RRB NTPC ಗ್ರಾಜುಯೇಟ್‌ ಲೆವಲ್‌ ಸಿಬಿಟಿ 2 ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ: ಡೌನ್‌ಲೋಡ್‌ ಮಾಡುವುದು ಹೇಗೆ?

RRB NTPC UG CBT 2 Admit Card 2025: ರೈಲ್ವೆ ನೇಮಕಾತಿ ಮಂಡಳಿ (RRB) ಯು ಗ್ರಾಜುಯೇಟ್ ಲೆವಲ್‌ ಸಿಬಿಟಿ–II ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವುದರ ಮೂಲಕ ತಮ್ಮ ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ರೈಲ್ವೆ ನೇಮಕಾತಿ ಮಂಡಳಿಯು ಸಿಬಿಟಿ–I ರ ಫಲಿತಾಂಶವನ್ನು ಸೆಪ್ಟೆಂಬರ್‌ 19, 2025 ರಂದು ಬಿಡುಗಡೆ ಮಾಡಿತ್ತು. ಸಿಬಿಟಿ 2ರ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗಿರುವ ಅಭ್ಯರ್ಥಿಗಳು ತಮ್ಮ ಹಾಲ್‌ ಟಿಕೆಟ್‌ ಅನ್ನು ಈ ರೀತಿಯಾಗಿ ಡೌನ್‌ಲೋಡ್‌ ಮಾಡಿಕೊಳ್ಳುಬಹುದು.

RRB NTPC UG CBT 2 ಪರೀಕ್ಷೆ 2025 ಹಾಲ್‌ ಟಿಕೆಟ್‌ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

  • ಮೊದಲಿಗೆ ರೈಲ್ವೆ ನೇಮಕಾತಿ ಮಂಡಳಿ (RRB) ಯ ಅಧಿಕೃತ ವೆಬ್‌ಸೈಟ್‌ rrbcd.gov.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿರುವ ಸಿಬಿಟಿ–II ಇಂಟಿಮೇಷನ್‌ ಸ್ಲಿಪ್‌ ಮತ್ತು ಕಾಲ್‌ ಲೆಟರ್‌ ಮೇಲೆ ಕ್ಲಿಕ್ಕಿಸಿ.
  • ನಿಮ್ಮ ರಜಿಸ್ಟ್ರೇಷನ್‌ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
  • ಬಳಿಕ ಲಾಗಿನ್‌ ಮೇಲೆ ಕ್ಲಿಕ್ಕಿಸಿ. ಈಗ ಕಂಪ್ಯೂಟರ್‌ ಪರದೆಯ ಮೇಲೆ ನಿಮ್ಮ ಹಾಲ್‌ ಟಿಕೆಟ್‌ ಕಾಣಿಸುತ್ತದೆ.
  • ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ನಂತರ ಅದರ ಪ್ರಿಂಟ್‌ಔಟ್‌ ತೆಗೆದುಕೊಳ್ಳಿ.

ಇದನ್ನೂ ಓದಿ: 12ನೇ ತರಗತಿ ಪಾಸಾದ ಪುರುಷರಿಗೆ ಗುಡ್ ನ್ಯೂಸ್! 737 ಕಾನ್ಸ್‌ಟೇಬಲ್ ಡ್ರೈವ‌ರ್ ಹುದ್ದೆಗೆ ಅರ್ಜಿ ಸಲ್ಲಿಸಿ

ರೈಲ್ವೆ ನೇಮಕಾತಿ ಮಂಡಳಿ (RRB) ಯು ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆಗೆ ಹಾಜಾರಾಗಲು ಉಚಿತ ರೈಲು ಪ್ರಯಾಣಕ್ಕೆ ಅವಕಾಶ ನೀಡಿದೆ.

ಈ ನೇಮಕಾತಿ ಅಭಿಯಾನದಲ್ಲಿ ವೇತನ ಶ್ರೇಣಿಯು ಹುದ್ದೆಗಳಿಗೆ ಅನುಗುಣವಾಗಿ 2 ಮತ್ತು 3 ರ ಅಡಿಯಲ್ಲಿ ಒದಗಿಸಲಾಗುತ್ತದೆ. ಕಮರ್ಷಿಯಲ್‌ ಮತ್ತು ಟಿಕೆಟ್‌ ಕ್ಲರ್ಕ್‌ ಹುದ್ದೆಗಳಿಗೆ ಆರಂಭಿಕ ವೇತನವು 21,700 ರೂ ಹಾಗೂ ಇತರೆ ಹುದ್ದೆಗಳಿಗೆ 19,900 ರೂ. ಗಳಾಗಿವೆ.

ಇದನ್ನೂ ಓದಿ: ರೈಲ್ವೆಯಲ್ಲಿದೆ ಅತಿ ದೊಡ್ಡ ಅವಕಾಶ : 11,813 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

(RRB NTPC UG CBT 2 Admit Card 2025 released download your hall ticket with this simple steps)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories