೇಮಕಾತಿ 2025 ಅರ್ಜಿ ನಮೂನೆಯನ್ನು ಭರ್ತಿ ಮಾಡಲು, ಮೊದಲಿಗೆ ಬಿಎಸ್‌ಎಫ್‌ನ ಅಧಿಕೃತ ವೆಬ್‌ಸೈಟ್ rectt.bsf.gov.in ಗೆ ಭೇಟಿ ನೀಡಬೇಕು.
- ವೆಬ್‌ಸೈಟ್‌ನ ಮುಖಪುಟದಲ್ಲಿ Current Recruitment Openings ಗೆ ಹೋಗಬೇಕು. ಅಲ್ಲಿಈ ನೇಮಕಾತಿಗೆ ಸಂಬಂಧಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
- ಬಳಿಕ ಅಲ್ಲಿ ವಿನಂತಿಸಿದ ವಿವರಗಳನ್ನು ನಮೂದಿಸುವ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
- ನೋಂದಣಿಯಾದ ನಂತರ, ಅಭ್ಯರ್ಥಿಯು ಇತರ ವಿವರಗಳನ್ನು ಭರ್ತಿ ಮಾಡುವ ಮೂಲಕ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಬೇಕು.
- ಅಂತಿಮವಾಗಿ, ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಬೇಕು.
- ಈಗ ಅರ್ಜಿಯನ್ನು ಇನ್ನೊಮ್ಮೆ ಸರಿಯಾಗಿ ಪರಿಶೀಲಿಸಿ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.
- ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು.
ಇದನ್ನೂ ಓದಿ: ಇಸ್ರೋದಲ್ಲಿ ಸೈಂಟಿಸ್ಟ್ ಆಗುವ ಸುರ್ಣಾವಕಾಶ: 141 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
(application invited for the post of BSF Constable GD last date to apply for this post is November 4)



