ಕಾರ್ಕಳ ಪ್ರವಾಸೋದ್ಯಮಕ್ಕೆ ಹೊಡೆತ ಕೊಟ್ಟ ಕಾಂಗ್ರೆಸ್‌ ನಾಯಕರ ಆ ಒಂದು ಸುಳ್ಳು ..!

Karkala Tourism : ಕಾರ್ಕಳ : ಐತಿಹಾಸಿಕ, ಧಾರ್ಮಿಕ ತಾಣವಾಗಿರದೆ ಕಾರ್ಕಳ ತನ್ನ ನಿಸರ್ಗ ಸೌಂದರ್ಯದ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಪಶ್ಚಿಮ ಘಟ್ಟದ ತಪ್ಪಿಲಿನಲ್ಲಿರುವ ಕಾರ್ಕಳ ಪ್ರವಾಸಿಗರ ಪಾಲಿನ ನೆಚ್ಚಿನ ತಾಣ.

ಆದ್ರೆ ಪರಶುರಾಮ ಥೀಮ್‌ ಪಾರ್ಕ್‌ ವಿವಾದ ಕಾರ್ಕಳದ ಪ್ರವಾಸೋದ್ಯಮಕ್ಕೆ ಕೊಡಲಿಯೇಟು ಕೊಟ್ಟಿದೆ. ಕಾರ್ಕಳ ಅಂದ ತಕ್ಷಣ ಕಣ್ಣ ಮುಂದೆ ಪ್ರವಾಸಿತಾಣಗಳೇ ಬಂದು ಹೋಗುತ್ತವೆ.

ಬಾಹುಬಲಿ ಬೆಟ್ಟ, ಚತುರ್ಮುಖ ಬಸದಿ, ಕಾರ್ಕಳ ಕೋಟೆ, ರಾಮ ಸಮುದ್ರ ಕೆರೆ ಹೀಗೆ ಹೇಳುತ್ತಾ ಹೋದ್ರೆ ದೊಡ್ಡ ಪಟ್ಟಿಯೇ ಬೆಳೆದು ಬಿಡುತ್ತದೆ.

ಇಂತಹ ಪ್ರವಾಸಿ ತಾಣಗಳ ಸಾಲಿಗೆ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಸೇರ್ಪಡೆ ಆಗಿದ್ದೇ ಪರಶುರಾಮನ ಥೀರ್ಮ್‌ ಪಾರ್ಕ್.‌ ಕಾರ್ಕಳ ಹೊರವಲಯದ ಬೈಲೂರಿನ ಸಮೀಪದಲ್ಲಿರುವ ಉಮಿಕಲ್ಲು ಬೆಟ್ಟದಲ್ಲಿ ಈ ಥೀಮ್‌ ಪಾರ್ಕ್‌ ನಿರ್ಮಾಣಗೊಂಡಿತ್ತು.

33 ಅಡಿ ಎತ್ತರದ ಪರಶುರಾಮನ ಮೂರ್ತಿ ಥೀಮ್‌ ಪಾರ್ಕ್‌ನ ಕೇಂದ್ರಬಿಂದು. ಪರಶುರಾಮ ಮೂರ್ತಿಯ ಜೊತೆಗೆ ಆರೋಗ್ಯ, ಯೋಗ ಕೇಂದ್ರ, ಓಪನ್‌ ಆಂಫಿಥಿಯೇಟರ್‌ ಕಲಾ ಮತ್ತು ಮಾಹಿತಿ ಗ್ಯಾಲರಿ, ಲ್ಯಾನ್‌ಸ್ಟೇಪ್‌ ಗಾರ್ಡನ್‌ ಮತ್ತು ವಾಕಿಂಗ್‌ ಟ್ರ್ಯಾಕ್ಸ್‌, ವೀಕ್ಷಣಾ ಗೋಪುರದ ಜೊತೆಗೆ ವಿಶ್ರಾಂತಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿತ್ತು.

2023ರ ಜನವರಿಯಲ್ಲಿ ಲೋಕಾರ್ಪಣೆಗೊಂಡಿದ್ದ ಪರಶುರಾಮ ಥೀಮ್‌ ಪಾರ್ಕ್‌ 2023ರ ಅಕ್ಟೋಬರ್‌ ಹೊತ್ತಿಗೆ ಸಂಪೂರ್ಣ ಬಂದ್‌ ಆಗಿತ್ತು. ಉಡುಪಿ ಜಿಲ್ಲಾಡಳಿತ ಪರಶುರಾಮನ ಮೂರ್ತಿಯ ವಿನ್ಯಾಸ ಬದಲಾಯಿಸಿದ್ರೆ, ಥೀಮ್‌ ಪಾರ್ಕ್‌ ಪ್ರವಾಸಿಗರಿಗೆ ಮುಕ್ತವಾಗಿ ಇರ್ತಾ ಇತ್ತು.

Karkala Tourism : ರಾಜಕೀಯದ ಸ್ವಾರ್ಥಕ್ಕೆ ಪ್ರವಾಸೋದ್ಯಮ ಬಲಿ

ಹೌದು, ಕಾರ್ಕಳದ ಕಾಂಗ್ರೆಸ್‌ ಮುಖಂಡಾಗಿರುವ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಹಾಗೂ ಕೃಷ್ಣ ಶೆಟ್ಟಿ ಅವರು ಪರಶುರಾಮನ ಥೀಮ್‌ ಪಾರ್ಕ್‌ನಲ್ಲಿ ನಿರ್ಮಾಣಗೊಂಡಿದ್ದ ಪರಶುರಾಮನ ಮೂರ್ತಿಯನ್ನು ಫೈಬರ್‌ನಿಂದ ನಿರ್ಮಾಣ ಮಾಡಲಾಗಿದೆ ಅಂತಾ ಸುಳ್ಳು ಹೇಳಿಕೆಯನ್ನು ನೀಡಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಬಾರೀ ವಿವಾದವನ್ನೇ ಹುಟ್ಟು ಹಾಕಿತ್ತು.

ಕಾರ್ಕಳದ ಪರಶುರಾಮ ಥೀಮ್‌ ಪಾರ್ಕ್‌ ವಿಚಾರದಲ್ಲಿ ಕಾಂಗ್ರೆಸ್‌ ಸರಕಾರ ಹಾಗೂ ನಾಯಕರು ನಿಷ್ಠುರದ ನಿರ್ಧಾರಗಳನ್ನು ಕೈಗೊಂಡಿದ್ರು. ಒಂದೊಮ್ಮೆ ಕಾಂಗ್ರೆಸ್‌ ಸರಕಾರ ಈ ವಿವಾದದ ಕುರಿತು ಪ್ರತ್ಯೇಕ ತನಿಖಾ ತಂಡ ರಚಿಸಿ ತನಿಖೆ ನಡೆಸಿದ್ರೆ ಸತ್ಯಾಂತ ಯಾವತ್ತೋ ಹೊರ ಬರುತ್ತಿತ್ತು.

ಪರಶುರಾಮನ ಮೂರ್ತಿ ಫೈಬರ್‌ ಅಲ್ಲಾ ಅನ್ನೋದು ಬಯಲಾಗ್ತಾ ಇತ್ತು. ಆದ್ರೆ ಕಾಂಗ್ರೆಸ್‌ ನಾಯಕರು ಈ ವಿಚಾರವನ್ನು ರಾಜಕೀಯದ ಅಸ್ತ್ರವನ್ನಾಗಿಸಿಕೊಂಡಿದ್ದೇ ಕಾರ್ಕಳದ ಪ್ರವಾಸೋದ್ಯಮಕ್ಕೆ ಕೊಡಲಿಯೇಟು ಕೊಟ್ಟಿದೆ.

ಪರಶುರಾಮನ ಮೂರ್ತಿ ಪೈಬರ್‌ ನಿಂದ ಮಾಡಲಾಗಿದೆಯೇ ? ಅನ್ನುವ ಗೊಂದಲ ಎರಡು ವರ್ಷಗಳನ್ನೇ ಹಾಳು ಮಾಡಿದೆ. ಒಂದೊಮ್ಮೆ ಮೂರ್ತಿಯ ಬಗ್ಗೆ ತನಿಖೆ ನಡೆದು ಫೈಬರ್‌ ಮೂರ್ತಿ ಅಲ್ಲಾ ಅನ್ನೋದು ಸಾಬೀತಾಗಿದ್ರೆ ಥೀಮ್‌ ಪಾರ್ಕ್‌ ಪ್ರವಾಸಿಗರಿಗೆ ಮುಕ್ತವಾಗಿರುತ್ತಿತ್ತು.

Karkala Tourism : ಕಾರ್ಕಳದ ಪ್ರವಾಸೋದ್ಯಮಕ್ಕೆ ಪೆಟ್ಟು ಕೊಟ್ಟ ಮೂರ್ತಿ ವಿವಾದ

ಪರಶುರಾಮ ಥೀಮ್‌ ಪಾರ್ಕ ನಿರ್ಮಾಣಗೊಳ್ಳುತ್ತಲೇ ಕಾರ್ಕಳಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಕರ್ನಾಟಕ ಮಾತ್ರವಲ್ಲ, ದೇಶದ ಮೂಲೆ ಮೂಲೆಗಳಿಂದಲೂ ಪರಶುರಾಮನನ್ನು ನೋಡೋದಕ್ಕೆ ಜನಸಾಗರವೇ ಕಾರ್ಕಳದತ್ತ ಮುಖಮಾಡಿತ್ತು. ಪರಶುರಾಮನ ಥೀಮ್‌ ಪಾರ್ಕ್‌ನಲ್ಲಿ ಒಂದಿಷ್ಟು ಮಂದಿಗೆ ಉದ್ಯೋಗವೂ ದೊರೆತಿತ್ತು.

ಪರಶುರಾಮನ ಥೀಮ್‌ ಪಾರ್ಕ್‌ ಸುತ್ತಮುತ್ತಲೂ ಜನರು ಜಮೀನು ಖರೀದಿಸಿ ಅಂಗಡಿ ಮುಂಗಟ್ಟುಗಳನ್ನು ಆರಂಭಿಸಿದ್ದರು. ಹೋಟೆಲ್‌, ಲಾಡ್ಜ್‌ ನಿರ್ಮಾಣದ ಕಡೆಗೂ ಜನರು ಮನಸ್ಸು ಮಾಡಿದ್ದರು. ಟ್ಯಾಕ್ಸಿ, ರಿಕ್ಷಾ ಚಾಲಕರಿಗೂ, ಬೀದಿ ಬದಿ ವ್ಯಾಪಾರಿಗಳಿಗೂ ಹೊಸ ಅವಕಾಶ ಸಿಗ್ತಾ ಇತ್ತು.

ಪರಶುರಾಮನನ್ನು ನೋಡೋದಕ್ಕೆ ಬರ್ತಾ ಇದ್ದ ಜನರು, ಕಾರ್ಕಳದ ಇತರ ಪ್ರವಾಸಿ ತಾಣಗಳಲ್ಲಿ ವಿಹರಿಸ್ತಾ ಇದ್ರು. ಈ ಮೂಲಕ ಕಾರ್ಕಳಕ್ಕೆ ಕಾರ್ಕಳವೇ ಅಭಿವೃದ್ದಿ ಆಗ್ತಾ ಇತ್ತು.

ಇಷ್ಟೇ ಅಲ್ಲಾ ದೂರದ ಊರುಗಳಿಂದ ಬರುತ್ತಿದ್ದ ಪ್ರವಾಸಿಗರು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳನ್ನೂ ಕಣ್ತುಂಬಿಕೊಳ್ಳುತ್ತಿದ್ದರು.

ಆದರೆ ಕಳೆದ ಎರಡು ವರ್ಷಗಳಿಂದಲೂ ಕಾರ್ಕಳದ ಪ್ರವಾಸೋದ್ಯಮವೇ ಸ್ತಬ್ದವಾಗುವಂತೆ ಮಾಡಿತ್ತು. ಕಳೆದ ಎರಡು ವರ್ಪಗಳಿಂದಲೂ ಕಾರ್ಕಳಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ.

ಇದನ್ನೂ ಓದಿ : ಕಾರ್ಕಳ ಪರಶುರಾಮನ ಮೂರ್ತಿ ಹಿತ್ತಾಳೆ, ಫೈಬರ್‌ ಅಂದವರಿಗೆ ಹಿನ್ನೆಡೆ : ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

ಪರಶುರಾಮನ ಮೂರ್ತಿ ವಿವಾದ ಇದೀಗ ಸುಖಾಂತ್ಯ ಕಂಡಿದೆ. ಪರಶುರಾಮನ ಮೂರ್ತಿ ಫೈಬರ್‌ ಅಲ್ಲಾ ಅನ್ನೋದು ಪೊಲೀಸರ ತನಿಖೆಯಿಂದ ಸಾಬೀತಾಗಿದ್ದು, ಮತ್ತೆ ಪರಶುರಾಮನ ಮೂರ್ತಿ ಪುನರ್ ನಿರ್ಮಾಣ ಆಗುವ ಸಾಧ್ಯತೆಯಿದೆ.

ಕಾರ್ಕಳ ಕೇವಲ ಐತಿಹಾಸಿಕ ಮತ್ತು ಧಾರ್ಮಿಕ ತಾಣವಾಗಿರದೆ, ತನ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೈಸರ್ಗಿಕ ಸೊಬಗನ್ನೂ ಒಳಗೊಂಡಿದೆ.

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನೆಲೆಸಿರುವ ಕಾರ್ಕಳ ಹಚ್ಚ ಹಸಿರಿನ ಪರಿಸರ, ಬೆಟ್ಟಗುಡ್ಡಗಳು ಮತ್ತು ಪ್ರಶಾಂತ ವಾತಾವರಣದಿಂದ ಕೂಡಿದೆ. ಇದರಿಂದಾಗಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ.

Karkala Tourism : ಕಾರ್ಕಳದ ಪ್ರಮುಖ ಪ್ರವಾಸಿ ತಾಣಗಳು

ಗೊಮ್ಮಟೇಶ್ವರ ಪ್ರತಿಮೆ (ಬಾಹುಬಲಿ ಪ್ರತಿಮೆ) : ಇದು ಕಾರ್ಕಳದ ಅತ್ಯಂತ ಪ್ರಮುಖ ಆಕರ್ಷಣೆಯಾಗಿದ್ದು, 42 ಅಡಿ ಎತ್ತರದ ಏಕಶಿಲಾ ಬಾಹುಬಲಿ ಪ್ರತಿಮೆಯಾಗಿದೆ.

ಇದು ಜೈನರ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು, ಪ್ರತಿ 12 ವರ್ಷಗಳಿಗೊಮ್ಮೆ ಇಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತದೆ.

ಚತುರ್ಮುಖ ಬಸದಿ: 16ನೇ ಶತಮಾನದಲ್ಲಿ ನಿರ್ಮಿಸಲಾದ ಈ ಜೈನ ಬಸದಿಯು ತನ್ನ ವಿಶಿಷ್ಟ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇದು ನಾಲ್ಕು ದಿಕ್ಕುಗಳಿಗೂ ತೆರೆದುಕೊಳ್ಳುವ ಬಸದಿಯಾಗಿದ್ದು, 108 ಕಲ್ಲಿನ ಕಂಬಗಳನ್ನು ಹೊಂದಿದೆ.

ಇದನ್ನೂ ಓದಿ : ಕಾರ್ಕಳ ಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿ ಪೂರ್ಣಗೊಳಿಸಲು ಹೈಕೋರ್ಟ್‌ ಆದೇಶ 

ಅನಂತಪದ್ಮನಾಭ ದೇವಾಲಯ (ಪಡುತಿರುಪತಿ): ಇದು ಕಾರ್ಕಳದಲ್ಲಿರುವ ಪ್ರಮುಖ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.

ಶ್ರೀ ವೆಂಕಟರಮಣ ದೇವಾಲಯ: ಇದು ಕೂಡ ಕಾರ್ಕಳದ ಇನ್ನೊಂದು ಪ್ರಮುಖ ಹಿಂದೂ ದೇವಾಲಯವಾಗಿದೆ.

ಸಂತ ಲಾರೆನ್ಸ್ ಬೆಸಿಲಿಕಾ (ಅತ್ತೂರು ಚರ್ಚ್): ಇದು ಕ್ರಿಶ್ಚಿಯನ್ನರ ಪ್ರಮುಖ ಯಾತ್ರಾ ಸ್ಥಳವಾಗಿದೆ ಮತ್ತು ಇಲ್ಲಿ ಹಲವು ಪವಾಡಗಳು ನಡೆದಿವೆ ಎಂದು ನಂಬಲಾಗುತ್ತದೆ.

ಅನೆಕೆರೆ ಕೆರೆ: 13ನೇ ಶತಮಾನದಲ್ಲಿ ರಾಜ ಪಾಂಡ್ಯದೇವನಿಂದ ನಿರ್ಮಿಸಲ್ಪಟ್ಟ ಐತಿಹಾಸಿಕ ಮತ್ತು ಸುಂದರ ಕೆರೆ ಇದಾಗಿದೆ.

ರಾಮಸಮುದ್ರ ಕೆರೆ: ರಾಮನಾಥ ರಾಜನ ನೆನಪಿಗಾಗಿ ನಿರ್ಮಿಸಲಾದ ಇನ್ನೊಂದು ಸುಂದರ ಕೆರೆ.

ಪರಶುರಾಮ ಥೀಮ್ ಪಾರ್ಕ್, ಬೈಲೂರು: ಕಳೆದ ಎರಡು ವರ್ಷಗಳ ಹಿಂದೆ ನಿರ್ಮಿಸಲಾದ ಈ ಥೀಮ್ ಪಾರ್ಕ್ ಪ್ರವಾಸಿಗರ ಗಮನ ಸೆಳೆಯುತ್ತಿದೆ. (ಉಡುಪಿ ಜಿಲ್ಲಾಡಳಿತ ಸದ್ಯ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.)

ಪರ್ಪಲೆ ಗುಡ್ಡ: ಇಲ್ಲಿ ಪ್ರಾಚೀನ ಕಾಲದ, ಶಿಲಾಯುಗದ ಗುಹೆಗಳನ್ನು ಕಾಣಬಹುದು.

Karkala Tourism Effect parashurama Theme Park controversy in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories