ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ : ಸರಕಾರ ವಿರುದ್ದ ಮುಗಿಬೀಳಲು ಸಜ್ಜಾದ ಬಿಜೆಪಿ, ಜೆಡಿಎಸ್‌

Karnataka legislative Session Belgaum : ಬೆಳಗಾವಿ : ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಕಾವಿನ ಜೋರಾಗಿರುವ ಬೆನ್ನಲ್ಲೆ ಇಂದಿನಿಂದ ಬೆಳಗಾವಿ ಅಧಿವೇಶನ ಗೊಂಡಿದೆ. ಎಲ್ಲಾ ಆಂತರಿಕ ಕಲಹಗಳನ್ನು ಬದಿಗೊತ್ತಿ, ಬೆಳಗಾವಿಯ ಸುವರ್ಣ ಸೌಧದಲ್ಲಿ ತಮ್ಮ ಒಗ್ಗಟ್ಟು ಪ್ರದರ್ಶನಕ್ಕೆ ರಾಜ ಸರಕಾರ ಮುಂದಾಗಿದೆ.

ಕರ್ನಾಟಕದಲ್ಲಿ ಕಬ್ಬು ಹಾಗೂ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ, ನೆರೆ ಪರಿಹಾರ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು, ಪೊಲೀಸ್‌ ಇಲಾಖೆಯ ವೈಫಲ್ಯ ಸೇರಿದಂತೆ ನಾನಾ ವಿಷಯಗಳನ್ನು ಮುಂದಿಟ್ಟು ಸಿಎಂ ನೇತೃತ್ವದ ಸರಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಸನ್ನದ್ದವಾಗಿವೆ.

ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಒಟ್ಟು 20ಕ್ಕೂ ಅಧಿಕ ವಿಧೇಯಕಗಳನ್ನು ಮಂಡಿಸಿ ಕಾಂಗ್ರೆಸ್‌ ಸರಕಾರ ಸಜ್ಜಾಗಿದೆ. ಮತ್ತೊಂದೆಡೆಯಲ್ಲಿ ಕಬ್ಬು ಬೆಳೆಗಾರರು ಸೇರಿದಂತೆ ಒಟ್ಟು 89 ಸಂಘಟನೆಗಳು ರಾಜ್ಯ ಸರಕಾರ ವಿರುದ್ದ ಪ್ರತಿಭಟನೆ ನಡೆಸಲಿವೆ.

ಇಂದು ಆರಂಭಗೊಂಡಿರುವ ಬೆಳಗಾವಿಯ ಅಧಿವೇಶನಕ್ಕಾಗಿ ಬೆಳಗಾವಿಯ ಸುವರ್ಣ ಸೌಧಕ್ಕೆ ಬಿಗಿ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ. ಒಟ್ಟು 6000ಕ್ಕೂ ಅಧಿಕ ಪೊಲೀಸರನ್ನು ರಾಜ್ಯ ಸರಕಾರ ಭದ್ರತೆಗೆ ನಿಯೋಜಿಸಿದೆ.

Karnataka legislative Session Belgaum Winter session BJP, JDS ready to clash against the government

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories