ದ್ವಿಚಕ್ರ ವಾಹನ ಪ್ರಯಾಣಿಕರಿಗೆ ಗುಡ್​​ನ್ಯೂಸ್​ : ನೈಸ್​ ರಸ್ತೆಗಳಲ್ಲಿ ಶೀಘ್ರದಲ್ಲೇ ಟೋಲ್​ ರದ್ದು

ಬೆಂಗಳೂರು ಹೊರವಲಯದ ನೈಸ್​ ರಸ್ತೆಯಲ್ಲಿ ಮಾತ್ರ ದ್ವಿಚಕ್ರ ವಾಹನಗಳೂ ಟೋಲ್​ ಹಣ ಪಾವತಿಸಬೇಕಿತ್ತು. ಆದರೆ ಇದೀಗ ಶೀಘ್ರದಲ್ಲಿಯೇ ಈ ನಿಯಮ ಬದಲಾವಣೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಯಾವುದೇ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್​ ವಿಧಿಸುವ ನಿಯಮವಿಲ್ಲ. ಆದರೂ ಬೆಂಗಳೂರು ಹೊರವಲಯದ ನೈಸ್​ ರಸ್ತೆಯಲ್ಲಿ ಮಾತ್ರ ದ್ವಿಚಕ್ರ ವಾಹನಗಳೂ ಟೋಲ್​ ಹಣ ಪಾವತಿಸಬೇಕಿತ್ತು. ಆದರೆ ಇದೀಗ ಶೀಘ್ರದಲ್ಲಿಯೇ ಈ ನಿಯಮ ಬದಲಾವಣೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ವಿಧಾನಪರಿಷತ್​ನಲ್ಲಿ ಭರವಸೆ ನೀಡಿದ್ದಾರೆ.

ವಿಧಾನಪರಿಷತ್​ನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್​ ಸದಸ್ಯ ರಾಮೋಜಿ ಗೌಡ, ನೈಸ್​ ರಸ್ತೆಯಲ್ಲಿ ಟೋಲ್​ ದರ ಮಿತಿಮೀರಿದೆ. ಅಲ್ಲದೇ ದ್ವಿಚಕ್ರ ವಾಹನಗಳಿಗೂ ಇಲ್ಲಿ ಶುಲ್ಕ ವಿಧಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ನಂದಿ ಇನ್ಪ್ರಾಸ್ಟ್ರಕ್ಚರ್​ ಕಾರಿಡಾರ್​ ಎಂಟರ್​ಪ್ರೈಸಸ್​ ಲಿಮಿಟೆಡ್​ ಹಾಗೂ ಸರ್ಕಾರದ ನಡುವಿನ ಗುತ್ತಿಗೆ ಅವಧಿ ಮುಗಿಯುತ್ತಾ ಬಂದರೂ ಈ ಯೋಜನೆಗೆ ಭೂಮಿ ನೀಡಿದವರಿಗೆ ಇಂದಿಗೂ ಪರಿಹಾರ ದೊರಕಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶಾಲಾ ಬಿಸಿಯೂಟಕ್ಕೆ ಯಾವುದೇ ತಡೆಯಿಲ್ಲದೆ ಎಲ್‌ಪಿಜಿ ಪೂರೈಕೆ: ಜಿಲ್ಲಾಧಿಕಾರಿಗಳಿಗೆ ಸರ್ಕಾರದಿಂದ ಮಹತ್ವದ ಸೂಚನೆ

 

ಇದಕ್ಕೆ ಉತ್ತರಿಸಿದ ಸಚಿವ ಸತೀಶ್​ ಜಾರಕಿಹೊಳಿ, ಟೋಲ್​ ದರ ಪರಿಷ್ಕರಣೆಗೆ ಕಳೆದ ವರ್ಷದ ಸಂಪುಟ ಸಭೆಯ ನಿರ್ಧಾರದಂತೆ ಉಪಸಮಿತಿ ರಚಿಸಿದ್ದೇವೆ. ಎನ್‌ಐಸಿಇಎಲ್‌ ಕಂಪನಿಯು ರಸ್ತೆ ನಿರ್ಮಾಣಕ್ಕೆ ಮಾಡಿರುವ ಹೂಡಿಕೆ, ಬಳಕೆ ಮಾಡಿಕೊಂಡಿರುವ ಜಮೀನು, 2008ರಿಂದ ಈವರೆಗೆ ಟೋಲ್‌ ಮೂಲಕ ಸಂಗ್ರಹಿಸಿದ ಆದಾಯ ಸೇರಿದಂತೆ ಇತರೆ ಅಂಶಗಳ ಬಗ್ಗೆ ಪರಿಶೀಲಿಸಲು ಉಪ ಸಮಿತಿಯ ನೀಡಿರುವ ನಿರ್ದೇಶನದಂತೆ ಟೆಂಡರ್​ ಮೂಲಕ ಸಮಾಲೋಚಕರನ್ನು ನೇಮಿಸಲಾಗಿದೆ. ಶೀಘ್ರದಲ್ಲಿಯೇ ಟೋಲ್​ ರದ್ದತಿ ಹಾಗೂ ಪರಿಹಾರ ಹಂಚಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories