ಇಸ್ರೋದಲ್ಲಿ 100ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ : ₹ 1 ಲಕ್ಷಕ್ಕೂ ಅಧಿಕ ವೇತನ

ISRO Job: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿ/ಇಂಜಿನಿಯರ್, ರೇಡಿಯೋಗ್ರಾಫರ್, ವಾತಾವರಣ ವಿಜ್ಞಾನ/ಹವಾಮಾನಶಾಸ್ತ್ರ, ತಂತ್ರಜ್ಞ ಮತ್ತು ಇತರ ಹುದ್ದೆಗಳು ಸೇರಿದಂತೆ 100 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತ ಅರ್ಜಿದಾರರು ನವೆಂಬರ್ 14, 2025 ರವರೆಗೆ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳಾದ isro.gov.in ಅಥವಾ shar.gov.in ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವಿಜ್ಞಾನಿ/ಇಂಜಿನಿಯರ್ ಹುದ್ದೆಗಳಿಗೆ ರೂ. 56,100 ರಿಂದ ರೂ. 1,77,500 (ಹಂತ 10) ವರೆಗಿನ ವೇತನವನ್ನು ನೀಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ. ಆಯ್ಕೆಯಾದವರನ್ನು ಚೆನ್ನೈನಲ್ಲಿರುವ ಭಾರತದ ಬಾಹ್ಯಾಕಾಶ ನಿಲ್ದಾಣವಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ನೇಮಿಸಲಾಗುತ್ತದೆ.

Also Read: TISS ನಲ್ಲಿ ಪ್ರೋಗ್ರಾಮ್‌ ಕೋರ್ಡಿನೇಟರ್, ಡೇಟಾ ಅನಾಲಿಸ್ಟ್‌ ಸೇರಿ 4 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆ ದಿನ!

ಇನ್ನು ಈ ಹುದ್ದೆಗಳ ಜೊತೆಯಲ್ಲಿ ತಂತ್ರಜ್ಞ ಮತ್ತು ಡ್ರಾಫ್ಟ್ಸ್‌ಮನ್ ಹುದ್ದೆಗಳು ಕೂಡ ಖಾಲಿಯಿದ್ದು ಈ ಹುದ್ದೆಗಳ ನೇಮಕಾತಿಗೂ ಅರ್ಜಿ ಆಹ್ವಾನಿಸಲಾಗಿದೆ. ಇವುಗಳ ವೇತನ ರೂ. 21,700 ರಿಂದ ರೂ. 69,100 ರವರೆಗೆ ಇರಲಿದೆ. ಮತ್ತು ನರ್ಸ್, ಗ್ರಂಥಾಲಯ ಸಹಾಯಕ ಹುದ್ದೆಗಳು ಸಹ ಖಾಲಿಯಿದ್ದು ಪ್ರತಿಯೊಂದು ಹುದ್ದೆಗಳಲ್ಲಿಯೂ ಮೀಸಲಾತಿ ಇಲ್ಲದ ವರ್ಗ , ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು , ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ , ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಮಾಜಿ ಸೈನಿಕರುಗಳಿಗೆ ಮೀಸಲಾತಿ ನೀಡಲಾಗಿದೆ.

ವಯಸ್ಸಿನ ಮಿತಿ ಹಾಗೂ ಪ್ರವೇಶ ಶುಲ್ಕ :

ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಕನಿಷ್ಟ 18 ವರ್ಷದಿಂದ ಗರಿಷ್ಠ ವಯಸ್ಸಿನ ಮಿತಿ ವಿವಿಧ ಹುದ್ದೆಗಳಿಗೆ ಬೇರೆ ಬೇರೆ ಪ್ರಾಯವನ್ನು ನಿಗದಿ ಪಡಿಸಲಾಗಿದೆ. ಅರ್ಜಿದಾರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ 750 ರೂಪಾಯಿಗಳನ್ನು ಅರ್ಜಿ ಶುಲ್ಕದ ರೂಪದಲ್ಲಿ ಪಾವತಿ ಮಾಡಬೇಕಿದೆ.

ಈ ಶುಲ್ಕವನ್ನು ಲಿಖಿತ ಪರೀಕ್ಷೆಯ ಸಮಯದಲ್ಲಿ ಮಹಿಳೆಯರು, ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರಿಗೆ ಪೂರ್ಣವಾಗಿ ಮರುಪಾವತಿಸಲಾಗುತ್ತದೆ. ಇತರ ಅರ್ಜಿದಾರರಿಗೆ 500 ರೂ. ಮರುಪಾವತಿಸಲಾಗುತ್ತದೆ.

Also Read: ಡಿಪ್ಲೊಮಾ, ಐಟಿಐ ಮಾಡಿದವರಿಗೆ ಗುಡ್ ನ್ಯೂಸ್‌! BEL ನಿಂದ 162 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ :

ಲಿಖಿತ ಪರೀಕ್ಷೆ ಹಾಗೂ ಸಂದರ್ಶನಗಳನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಇಂಜಿನಿಯರ್ ಹಾಗೂ ವಿಜ್ಞಾನಿ ಹುದ್ದೆಗಳಿಗೆ 50 ಪ್ರತಿಶತ ಲಿಖಿತ ಪರೀಕ್ಷೆ ಫಲಿತಾಂಶ ಹಾಗೂ 50 ಪ್ರತಿಶತ ಸಂದರ್ಶನದ ಫಲಿತಾಂಶ ಆಧರಿಸಲಾಗುತ್ತದೆ. ತಾಂತ್ರಿಕ ಸಹಾಯಕ/ವೈಜ್ಞಾನಿಕ ಸಹಾಯಕ/ಗ್ರಂಥಾಲಯ ಸಹಾಯಕ ‘ಎ’/ತಂತ್ರಜ್ಞ -ಬಿ/ಡ್ರಾಫ್ಟ್ಸ್‌ಮನ್-ಬಿ ಹುದ್ದೆಗಳಿಗೆ ಕೌಶಲ್ಯ ಪರೀಕ್ಷೆ ಇರಲಿದೆ.

ಅರ್ಹ ಅಭ್ಯರ್ಥಿಗಳು ಲಿಖಿತ ಪರೀಕ್ಷೆ, ಸಂದರ್ಶನ ಅಥವಾ ಕೌಶಲ್ಯ ಪರೀಕ್ಷೆಯ ಕುರಿತು ಅವರ ನೋಂದಾಯಿತ ಇಮೇಲ್ ವಿಳಾಸಗಳಿಗೆ ಮಾತ್ರ ಅಧಿಸೂಚನೆಗಳನ್ನು ಪಡೆಯಬಹುದಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories