IBPSನಲ್ಲಿ 10,277 ಕ್ಲಕ್ ಹುದ್ದೆಗಳ ನೇಮಕ ! ಅರ್ಜಿ ಸಲ್ಲಿಸಲು ನಾಳೆಯೇ ಕೊನೆ ದಿನ
IBPS Recruitment 2025: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) 10,277 ಕ್ಲರ್ಕ್ (ಕಸ್ಟಮರ್ ಸರ್ವಿಸ್ ಅಸೋಸಿಯೇಟ್) ಹುದ್ದೆಗಳ ನೇಮಕಾತಿಗೆ ಆಗಸ್ಟ್ 1 ರಂದು ಅಧಿಸೂಚನೆ ಹೊರಡಿಸಿತ್ತು.
ಈಗಾಗಲೇ ಬಹಳಷ್ಟು ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿರಬಹುದು. ಆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಲು ಮರೆತಿದ್ದರೆ ಚಿಂತಿಸುವ ಅಗತ್ಯವಿಲ್ಲ.
ಏಕೆಂದರೆ ಅರ್ಜಿ ಸಲ್ಲಿಸಲು ಆಗಸ್ಟ್ 21 ರವರೆಗೆ ಕೊನೆಯ ಅವಕಾಶವಿರುತ್ತದೆ. ಅಂದರೆ ಆಸಕ್ತ ಅಭ್ಯರ್ಥಿಗಳು ನಾಳೆಯ ಒಳಗೆ IBPSನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಕನಸು ನನಸಾಗಿಸಿಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಕೆ ಹಾಗೂ ಈ ಹುದ್ದೆಗೆ ಅಗತ್ಯವಿರುವ ಅರ್ಹತೆಗಳೇನು ?
ಹುದ್ದೆಯ ಹೆಸರು
ಕಸ್ಟಮರ್ ಸರ್ವಿಸ್ ಅಸೋಸಿಯೇಟ್ (ಕ್ಲರ್ಕ್)
ಒಟ್ಟು ಹುದ್ದೆಗಳು
10,277 ಹುದ್ದೆಗಳು
ಶಿಕ್ಷಣ ಮತ್ತು ವಯೋಮಿತಿ
ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷಗಳು ಹಾಗೂ ಗರಿಷ್ಠ ವಯಸ್ಸು 28 ಆಗಿದೆ. ನಿಯಮಗಳ ಅಡಿಯಲ್ಲಿ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನಲ್ಲಿ ಸಡಿಲಿಕೆ ಇರುತ್ತದೆ.
ಇದನ್ನೂ ಓದಿ: ಬಿಪಿಎಸ್ಸಿ 539 ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ನೇಮಕಾತಿ: ಅರ್ಜಿ ಸಲ್ಲಿಸುವುದು ಹೇಗೆ ?
ಅರ್ಜಿ ಶುಲ್ಕ
ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಲು ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಾಮಾನ್ಯ ಹಾಗೂ ಇತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 850 ರೂ. ಮತ್ತು ಎಸ್ಸಿ, ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ 175 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
IBPS ಕ್ಲರ್ಕ್ ಹುದ್ದೆ : ಅರ್ಜಿ ಸಲ್ಲಿಕೆ ಹೇಗೆ ?
– IBPS ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಮೊದಲಿಗೆ IBPSನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.‘
– ಅಲ್ಲಿ ಮುಖಪುಟದಲ್ಲಿರುವ ‘ಹೊಸ ನೋಂದಣಿ’ ಮೇಲೆ ಕ್ಲಿಕ್ಕಿಸಿ, ಅಗತ್ಯ ಮಾಹಿತಿಗಳನ್ನು ನೀಡಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.
– ನೋಂದಣಿ ನಂತರ ಇತರ ವಿವರಗಳನ್ನು ನೀಡಿ, ನಿಮ್ಮ ಸಹಿ ಮತ್ತು ಫೋಟೋವನ್ನು ಅಪ್ಲೋಡ್ ಮಾಡಿ.
– ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿ ನಮೂನೆಯನ್ನು ಸಲ್ಲಿಸಿ. ಭವಿಷ್ಯದ ಉಲ್ಲೇಖಗಳಿಗಾಗಿ ಅರ್ಜಿ ಸಲ್ಲಿಸಿದ ಪ್ರತಿಯ ಪ್ರಿಂಟ್ಔಟ್ ತೆಗೆದುಕೊಳ್ಳಿ.
– ಅಧಿಸೂಚನೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ.
ಇದನ್ನೂ ಓದಿ: LIC ಯಿಂದ 841 ವಿವಿಧ ಹುದ್ದೆಗಳ ನೇಮಕಾತಿ: ಯುವ ಪದವೀಧರರಿಗೆ ಗುಡ್ ನ್ಯೂಸ್!
(IBPS Recruitment 2025 last date for application for Clerk posts is August 21 details in Kannada)



