ಇಂಟೆಲಿಜನ್ಸ್ ಬ್ಯೂರೋ ನೇಮಕಾತಿ 2025: 4,987 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆ ದಿನ
Intelligence Bureau Recruitment 2025: ಗೃಹ ಸಚಿವಾಲಯದ ಅಧೀನದಲ್ಲಿರುವ ಗುಪ್ತಚರ ಬ್ಯೂರೋ (Intelligence Bureau) ಈ ವರ್ಷದ ಅತಿ ದೊಡ್ಡ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಇಂಟಲಿಜೆನ್ಸ್ ಬ್ಯೂರೋ ಒಟ್ಟು 4987 ಭದ್ರತಾ ಸಹಾಯಕ/ ಕಾರ್ಯನಿರ್ವಾಹಕ (SA/Exe) ಹುದ್ದೆಗೆ ಅರ್ಜಿ ಆಹ್ವಾನಿಸದೆ. ಹತ್ತನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಭಾರತದ ಪ್ರಮುಖ ಆಂತರಿಕ ಗುಪ್ರಚರ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಇದೊಂದು ಅನನ್ಯ ಅವಕಾಶವಾಗಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಗೃಹ ಸಚಿವಾಲಯದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆಗಸ್ಟ್ 17ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿ ಅಭಿಯಾನವು ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಾದ ಮಾಹಿತಿ ಹೀಗಿದೆ…
Intelligence Bureau Recruitment 2025: ಹುದ್ದೆಯ ಹೆಸರು
ಭದ್ರತಾ ಸಹಾಯಕ/ಕಾರ್ಯನಿರ್ವಾಹಕ
ಒಟ್ಟು ಹುದ್ದೆಗಳು: 4987
ಶೈಕ್ಷಣಿಕ ಅರ್ಹತೆ
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ವಾಸಸ್ಥಳ ಪ್ರಮಾಣಪತ್ರ ಹಾಗೂ ಸ್ಥಳೀಯ ಭಾಷೆಯ ಜ್ಞಾನವೂ ಅತ್ಯಗತ್ಯ.
ವಯೋಮಿತಿ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 27 ವರ್ಷಗಳು. ನಿಯಮಾನುಸಾರ ಮೀಸಲು ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಸಂಬಳ ಮತ್ತು ಆಯ್ಕೆ ಪ್ರಕ್ರಿಯೆ
ಆಯ್ಕೆಯಾದ ಅಭ್ಯರ್ಥಿಗಳಿಗೆ ಲೆವಲ್ – 3 (21,700 ರೂ. – 69,100 ರೂ.) ಅಡಿಯಲ್ಲಿ ವೇತನ ದೊರೆಯುತ್ತದೆ. ಈ ಹುದ್ದೆಗೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುವುದು.
ಇದನ್ನೂ ಓದಿ: ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶ! ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿದೆ 500 ಜನರಲಿಸ್ಟ್ ಆಫೀಸರ್ ಹುದ್ದೆ
ಅರ್ಜಿ ಶುಲ್ಕ
ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ: 650 ರೂ
ಎಸ್ಸಿ/ಎಸ್ಟಿ: 550 ರೂ
ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳು: 550 ರೂ
ಅರ್ಜಿ ಸಲ್ಲಿಕೆ ಹೇಗೆ?
– ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಗೃಹ ಸಚಿವಾಲಯದ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ.
– ಅಲ್ಲಿ ಮುಖಪುಟದಲ್ಲಿರುವ IB ಸೆಕ್ಯುರಿಟಿ ಅಸಿಸ್ಟೆಂಟ್/ಎಕ್ಸಿಕ್ಯುಟಿವ್ ನೇಮಕಾತಿ 2025 ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿ.
– ಲಾಗಿನ್ ಆದ ನಂತರ ಅಲ್ಲಿ ವೈಯಕ್ತಿಕ ವಿವರಗಳನ್ನು ನಮೂದಿಸಿ.
– ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ ನಿಗದಿತ ಶುಲ್ಕವನ್ನು ಪಾವತಿಸಿ.
– ಫಾರ್ಮ್ ಅನ್ನು ಸಲ್ಲಿಸಿದ ನಂತರ ದೃಢೀಕರಣ ಪುಟವನ್ನು ಡೌನ್ಲೋಡ್ ಮಾಡಿಕೊಳ್ಳಿ.
– ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದನ್ನೂ ಓದಿ: ಸೆಂಟ್ರಲ್ ರೇಲ್ವೆಯಲ್ಲಿ ನೇಮಕಾತಿ : ಎಸ್ಎಸ್ಎಲ್ಸಿ, ಪಿಯಸಿ ಆದವರಿಗೆ ಗುಡ್ ನ್ಯೂಸ್ !
(Intelligence Bureau Recruitment 2025 August 17 is the last date to apply for 4987 posts)



