ISKCON : ಇಸ್ಕಾನ್‌ ಟೆಂಪಲ್‌ ಮಾಲೀಕತ್ವ ಬೆಂಗಳೂರಿನ ಕೈತಪ್ಪುತ್ತಾ ? ಸುಪ್ರೀಂ ಕೋರ್ಟ್‌ ಭಿನ್ನ ತೀರ್ಪು

ಬೆಂಗಳೂರು : ಬೆಂಗಳೂರಿನ ಇಸ್ಕಾನ್ (ISKCON) ​ ಟೆಂಪಲ್​ ಮಾಲೀಕತ್ವದ ವಿಚಾರವಾಗಿ ಕಳೆದ 25 ವರ್ಷಗಳಿಂದ ಕಾನೂನು ಸಮರ ನಡೆಯುತ್ತಲೇ ಬಂದಿದೆ. ಇದೀಗ ಸುಪ್ರೀಂ ಕೋರ್ಟ್‌ ವಿಭಿನ್ನ ತೀರ್ಪು ಪ್ರಕಟಿಸಿದ್ದು, ದೇವಸ್ಥಾನದ ಆಡಳಿತ ಇದೀಗ ಬೆಂಗಳೂರಿನ ಕೈತುಪ್ಪುವ ಸಾಧ್ಯತೆಯಿದೆ.

ಕಳೆದ ಮೇ ತಿಂಗಳಿನಲ್ಲಿ ನ್ಯಾಯಮೂರ್ತಿಗಳಾದ ಎ.ಎಸ್​ ಓಕಾ ಮತ್ತು ಎಜಿ ಮಸೀಹ್​ ಅವರ ನೇತೃತ್ವದ ಸುಪ್ರೀಂ ಪೀಠ ಈ ದೇಗುಲ ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಸ್ಥಾನ ಮತ್ತು ಶೈಕ್ಷಣಿಕ ಸಂಕೀರ್ಣ ಮಾಲೀಕತ್ವದಲ್ಲಿದೆ ಎಂದು ತೀರ್ಪು ನೀಡಿತ್ತು.

2011ರ ಕರ್ನಾಟಕ ಹೈಕೋರ್ಟ್​ನ ತೀರ್ಪು ರದ್ದುಗೊಳಿಸಿದ್ದ ನ್ಯಾಯಪೀಠ ಬೆಂಗಳೂರಿನ ಶಾಖೆ ಇಸ್ಕಾನ್​​ ಟೆಂಪಲ್​ನ ಸಂಪೂರ್ಣ ಹಕ್ಕು ಹೊಂದಿದೆ ಹೇಳಿತ್ತು. ಆದರೆ ಬೆಂಗಳೂರಿಗೆ ದೊರಕಿದ ಈ ಗೆಲುವಿಗೆ ಇದೀಗ ಮತ್ತೊಮ್ಮೆ ಸಂಚಕಾರ ಎದುರಾಗಿದೆ.

ಸುಪ್ರೀಂ ಕೋರ್ಟ್‌ನಿಂದ ಈ ತೀರ್ಪು ಹೊರಬಿದ್ದು ಆರು ತಿಂಗಳು ಕೂಡ ಕಳೆದಿಲ್ಲ. ಅದಾಗಲೇ ಮುಂಬೈ ಶಾಖೆಯು ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್​ ಭಿನ್ನ ತೀರ್ಪು ನೀಡಿದೆ. ಇದರಿಂದ ಬೆಂಗಳೂರು ಶಾಖೆಯ ಕೈ ತಪ್ಪುತ್ತಾ ಇಸ್ಕಾನ್​ ಟೆಂಪಲ್​ ಮಾಲೀಕತ್ವ ಎಂಬ ಅನುಮಾನ ದಟ್ಟವಾಗಿದೆ.

ಇದನ್ನೂ ಓದಿ : ದತ್ತುಪುತ್ರನಿಗೂ ಅನುಕಂಪದ ಆಧಾರದಲ್ಲಿ ಉದ್ಯೋಗ : ಹೈಕೋರ್ಟ್‌ ಮಹತ್ವದ ಆದೇಶ

ಮುಂಬೈ ಶಾಖೆಯಿಂದ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎ.ಜಿ ಮಸೀಹ್​ ಅವರು ವಜಾಗೊಳಿಸಿದ್ದರೆ ನ್ಯಾಯಮೂರ್ತಿ ಜೆ.ಕೆ ಮಹೇಶ್ವರಿ ಈ ಅರ್ಜಿಯನ್ನು ಪುರಸ್ಕರಿಸಿದ್ದು ಮತ್ತೊಮ್ಮೆ ಈ ಪ್ರಕರಣವನ್ನು ನ್ಯಾಯಾಲಯದ ಮುಂದಿಡಲು ಅವಕಾಶ ನೀಡಿದ್ದಾರೆ.

ಮೇ ತಿಂಗಳಿನಲ್ಲಿ ನೀಡಲಾದ ತೀರ್ಪಿನಲ್ಲಿ ಸ್ವಲ್ಪ ದೋಷ ಇರುವ ಸಾಧ್ಯತೆಯಿದ್ದು ಈ ಅರ್ಜಿಯ ಮರುಪರೀಶಿಲನೆ ನಡೆಯಬೇಕು ಎಂದಿದ್ದಾರೆ. ಈ ಭಿನ್ನ ತೀರ್ಪಿನ ಬಳಿಕ ಇದೀಗ ಮತ್ತೊಮ್ಮೆ ಇಸ್ಕಾನ್​ ಟೆಂಪಲ್​ ವಿವಾದ ಬಗೆಹರಿಸಲು ವಿಸ್ತ್ರತ ಪೀಠ ರಚನೆಗೊಳ್ಳುವ ಸಾಧ್ಯತೆ ಇದೆ.

ಇಸ್ಕಾನ್‌ ದೇವಾಲಯ ಬೆಂಗಳೂರಿನ ಆಡಳಿತ ಮಂಡಳಿಯ ಪಾಲಾಯ್ತು ಎಂದು ನಿಟ್ಟುಸಿರು ಬಿಡಲಾಗಿತ್ತು. ಸಿಲಿಕಾನ್‌ ಸಿಟಿಯ ಪ್ರಮುಖ ಟೂರಿಸ್ಟ್​ ಸ್ಪಾಟ್​ ಇಸ್ಕಾನ್​ ಟೆಂಪಲ್​ ಮಾಲೀಕತ್ವ ಇದೀಗ ಮತ್ತೆ ತೂಗುಗತ್ತಿಯ ಮೇಲೆ ನಿಂತಿದೆ.

ಇದನ್ನೂ ಓದಿ : ಬಹುಕೋಟಿ ವಂಚಕ ಮಂಗಳೂರಿನ ರೋಶನ್‌ ಸಲ್ದಾನಾ ಆಸ್ತಿ ಜಪ್ತಿ

ISKCON Bengaluru Ownership Row Supreme Court Delivers Split Verdict

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories