Chikkamagaluru : ಮದುವೆಗೆ ಒಂದು ದಿನದ ಮುನ್ನ ಹಸೆಮಣೆ ಏರಬೇಕಿದ್ದ ವಧು ಹೃದಯಾಘಾತದಿಂದ ನಿಧನ

Chikkamagaluru: ಮದುವೆ ಎಲ್ಲರ ಜೀವನದಲ್ಲಿಯೂ ಬರುವ ಮಹತ್ವದ ಘಟ್ಟ. ಭವಿಷ್ಯದ ಬದುಕಿನ ಬಗ್ಗೆ ನೂರಾರು ಕನಸುಗಳನ್ನು ಹೆಣೆದುಕೊಳ್ಳುವ ಸಮಯ. ಇಂತಹದ್ದೇ ಸಂಭ್ರಮದಲ್ಲಿ ಯುವತಿಯೊಬ್ಬರು ಹಸೆಮಣೆ ಏರುವ ಮುನ್ನವೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಚಿಕ್ಕಮಗಳೂರು(Chikkamagaluru) ಜಿಲ್ಲೆ ಗುರುವಾರ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಯುವತಿಯನ್ನು 24 ವರ್ಷದ ಶೃತಿ ಎಂದು ಗುರುತಿಸಲಾಗಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಾಳೆ (ಅ.31ರಂದು) ಮೃತ ಶೃತಿ ತರಿಕೆರೆಯ ದಿಲೀಪ್​ ಎಂಬವರ ಜೊತೆ ಹಸೆಮಣೆ ಏರಬೇಕಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಮದುವೆಯ ಸಂಭ್ರಮದಲ್ಲಿ ತಯಾರಿ ನಡೆಸುತ್ತಿದ್ದ ವೇಳೆಯಲ್ಲಿ ಶೃತಿಗೆ ಇದ್ದಕ್ಕಿದ್ದಂತೆ ಬಿಪಿ ಕುಸಿತವಾಗಿದೆ. ಅದೇ ಸಮಯಕ್ಕೆ ಹೃದಯಾಘಾತ ಸಂಭವಿಸಿ ಶೃತಿ ಮೃತಪಟ್ಟಿದ್ದಾರೆ.

Also Read: School Holiday : ಭಾನುವಾರವೂ ಮಕ್ಕಳಿಗೆ ಶಾಲೆ : ಪೋಷಕರಿಂದ ಬಾರೀ ಆಕ್ರೋಶ

ಮೃತ ಶೃತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಶೃತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ನಾಳೆ ಮದುವೆ ಮನೆಯ ಸಂಭ್ರಮದಲ್ಲಿ ಮಿಂದೇಳಬೇಕಿದ್ದ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಶುಭ ಕಾರ್ಯಕ್ರಮದ ಮನೆ ವಿಧಿಯಾಟಕ್ಕೆ ಸೂತಕದ ಮನೆಯಾಗಿ ಮಾರ್ಪಾಡಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories