10ನೇ ತರಗತಿ ಪಾಸಾದವರಿಗೆ ಕರ್ನಾಟಕ ಹೈಕೋರ್ಟ್ನಲ್ಲಿ ಉದ್ಯೋಗ: 101 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ!
Jobs in Karnataka High Court: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
Jobs in Karnataka High Court: ಕರ್ನಾಟಕ ಉಚ್ಚ ನ್ಯಾಯಾಲಯವು (High Court of Karnataka) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹತ್ತನೇ ತರಗತಿ ಪಾಸಾದವರಿಗೆ ಇದೊಂದು ಉತ್ತಮ ಉದ್ಯೋಗಾವಕಾಶವಾಗಿದೆ.
ಹುದ್ದೆಗಳ ವಿವರ:
-
ಒಟ್ಟು ಹುದ್ದೆಗಳು: 101
-
ಹುದ್ದೆಯ ಹೆಸರು: ಗ್ರೂಪ್-ಡಿ (ಪೀನ್, ವಾಚ್ಮನ್ ಮತ್ತು ಸ್ವೀಪರ್)
-
ಉದ್ಯೋಗ ಸ್ಥಳ: ಕರ್ನಾಟಕ
-
ವೇತನ ಶ್ರೇಣಿ: ತಿಂಗಳಿಗೆ ರೂ. 19,900 ರಿಂದ ರೂ. 69,100/-
ವಿದ್ಯಾರ್ಹತೆ ಮತ್ತು ವಯೋಮಿತಿ:
-
ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
-
ವಯೋಮಿತಿ: ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದಂತೆ ನಿಯಮಾನುಸಾರ ವಯೋಮಿತಿ ಇರುತ್ತದೆ.
ಪ್ರಮುಖ ದಿನಾಂಕಗಳು:
-
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 22-04-2026
-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-ಮೇ-2026
ಅರ್ಜಿ ಸಲ್ಲಿಸುವ ವಿಧಾನ:
-
ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಕೃತ ವೆಬ್ಸೈಟ್ judiciary.karnataka.gov.in ಗೆ ಭೇಟಿ ನೀಡಿ.
-
ನೇಮಕಾತಿ (Recruitment) ವಿಭಾಗಕ್ಕೆ ಹೋಗಿ ಅಧಿಕೃತ ಅಧಿಸೂಚನೆಯನ್ನು ಗಮನವಿಟ್ಟು ಓದಿ.
-
ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು.
-
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿಯನ್ನು ಸಲ್ಲಿಸಿದ ನಂತರ ಒಂದು ಪ್ರತಿಯನ್ನು ಮುಂದಿನ ಉಲ್ಲೇಖಕ್ಕಾಗಿ ಇಟ್ಟುಕೊಳ್ಳಿ.
NTPC Recruitment 2026: ಎಂಜಿನಿಯರಿಂಗ್ ಪದವೀಧರರಿಗೆ 250 ಹುದ್ದೆಗಳು; 55,000 ರೂ. ವೇತನ!
ಉದ್ಯೋಗಾಕಾಂಕ್ಷಿಗಳಿಗೆ ವಿಶೇಷ ಸೂಚನೆ:
ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಭಾವಚಿತ್ರ ಮತ್ತು ಸಹಿಯನ್ನು ನಿಗದಿತ ಗಾತ್ರಕ್ಕೆ (20KB–100KB) ರೀಸೈಜ್ ಮಾಡಿಕೊಳ್ಳಿ. ಅರ್ಜಿ ಸಲ್ಲಿಸಲು ಕೊನೆಯ ಕ್ಷಣದವರೆಗೆ ಕಾಯದೆ ಶೀಘ್ರವಾಗಿ ಅರ್ಜಿಯನ್ನು ಪೂರ್ಣಗೊಳಿಸುವುದು ಉತ್ತಮ.



