ಲಿವರ್ ಸಮಸ್ಯೆಯಿದ್ದರೂ ಮದ್ಯಕ್ಕೆ ಪಟ್ಟು: ಪತ್ನಿ ಎಣ್ಣೆ ಕೊಡಿಸಲಿಲ್ಲವೆಂದು ಆಟೋ ಚಾಲಕ ಆತ್ಮಹತ್ಯೆ!
ಮೃತ ವ್ಯಕ್ತಿಯನ್ನು 49 ವರ್ಷದ ಆಟೋ ಚಾಲಕ ಡುಮಿಂಗ್ ಮನ್ವೇಲ್ ರೊಡ್ರಿಗಿಸ್ ಎಂದು ಗುರುತಿಸಲಾಗಿದೆ.

ಅತಿಯಾದ ಮದ್ಯಪಾನದಿಂದಾಗಿ ಲಿವರ್ ಸೋಂಕಿಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು, ಪತ್ನಿ ಮದ್ಯ ಕೊಡಿಸಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಶರಣಾದ ವಿಲಕ್ಷಣ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆ ಕಾರವಾರದ ಕದ್ರಾ ಚರ್ಚ್ವಾಡ್ನಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು 49 ವರ್ಷದ ಆಟೋ ಚಾಲಕ ಡುಮಿಂಗ್ ಮನ್ವೇಲ್ ರೊಡ್ರಿಗಿಸ್ ಎಂದು ಗುರುತಿಸಲಾಗಿದೆ.
ಆಟೋ ಚಾಲಕನಾಗಿದ್ದ ಡುಮಿಂಗ್ ಅತಿಯಾದ ಮದ್ಯದ ಚಟ ಹೊಂದಿದ್ದರು. ವಿಪರೀತ ಮದ್ಯ ಸೇವನೆಯಿಂದಾಗಿ ಅವರ ಲಿವರ್ ಸೋಂಕಿಗೆ ಒಳಗಾಗಿದ್ದು, ಕುರ್ನಿಪೇಟೆಯ ಆಯುರ್ವೇದ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮದ್ಯ ಸೇವನೆ ಮಾಡಿದರೆ ಜೀವಕ್ಕೆ ಅಪಾಯವಿದೆ, ಹೀಗಾಗಿ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡದಂತೆ ವೈದ್ಯರು ಡುಮಿಂಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು.
ಇದನ್ನೂ ಓದಿ : ಸಾರಿಗೆ ಮುಷ್ಕರದ ಎಚ್ಚರಿಕೆ! ಮೇ 20ರಂದು ಬಸ್ಗಳು ರಸ್ತೆಗಿಳಿಯುವುದು ಡೌಟು!
ಆದರೆ ಎಷ್ಟೇ ಅನಾರೋಗ್ಯವಾಗಿದ್ದರೂ ಡುಮಿಂಗ್ ಮಾತ್ರ ಎಣ್ಣೆ ಮೇಲಿನ ಮೋಹ ಒಂಚೂರು ಬಿಟ್ಟಿರಲಿಲ್ಲ, ವೈದ್ಯರ ಮಾತಿನಂತೆ ಡುಮಿಂಗ್ ಪತ್ನಿ ಅನಿತಾ ನಜರೇತ್ ಪತಿ ಮದ್ಯಪಾನ ಮಾಡದಂತೆ ನಿಗಾ ವಹಿಸಿದ್ದರು. ಪತಿ ಎಷ್ಟೇ ಒತ್ತಾಯ ಮಾಡಿದರೂ ಅನಿತಾ ಡುಮಿಂಗ್ ಮದ್ಯಪಾನಕ್ಕೆ ಅವಕಾಶ ನೀಡುತ್ತಿರಲಿಲ್ಲ. ತನಗೆ ಮದ್ಯಪಾನ ಮಾಡಲು ಪತ್ನಿ ಬಿಡುತ್ತಿಲ್ಲ ಎಂದು ಬೇಸರಗೊಂಡಿದ್ದ ಡುಮಿಂಗ್ ಕದ್ರಾದ ಆಸ್ಪತ್ರೆಯಿಂದ ಬೆಳ್ಳಂ ಬೆಳಗ್ಗೆ ಯಾರಿಗೂ ಹೇಳದೇ ಸೀದಾ ಮನೆಗೆ ಎದ್ದು ಬಂದಿದ್ದಾರೆ. ಮನೆಯ ಅಂಗಳದಲ್ಲಿಯೇ ಶೆಡ್ಡಿನ ಜಂತಿಗೆ ಕೇಬಲ್ ವೈರ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಟುಂಬಸ್ಥರು ಮನೆಯಿಂದ ಹೊರಬಂದು ನೋಡಿದಾಗಲೇ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



